ಕೊರೋನಾ ಪಾಜಿಟಿವ್ ಇಲ್ಲದೇ ಇರುವ ಪ್ರಯುಕ್ತ ಚಿತ್ರದುರ್ಗ ಜಿಲ್ಲೆಯನ್ನು ಹಸಿರುವಲಯವನ್ನಾಗಿ ಘೋಷಿಸಿ ವಿನಾಯಿತಿ ತೋರಲಾಗಿದ್ದು ಸೋಮವಾರದಿಂದ ಬಸ್ಸುಗಳು ಹಾಗೂ ಆಟೋ ಸಂಚಾರಕ್ಕೆ ಜಿಲ್ಲಾ ವ್ಯಾಪ್ತಿಯಲ್ಲಿಯೇ ಅವಕಾಶ ಕಲ್ಪಿಸಲಾಗಿದೆ.
ಚಿತ್ರದುರ್ಗ(ಮೇ.03): ಕೊರೋನಾ ಪಾಜಿಟಿವ್ ಇಲ್ಲದೇ ಇರುವ ಪ್ರಯುಕ್ತ ಚಿತ್ರದುರ್ಗ ಜಿಲ್ಲೆಯನ್ನು ಹಸಿರುವಲಯವನ್ನಾಗಿ ಘೋಷಿಸಿ ವಿನಾಯಿತಿ ತೋರಲಾಗಿದ್ದು ಸೋಮವಾರದಿಂದ ಬಸ್ಸುಗಳು ಹಾಗೂ ಆಟೋ ಸಂಚಾರಕ್ಕೆ ಜಿಲ್ಲಾ ವ್ಯಾಪ್ತಿಯಲ್ಲಿಯೇ ಅವಕಾಶ ಕಲ್ಪಿಸಲಾಗಿದೆ. ಶೇ.50 ರಷ್ಟುಪ್ರಯಾಣಿಕರ ಕರೆದೊಯ್ಯಲು ಅವಕಾಶ ನೀಡಿರುವುದರಿಂದ ಖಾಸಗಿ ಬಸ್ಸು ಮಾಲೀಕರು ಹಿಂಜರಿಕೆ ವ್ಯಕ್ತಪಡಿಸುತ್ತಿದ್ದಾರೆ. ಆದರೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ಸುಗಳು ಓಡಾಟ ಆರಂಭಿಸಲಿವೆ.
ಚಿತ್ರದುರ್ಗ ಜಿಲ್ಲೆ ಅರೆ ರಾಷ್ಟ್ರೀಕರಣ ಮಾರ್ಗವಾಗಿದ್ದು ಇಲ್ಲಿ ಖಾಸಗಿ ಬಸ್ಸುಗಳದ್ದೇ ದರ್ಬಾರು. ಜಿಲ್ಲೆಗಿಂತ ಮಿಗಿಲಾಗಿ ಅಂತರಜಿಲ್ಲಾ ರಹದಾರಿಯನ್ನು ಬಸ್ಸುಗಳು ಹೆಚ್ಚಾಗಿ ಪಡೆದಿದ್ದು ಜಿಲ್ಲೆಯ ಒಳಗೆ ಓಡಾಡುವ ಬಸ್ಸುಗಳ ಸಂಖ್ಯೆ ಅತಿ ವಿರಳ. ಚಿಕ್ಕಮಗಳೂರು, ಬಳ್ಳಾರಿ, ತುಮಕೂರು ಜಿಲ್ಲೆಯ ಪಾವಗಡ ಕಡೆ ಹೆಚ್ಚು ಬಸ್ಸುಗಳು ಸಂಚರಿಸುತ್ತವೆ. ಎಲ್ಲವೂ ಅಂತರ್ ಜಿಲ್ಲಾ ವ್ಯಾಪ್ತಿಗೆ ಒಳಪಡುವುದರಿಂದ ಬಸ್ಸುಗಳು ಅರ್ಧ ದಾರಿಯಲ್ಲೇ ವಾಪಸ್ಸು ಬರಬೇಕಾಗುತ್ತದೆ. ಎಲ್ಲಿಗೆ ಹೋದರೂ 40 ರಿಂದ 60 ಕಿಮೀ ದಾರಿ ಮಾತ್ರ ಕ್ರಮಿಸಬೇಕಾಗಿದೆ.
