
ಯಾದಗಿರಿ(ಏ. 08) ಸಾರಿಗೆ ಸಿಬ್ಬಂದಿ ಮುಷ್ಕರ ಜನರನ್ನು ಕಾಡಿದೆ. ಪ್ರಯಾಣಿಕರು ಹೈರಾಣವಾಗಿ ಹೋಗಿದ್ದಾರೆ. ಈ ಎಲ್ಲ ಸಮಸ್ಯೆಗಳ ಮಧ್ಯೆ ಕನ್ನಡಪ್ರಭ ಛಾಯಾಚಿತ್ರಗ್ರಾಹಕ ಮಾನವೀಯತೆ ಮೆರೆದು ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ಸಾರಿಗೆ ಮುಷ್ಕರದ ಪರಿಣಾಮ ಎರಡನೇ ದಿನವೂ ಜಿಲ್ಲೆಯಾದ್ಯಂತ ಸಾರಿಗೆ ಸಂಸ್ಥೆಗಳ ಬಸ್ ಸಂಚಾರ ಸ್ಥಗಿತವಾಗಿತ್ತು. ಕರ್ತವ್ಯಕ್ಕೆ ಎರಡನೇ ದಿನವೂ ಬಸ್ ಓಡಲಿಲ್ಲ.
ಸಾರಿಗೆ ನೌಕರರಿಗೆ ಸಿಎಂ ಮತ್ತೊಮ್ಮೆ ಮನವಿ
ಮಗುವಿನ ಚಿಕಿತ್ಸೆಗೆಂದು ರಾಯಚೂರಿಗೆ ತೆರಳಲು ಯಾದಗಿರಿ ನಗರದ ಕೇಂದ್ರ ಬಸ್ ನಿಲ್ದಾಣಕ್ಕೆ ಆಗಮಿಸಿದ ಪೋಷಕರು ಪರದಾಟ ನಡೆಸುತ್ತಿದ್ದ ದೃಶ್ಯ ಕನ್ನಡಪ್ರಭ ಮಂಜುನಾಥ್ ಬಿರಾದಾರ್ ಕಣ್ಣಿಗೆ ಬಿದ್ದಿದೆ. ಅನಾರೋಗ್ಯ ಪೀಡಿತ ಮಗುವಿನೊಂದಿಗೆ ಬಸ್ ನಿಲ್ದಾಣದಲ್ಲಿ ತಾಯಿ ಕಣ್ಣೀರು ಹಾಕಿದ್ದಾರೆ.
ಯಾದಗಿರಿ ಸಮೀಪದ ಹೊಸಳ್ಳಿ ಗ್ರಾಮದ ಸಾಬಮ್ಮ ತೊಂದರೆಗೆ ಸಿಲುಕಿದ್ದರು. ಸಾಬಮ್ಮ ನೆರವಿಗೆ ಮುಂದಾದ ಬಿರಾದರ್ ಪರ್ಯಾಯ ವಾಹನದ ಮೂಲಕ ರಾಯಚೂರಿಗೆ ಕಳುಹಿಸುವ ಏರ್ಪಾಟು ಮಾಡಿದ್ದಾರೆ.
ಮಗುವಿನ ಜೊತೆ ಕಣ್ಣೀರು ಹಾಕಿದ ತಾಯಿ ಹಾಗೂ ಮಗುವಿನ ಚಿಕ್ಕಪ್ಪನನ್ನು ಆಟೋ ಮೂಲಕ ರಾಯಚೂರಿನ ಮಕ್ಕಳ ತಜ್ಞ ಡಾ. ಮಂಜುನಾಥ್ ಅವರ ಆಸ್ಪತ್ರೆಗೆ ಕಳುಹಿಸಿದ್ದು ಮೆಚ್ಚುಗೆಗೆ ಪಾತ್ರವಾಗಿದ್ದಾರೆ.