ಚಾಮರಾಜನಗರದಲ್ಲಿ ಸದ್ದಿಲ್ಲದೆ ಕೆಎಸ್‌ಆರ್‌ಟಿಸಿ ಬಸ್ ಪ್ರಯಾಣ ದರ ಏರಿಕೆ: ಸರ್ಕಾರದ ವಿರುದ್ಧ ಆಕ್ರೋಶ

By Govindaraj S  |  First Published May 30, 2024, 9:12 PM IST

ಚಾಮರಾಜನಗರ ಮೈಸೂರು ಓಡಾಟ ಮಾಡುವ ಪ್ರಯಾಣಿಕರಿಗೆ ಕೆಎಸ್ಆರ್ ಟಿಸಿ ಬಿಗ್ ಶಾಕ್ ನೀಡಿದೆ. ಏಕಾಏಕಿ ನಾನ್ ಸ್ಟಾಪ್ ಬ್ರ್ಯಾಂಡ್ ಹೆಸರಲ್ಲಿ ಪ್ರಯಾಣ ದರ ಹೆಚ್ಚಿಸಿದೆ. ಇದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ಷೇಪ ವ್ಯಕ್ತವಾಗಿದೆ. 
 


ವರದಿ: ಪುಟ್ಟರಾಜು.ಆರ್. ಸಿ,  ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ.

ಚಾಮರಾಜನಗರ (ಮೇ.30): ಚಾಮರಾಜನಗರ ಮೈಸೂರು ಓಡಾಟ ಮಾಡುವ ಪ್ರಯಾಣಿಕರಿಗೆ ಕೆಎಸ್ಆರ್ ಟಿಸಿ ಬಿಗ್ ಶಾಕ್ ನೀಡಿದೆ. ಏಕಾಏಕಿ ನಾನ್ ಸ್ಟಾಪ್ ಬ್ರ್ಯಾಂಡ್ ಹೆಸರಲ್ಲಿ ಪ್ರಯಾಣ ದರ ಹೆಚ್ಚಿಸಿದೆ. ಇದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ಷೇಪ ವ್ಯಕ್ತವಾಗಿದೆ. ಚಾಮರಾಜನಗರ ಕೆಎಸ್ಆರ್ ಟಿಸಿ ನಿಗಮವೂ ಚಾಮರಾಜನಗರ ಮೈಸೂರು ನಡುವೆ ನಾನ್ ಸ್ಟಾಪ್ ಸೇವೆ ಆರಂಭಿಸಿದೆ. ತಡೆ ರಹಿತ ಸೇವೆ ಹಿನ್ನಲೆ ಟಿಕೆಟ್ ದರ ಕೂಡ ಹೆಚ್ಚಿಸಿದೆ. ನಾನ್ ಸ್ಟಾಪ್ ದರವನ್ನೂ 75 ರೂ ನಿಗದಿಪಡಿಸಿದೆ. ಇದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ಷೇಪ ವ್ಯಕ್ತವಾಗಿದೆ. ಹಿಂದೆ ಎಕ್ಸ್ ಪ್ರೆಸ್, ಲಿಮಿಟೆಡ್ ಸ್ಟಾಪ್ ಹಾಗೂ ನಾನ್ ಸ್ಟಾಪ್ ಎಲ್ಲಾ ಬಸ್ ಗಳಲ್ಲೂ ಕೂಡ 72 ರೂಪಾಯಿ ನಿಗದಿಯಾಗಿತ್ತು. 