ಸೆರೆಂಡರ್ ಮಾಡಲಾಗಿದೆ:
ಜಿಲ್ಲೆಯಲ್ಲಿರುವ 280 ಕ್ಕೂ ಹೆಚ್ಚು ಬಸ್ಸುಗಳನ್ನು ಈಗಾಗಲೇ ಪ್ರಾದೇಶಿಕ ಸಾರಿಗೆ ಇಲಾಖೆಗೆ ಸೆರೆಂಡರ್ ಮಾಡಲಾಗಿದೆ. ಮನೆ ಬಾಗಿಲಲ್ಲಿ ನಿಲ್ಲಿಸಿಕೊಂಡರೆ ತೆರಿಗೆ ಕಟ್ಟಬೇಕಾಗುತ್ತದೆ ಎಂಬ ಕಾರಣಕ್ಕೆ ಖಾಸಗಿ ಬಸ್ಸುಗಳ ಮಾಲೀಕರು ಈ ಕ್ರಮಕ್ಕೆ ಮುಂದಾಗಿದ್ದರು. ಸೆರೆಂಡರ್ ಮಾಡಿದರೆ ಮೂರು ತಿಂಗಳ ತೆರಿಗೆಯಿಂದ ತಪ್ಪಿಸಿಕೊಳ್ಳಬಹುದು. ಕನಿಷ್ಠ ಎರಡು ತಿಂಗಳು ನಿಲ್ಲಿಸಿಕೊಂಡರೆ ಅಷ್ಟುದಿನದ ತೆರಿಗೆ ಉಳಿತಾಯ ಮಾಡಿದಂತಾಗುತ್ತದೆ ಎಂಬ ಭಾವನೆ ಅವರದ್ದು. ಹಾಗೊಂದು ವೇಳೆ ಓಡಿಸಬೇಕೆಂದು ಕೊಂಡರೂ ಸೆರೆಂಡರ್ ಮಾಡಿರುವ ಬಸ್ಸುಗಳ ಮತ್ತೆ ವಶಕ್ಕೆ ತೆಗೆದುಕೊಳ್ಳಲು ಕನಿಷ್ಠ ಮೂರ್ನಾಲ್ಕು ದಿನ ಸಮಯ ಬೇಕಾಗುತ್ತದೆ.
ಲಾಕ್‌ಡೌನ್ ಉಲ್ಲಂಘನೆ: 24 ಗ್ರಾಪಂ ಸದಸ್ಯರು ಸಾಮೂಹಿಕ ರಾಜೀನಾಮೆ
ಕೊರೊನಾ ಸೋಂಕು ವ್ಯಾಪಿಸುವುದಕ್ಕಿಂತ ಮೊದಲು ಖಾಸಗಿ ಬಸ್ಸುಗಳ ಮಾಲೀಕರು ಹೈರಾಣವಾಗಿದ್ದರು. ಡೀಸೆಲ್ ಬೆಲೆ ಹೆಚ್ಚಳದ ಕಾರಣಕ್ಕೆ ಕಂತು ಕಟ್ಟಲು ಸಾಧ್ಯವಾಗುತ್ತಿಲ್ಲವೆಂದು ಗೊಣಗುತ್ತಿದ್ದರು. ಈಗ ಬಸ್‌ಗಳಲ್ಲಿ ಶೇ 50 ರಷ್ಟುಜನರಿಗೆ ಜಿಲ್ಲೆಯೊಳಗಿನ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಖಾಸಗಿ ಬಸ್ಸುಗಳ ಹತ್ತುವ ಜನರ ನಿಯಂತ್ರಿಸುವುದು ಕಷ್ಚವಾಗುತ್ತದೆ. ಪ್ರತಿ ಬಸ್ಸಿಗೂ 25 ಮಂದಿಯನ್ನು ಹತ್ತಿಸಿಕೊಂಡು ಹೋದರೆ ಯಾವುದೇ ಕಾರಣದಿಂದ ಮಾಲೀಕರಿಗೆ ಲಾಭ ತರುವುದಿಲ್ಲ. ಡೀಸೆಲ್ ಕೂಡ ವರ್ಕ ಔಟ್ ಆಗುವುದಿಲ್ಲವೆನ್ನುತ್ತಾರೆ ಖಾಸಗಿ ಬಸ್ಸುಗಳ ಮಾಲೀಕರ ಸಂಘದ ಕಾರ್ಯದರ್ಶಿ ಜಿ.ಬಿ.ಶೇಖರ್ .
