ನಾಳೆಯಿಂದ ಮದ್ಯದ ಅಂಗಡಿಗಳ ಪ್ರಾರಂಭ| ಗಿರಾಕಿಗೆ ಎಣ್ಣೆ ನೀಡಲು ಬಾರ್ ಮಾಲೀಕರ ಸಿದ್ಧತೆ| ಲಾಕ್‌ಡೌನ್ ಸ್ವಲ್ಪಮಟ್ಟಿಗೆ ಸಡಿಲಗೊಳಿಸಿದ್ದರಿಂದ ಮದ್ಯ ಮಾರಾಟಕ್ಕೆ ಷರತ್ತುಬದ್ಧ ಅನುಮತಿ ನೀಡಿದ ಸರ್ಕಾರ| ಮದ್ಯದ ಅಂಗಡಿಗಳಲ್ಲಿ ಕಟ್ಟು ನಿಟ್ಟಿನ ನಿಯಮಗಳನ್ನು ಪಾವತಿಸುವಂತೆ ಸೂಚನೆ|
ಗಂಗಾವತಿ(ಮೇ.03): ಕೊರೋನಾ ವೈರಸ್ ಹಾವಳಿಯನ್ನ ಹತೋಟಿಗೆ ತರಲು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಲಾಕ್‌ಡೌನ್ ಘೋಷಣೆ ಮಾಡಿದ್ದವು. ಹೀಗಾಗಿ ಕಳೆದ ಒಂದೂವರೆ ತಿಂಗಳಿನಿಂದ ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿತ್ತು.
ಇದೀಗ ಲಾಕ್‌ಡೌನ್ ಸ್ವಲ್ಪಮಟ್ಟಿಗೆ ಸಡಿಲಗೊಳಿಸಿದ್ದರಿಂದ ನಾಳೆಯಿಂದ(ಸೋಮವಾರ) ಮದ್ಯ ಮಾರಾಟಕ್ಕೆ ಸರ್ಕಾರ ಷರತ್ತುಬದ್ಧ ಅನುಮತಿ ನೀಡಿದೆ. ಈ ಹಿನ್ನಲೆ ಮದ್ಯದ ಅಂಗಡಿಗಳ ಮುಂದೆ ಎಣ್ಣೆ ಖರೀದಿಸುವರಿಗಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮಾಡಲು ಬಾರ್ ಮಾಲೀಕರು ಸಕಲ ವ್ಯವಸ್ಥೆಯನ್ನ ಮಾಡಿಕೊಳ್ಳುತ್ತಿದ್ದಾರೆ.
ಗುಜರಾತ್‌ನಲ್ಲಿ ಸಿಲುಕಿದ ಕೊಪ್ಪಳದ ಗುಜರಿ ವ್ಯಾಪಾರಿಗಳು: ತುತ್ತಿನ ಚೀಲ ತುಂಬಿಸಿಕೊಳ್ಳಲು ಪರದಾಟ
ಸಾಮಾಜಿಕ ಅಂತರ ನಿಯಮ ಪಾಲನೆಗಾಗಿ ಜನರು ಸಾಲಾಗಿ ನಿಲ್ಲುವುದಕ್ಕಾಗಿ ಬಾರ್ ಮಾಲೀಕರು ಬಿದರಿನಿಂದ ಅಂತರ ನಿರ್ಮಿಸಿದ್ದಾರೆ. ಅಬಕಾರಿ ಇಲಾಖೆ ಎಲ್ಲಾ ಮದ್ಯದ ಅಂಗಡಿಗಳಲ್ಲಿ ಕಟ್ಟು ನಿಟ್ಟಿನ ನಿಯಮಗಳನ್ನು ಪಾವತಿಸುವಂತೆ ಸೂಚನೆ ನೀಡಿದೆ. ಬಾರ್‌ನಲ್ಲಿ ಒಂದೇ ಬಾರಿಗೆ ಐದು ಮಂದಿಗೆ ಮಾತ್ರ ಅವಕಾಶ ಕಲ್ಪಿಸಿದೆ. ಅದು ಕೂಡ ಪಾರ್ಸೆಲ್ ಮಾತ್ರ. ಬಾರ್‌ನಲ್ಲಿ ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಹಾಗೂ ಸ್ಯಾನಿಟೈಸರ್ ಬಳಕೆ ಮಾಡಬೇಕು ಎಂದು ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.