Tap to resize

Latest Videos

undefined

ಇದೀಗ ಹೊಸದಾಗಿ ನಾನ್ ಸ್ಟಾಪ್ ಸೇವೆ ಆರಂಭಿಸಿ ಚಾಮರಾಜನಗರದಿಂದ ಮೈಸೂರಿಗೆ ತಡೆರಹಿತ ಬಸ್ ಪ್ರಯಾಣ ದರ  75  ರೂಪಾಯಿಗೆ ಏರಿಕೆ ಮಾಡುವ ಮೂಲಕ ಪ್ರಯಾಣಿಕರ ಕಿಸೆಗೆ ಕತ್ತರಿ ಹಾಕಲು ಕೆಎಸ್ಆರ್ಟಿಸಿ ಮುಂದಾಗಿದೆ. ಟಿಕೆಟ್ ದರವನ್ನು ಹೆಚ್ಚಳ ಮಾಡಿದ್ದು,ಬಸ್ ಬಿಡುವ ನೆಪದಲ್ಲಿ ಪ್ರಯಾಣ ದರ ಏರಿಕೆ ಮಾಡಿದೆ. ಇದು ಜನಸಾಮಾನ್ಯರಿಗೆ ಹೊರೆ ಎಂಬ ಆರೋಪ ಮಾಡ್ತಿದ್ದಾರೆ. ನಿತ್ಯ ಸಾವಿರಾರು ಜನರು ಪ್ರಯಾಣ ಮಾಡ್ತಾರೆ, ಅದರಲ್ಲೂ ಕೂಡ ದುಡಿಯುವ ವರ್ಗಕ್ಕೆ ಗಾಯದ ಮೇಲೆ ಬರೆ ಎಳೆದಂತೆ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇನ್ನೂ ಹೊಸದಾಗಿ ನಾನ್ ಸ್ಟಾಪ್ ಬ್ರ್ಯಾಂಡ್ ಮಾಡಿದ್ದು ನಮಗೆ ಸಾರ್ವಜನಿಕರಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಚಾಮರಾಜನಗರದಿಂದ ಮೈಸೂರಿಗೆ ಪ್ರತಿ ಅರ್ಧ ಗಂಟೆಗೊಮ್ಮೆ ಮೈಸೂರು, ಚಾಮರಾಜನಗರ ಎರಡು ಕಡೆಯಿಂದಲೂ ಬೆಳಿಗ್ಗೆ 6 ರಿಂದ ರಾತ್ರಿ 7 ವರೆಗೆ ಪ್ರತಿ ಅರ್ಧ ತಾಸಿಗೆ  ತಡೆರಹಿತ ಬಸ್ಗಳಿ ಕಾರ್ಯಾಚರಣೆ ಮಾಡಲಿವೆ  ಕೂಡ ನಾನ್ ಸ್ಟಾಪ್ ಸೇವೆ ಆರಂಭಿಸಿದ್ದೇವೆ. ತಡೆ ರಹಿತ ಸೆವೆ ಒದಗಿಸುತ್ತಿರುವುದರಿಂದ ಹಾಗೂ ಚಿಲ್ಲರೆ ಸಮಸ್ಯೆ ಇರೋದ್ರಿಂದ 75 ರೂಪಾಯಿಗೆ ರೌಂಡ್ ಆಪ್ ಮಾಡಿದ್ದೇವೆಂದು ಸಾರಿಗೆ ನಿಗಮದ ಅಧಿಕಾರಿಗಳು ಸಮರ್ಥಿಸಿಕೊಳ್ಳುತ್ತಿದ್ದಾರೆ. 

ವಾಲ್ಮೀಕಿ ಅಭಿವೃದ್ಧಿ ನಿಗಮ ಅಧೀಕ್ಷಕ ಆತ್ಮಹತ್ಯೆ ಕೇಸ್​: ಸಿಬಿಐ ತನಿಖೆಗೆ ಸರ್ಕಾರಕ್ಕೆ ಪತ್ರ ಬರೆದ ಶಾಸಕ ಯತ್ನಾಳ್

ಇದನ್ನೆಲ್ಲಾ ಗಮನಿಸಿದರೆ ಸರ್ಕಾರ ಸದ್ದಿಲ್ಲದೆ ಪ್ರಯಾಣ ದರ ಏರಿಕೆ ಮಾಡಿ  ಶಕ್ತಿ ಯೋಜನೆಗೆ ಹಣ ಹೊಂದಿಸಲು  ಪರೋಕ್ಷ  ಪ್ಲಾನ್ ಮಾಡ್ತಾ ಎಂಬ ಅನುಮಾನ ಕಾಡುತ್ತಿದೆ. ಒಟ್ನಲ್ಲಿ ನಾನ್ ಸ್ಟಾಪ್ ಸೇವೆ ಒದಗಿಸುತ್ತಿರುವುದು ಒಂದೆಡೆ ಮೈಸೂರು ಚಾಮರಾಜನಗರ ಪ್ರಯಾಣಿಸುವವರಿಗೆ ಸಮಯ ಉಳಿಯುವುದಲ್ಲದೇ ಪ್ರಯಾಣಕ್ಕೂ ಕೂಡ ಅನುಕೂಲ. ಆದ್ರೆ ಒಬ್ಬರಿಗೆ ಮೂರು ರೂಪಾಯಿ ಹೆಚ್ಚಳ ಗಾಯದ ಮೇಲೆ ಬರೆ ಎಳೆದಂತಾಗಿದೆ. ಶಕ್ತಿ ಯೋಜನೆ ಸರಿದೂಗಿಸಲು ಸರ್ಕಾರ ಪರೋಕ್ಷ ಸುಲಿಗೆ ಮುಂದಾಯ್ತಾ, ಹಣ ಹೊಂದಿಸಲು ಪರೋಕ್ಷ ಪ್ಲಾನ್ ಮಾಡಿದ್ಯಾ ಸರ್ಕಾರ ಅನ್ನೋ ಚರ್ಚೆ ಶುರುವಾಗಿದೆ.

click me!