ಸರಕು ಸಾಗಣೆಗೆ ಅನುಮತಿ:
ಕಟ್ಟಡ ಕಾಮಗಾರಿಗೆ ಅಗತ್ಯವಿರುವ ಎಲ್ಲಾ ಸರಕು, ಸಿಮೆಂಟ್, ಸ್ಟೀಲ್, ಜಲ್ಲಿ, ಟೈಲ್ಸ್, ಪೈಂಟ್ಸ್, ಇಟ್ಟಿಗೆ ಸೇರಿದಂತೆ ಇತರೆ ಸರಕು ಸಾಗಣೆಗೆ ಅನುಮತಿ ಇದೆ. ಆದರೆ ಚಾಲನಾ ಪರವಾನಗಿ ಹೊಂದಿರುವ ಇಬ್ಬರು ಚಾಲಕರು ಹಾಗೂ ಒಬ್ಬ ಸಹಾಯಕನಿಗೆ ಮಾತ್ರ ಅವಕಾಶ. ಟ್ರಕ್ ರಿಪೇರಿ ಅಂಗಡಿಗಳು ಕೊಡ ತೆರೆಯಬಹುದು.
ನಿತ್ಯ ಬಳಕೆ ಅಗತ್ಯ ವಸ್ತುಗಳು, ಕಿರಾಣಿ ಅಂಗಡಿ, ಹಣ್ಣು ಮತ್ತು ತರಕಾರಿ, ಹಾಲು ಮತ್ತು ಹಾಲಿನ ಉತ್ಪನ್ನ, ಕೋಳಿ, ಮೀನು, ಮಾಂಸದ ಅಂಗಡಿ, ಜಾನುವಾರುಗಳಿಗೆ ಆಹಾರ, ಡ್ರೈ ಫ್ರೂಟ್ಸ್, ಜ್ಯೂಸ್ ಹಾಗೂ ಐಸ್ ಕ್ರೀಂಗಳ ಪಾರ್ಸೆಲ್‌ಗೆ ಅವಕಾಶವಿದೆ.
ಸುಧಾಕರ್ ಬಣ ತೊರೆದು ಜೆಡಿಎಸ್ ಸೇರಿದ ಬಿಜೆಪಿ ಮುಖಂಡ
ಹೋಟೆಲ್, ಡಾಬಾ ಹಾಗೂ ರೆಸ್ಟೊರೆಂಟ್‌ಗಳಲ್ಲಿ ಪಾರ್ಸೆಲ್‌ಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಆಗಾಗ ಕೈತೊಳೆಯುತ್ತಿರಬೇಕು. ಸ್ವಚ್ಛತೆಗೆ ಆದ್ಯತೆ ನೀಡಬೇಕು. 5ಕ್ಕಿಂತ ಹೆಚ್ಚು ಜನ ಒಂದೆಡೆ ಸೇರುವಂತಿಲ್ಲ ಎಂಬೆಲ್ಲಾ ನಿಬಂಧನೆಗಳ ಹಸಿರು ವಲಯದಲ್ಲಿ ವಿಧಿಸಲಾಗಿದೆ.