'ತಮಿಳುನಾಡಲ್ಲಿ ಅಣ್ಣಾಮಲೈ ಗೆಲುವು ಖಚಿತ'

By Kannadaprabha News  |  First Published Apr 8, 2021, 4:17 PM IST

ತಮಿಳುನಾಡಿನಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯಲ್ಲಿ  ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಗೆಲುವು ಖಚಿತ ಎಂದು ಮುಖಂಡರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 


ಚಿಕ್ಕಮಗಳೂರು (ಏ.08): ತಮಿಳುನಾಡಿನ ಅರವಕುರಿಚಿ ಕ್ಷೇತ್ರದಿಂದ ಸ್ಪರ್ಧೆ ಮಾಡಿರುವ ಅಣ್ಣಾಮಲೈ ಅವರ ಗೆಲುವು ಖಚಿತ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

ಅಣ್ಣಾಮಲೈ ಅವರು ಜನನಾಯಕರಾಗಿ ರೂಪುಗೊಳ್ಳುತ್ತಿದ್ದಾರೆ. ಅವರ ಹುಟ್ಟೂರು ಅಲ್ಲೇ. ಅಲ್ಲಿಂದಲೇ ಸ್ಪರ್ಧೆ ಮಾಡುವುದಾಗಿ ಹೇಳಿದ್ದರು. ಜನಬೆಂಬಲ ಗಳಿಸುವಲ್ಲಿ ಯಶಸ್ವಿಯಾಗಿದ್ದೇವೆ. ಸಾಮಾಜಿಕ ಹಿನ್ನೆಲೆ ನೋಡಿದರೆ ಆ ಕ್ಷೇತ್ರದ ಗೆಲುವು ಸುಲುಭದ ತುತ್ತಲ್ಲಾ, ಆದರೂ ಗೆಲ್ಲುತ್ತಾರೆ ಎಂದು ಬುಧವಾರ ಸುದ್ದಿಗಾರರೊಂದಿಗೆ ಮಾತನಾಡುವಾಗ ಹೇಳಿದರು. ತಮಿಳುನಾಡಿನಲ್ಲಿ ಉತ್ತಮ ರೀತಿಯಲ್ಲಿ ಕೆಲಸ ಮಾಡಲಾಗಿದೆ. ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ ಎಂದರು.

Latest Videos

undefined

ಖಂಡನೀಯ:  ಎಡಪಂಥೀಯ ನಿಲುವು ಹಾಗೂ ಅದರಿದ ದು ರಣೆ ಪಡೆದ ನಕ್ಸಲೀಯರು ಛತ್ತೀಸ್‌ಗಡದಲ್ಲಿ 22 ಮಂದಿ ಸೈನಿಕರನ್ನು ಹತ್ಯೆ ಮಾಡಿದರು. ಸೈನ್ಯಕ್ಕೆ ಶತ್ರು ಆದವರು ದೇಶಕ್ಕೆ ಶತ್ರು. ಯಾರು ಸಂವಿಧಾನ ಒಪ್ಪುವುದಿಲ್ಲವೋ, ಬ್ಯಾಲೆಟ್‌ ಮೇಲೆ ನಂಬಿಕೆ ಇಡುವುದಿಲ್ಲ. ಬುಲೆಟ್‌ ಮೇಲೆ ನಂಬಿಕೆ ಇರುವವರು ಸಂವಿಧಾನವನ್ನು ಒಪ್ಪುವುದಿಲ್ಲ ಎಂದರು.

'ಮೂರೂ ಕ್ಷೇತ್ರಗಳಲ್ಲಿ ಬಿಜೆಪಿ ಜಯ ನಿಶ್ಚಿತ' ...

ನಾನು ಗೌರಿ ಎಂದು ಮುಂಬತ್ತಿ ಹಿಡಿದವರು, 22 ಜನ ಸೈನಿಕರು ಸತ್ತಾಗ ಯಾಕೆ ಮುಂಬತ್ತಿ ಹಿಡಿದು ಬರಲಿಲ್ಲ. ಕಣ್ಣಲ್ಲಿ ನೀರು ಬರಲಿಲ್ಲ. ಇದು, ಎಡಪಂಥೀಯ ಭಯೋತ್ಪಾದನೆ, ಇದರ ಪರವಾಗಿ ನಿಮ್ಮ ನಿಲುವಾ? ಈ ಬಗ್ಗೆ ಗಂಭೀರವಾಗಿ ಆಲೋಚನೆ ಮಾಡಬೇಕಾಗಿದೆ. ಇದಕ್ಕೆ ಜನಜಾಗೃತಿ ಮೂಡಿಸಲಾಗುವುದು. ಸಾರ್ವಜನಿಕ ಕ್ಷೇತ್ರದಲ್ಲಿರುವವರಿಗೆ ವೈಯಕ್ತಿಕ ದೌರ್ಬಲ್ಯ ಇರಬಾರದು. ಈ ವಿಷಯದಲ್ಲಿ ರಾಜಕಾರಣ ಸರಿಯಲ್ಲ ಎಂದರು.

ಯತ್ನಾಳ್‌ ಸ್ವಭಾವದ ಬಗ್ಗೆ 2018ರಲ್ಲಿ ಟಿಕೆಟ್‌ ನೀಡುವ ಸಂದರ್ಭದಲ್ಲಿ ಚರ್ಚೆಯಾದಾಗ ಸಿಎಂ ಅವರ ಪರವಾಗಿ ಮಾತನಾಡಿದ್ದರು. ಅವರೊಂದಿಗೆ ಸಿ.ಎಂ. ಅವರ ವ್ಯಕ್ತಿಗತ ಸಂಬಂಧ ಚೆನ್ನಾಗಿದೆ. ಅದನ್ನು ಅವರೇ ನಿಭಾಯಿಸುತ್ತಾರೆ ಎಂದು ಹೇಳಿದರು.

click me!