ವಿವಿ ಸಾಗರ ನೀರು: ಬಿಜೆಪಿ ಹೇಳಿಕೆಗೆ ಕಾಂಗ್ರೆಸ್ ಗರಂ

By Kannadaprabha News  |  First Published May 3, 2020, 2:13 PM IST

ವಿವಿ ಸಾಗರ ಜಲಾಶಯದಿಂದ ವೇದಾವತಿ ನದಿಗೆ ನೀರು ಹರಿಸುವುದರ ಕುರಿತಂತೆ ಶಾಸಕ ಟಿ.ರಘುಮೂರ್ತಿ ಅವರ ಕಾರ್ಯವೈಖರಿ ಬಗ್ಗೆ ವ್ಯತಿರಿಕ್ತ ಹೇಳಿಕೆ ನೀಡಿರುವ ಬಿಜೆಪಿ ಮಂಡಲಾಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್‌ ಬಗ್ಗೆ ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಪಿ.ಪ್ರಕಾಶ್‌ಮೂರ್ತಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.


ಚಿತ್ರದುರ್ಗ(ಮೇ.03): ವಿವಿ ಸಾಗರ ಜಲಾಶಯದಿಂದ ವೇದಾವತಿ ನದಿಗೆ ನೀರು ಹರಿಸುವುದರ ಕುರಿತಂತೆ ಶಾಸಕ ಟಿ.ರಘುಮೂರ್ತಿ ಅವರ ಕಾರ್ಯವೈಖರಿ ಬಗ್ಗೆ ವ್ಯತಿರಿಕ್ತ ಹೇಳಿಕೆ ನೀಡಿರುವ ಬಿಜೆಪಿ ಮಂಡಲಾಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್‌ ಬಗ್ಗೆ ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಪಿ.ಪ್ರಕಾಶ್‌ಮೂರ್ತಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ರಾಜಕೀಯ ಕ್ಷೇತ್ರದಲ್ಲಿ ದಲಿತ ಸಮೂಹದ ಯುವಕ ಬೆಳೆಯಲಿ ಎಂಬ ಕಾರಣಕ್ಕೆ ರಘುಮೂರ್ತಿ ಅವರು ಸೂರೆನಹಳ್ಳಿ ಶ್ರೀನಿವಾಸ್‌ ಅವರ ಪತ್ನಿ ಚಂದ್ರಿಕಾಗೆ ಟಿಕೆಟ್‌ ನೀಡಿ ಜಾಜೂರು ಕ್ಷೇತ್ರದಿಂದ ಗೆಲ್ಲಿಸಿಕೊಂಡು ಜಿಲ್ಲಾ ಪಂಚಾಯಿತಿ ಸದಸ್ಯರನ್ನಾಗಿ ಮಾಡಿದರು. ರಾಜಕಾರಣದಲ್ಲಿ ಕನಿಷ್ಠ ಕೃತಜ್ಞತೆ ತೋರುವುದ ಶ್ರೀನಿವಾಸ್‌ ರೂಢಿಸಿಕೊಳ್ಳಲಿ ಎಂದರು.

Latest Videos

undefined

ಲಾಕ್‌ಡೌನ್ ಉಲ್ಲಂಘನೆ: 24 ಗ್ರಾಪಂ ಸದಸ್ಯರು ಸಾಮೂಹಿಕ ರಾಜೀನಾಮೆ

ಪ್ರಸ್ತುತ ಮುಖ್ಯಮಂತ್ರಿ, ಜಲಸಂಪನ್ಮೂಲ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಕಾನೂನಿನ ಪ್ರಕಾರ ಚಳ್ಳಕೆರೆ ಕ್ಷೇತ್ರಕ್ಕೆ 0.25 ಟಿಎಂಸಿ ನೀರನ್ನು ಬಿಡಲು ಆದೇಶ ನೀಡಿದ್ದು, ಶಾಸಕ ಟಿ.ರಘುಮೂರ್ತಿಯವರೂ ಸಹ ಪ್ರತಿಯೊಂದು ಹಂತದಲ್ಲೂ ಸಚಿವರು ಹಾಗೂ ಇಲಾಖೆ ಅಧಿಕಾರಿಗಳನ್ನು ಭೇಟಿ ಮಾಡಿ ನೀರು ಹರಿಸಲು ತಮ್ಮ ಬಹುಪಾಲದ ಸಮಯವನ್ನು ಮೀಸಲಿಟ್ಟಿದ್ದರು. ಚಳ್ಳಕೆರೆ ಕ್ಷೇತ್ರದ ಲಕ್ಷಾಂತರ ಜನತೆ ಕುಡಿಯುವ ನೀರಿನ ಕೊರತೆ ಎದುರಿಸಬಾರದು ಎಂಬ ದೂರದೃಷ್ಟಿಯಿಂದ ಈ ಕಾರ್ಯ ಮಾಡಿದ್ಧಾರೆ. ಆದರೆ ಯಾವುದನ್ನೂ ಪರಿಗಣಿಸದೆ ಕೇವಲ ಪ್ರಚಾರ ಪಡೆಯಲು ಮಾಧ್ಯಮಗಳ ಮೂಲಕ ಶಾಸಕರ ಕಾರ್ಯವನ್ನು ಟೀಕಿಸುವುದು ಸರಿಯಲ್ಲವೆಂದಿದ್ದಾರೆ.

ಸುಧಾಕರ್ ಬಣ ತೊರೆದು ಜೆಡಿಎಸ್‌ ಸೇರಿದ ಬಿಜೆಪಿ ಮುಖಂಡ

ಬ್ಲಾಕ್‌ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪಿ.ತಿಪ್ಪೇಸ್ವಾಮಿ, ಹಿರಿಯ ಮುಖಂಡ ಸಿ.ಟಿ.ಶ್ರೀನಿವಾಸ್‌, ಟಿ.ಪ್ರಭುದೇವ್‌, ಜಿಲ್ಲಾ ಕಾರ್ಯದರ್ಶಿ ಆರ್‌.ಪ್ರಸನ್ನಕುಮಾರ್‌, ಎಚ್‌.ಎಸ್‌.ಸೈಯದ್‌, ಪರಶುರಾಮಪುರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕಿರಣ್‌ಶಂಕರ್‌ ನಗರಸಭಾ ಸದಸ್ಯ ಕೆ.ವೀರಭದ್ರಪ್ಪ, ಭರಮಣ್ಣ, ಬೋರಣ್ಣ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

click me!