ಯಾವುದೇ ದೇಶವಾಗಲಿ ಯಾರೂ ಪ್ರತ್ಯಕ್ಷವಾಗಿ ಯುದ್ಧ ಮಾಡುವ ಬದಲಿಗೆ ಸುಳ್ಳಿರಲಿ, ವಾಸ್ತವತೆಗೆ ವಿರುದ್ಧವಾಗಿರಲಿ ತಮ್ಮ ಸಿದ್ಧಾಂತ, ಅನಿಸಿಕೆಯನ್ನು ಪದೇ ಪದೇ ಹೇಳಿ ಅದೇ ಸತ್ಯ ಎಂದು ಜನರನ್ನು ನಂಬುವಂತೆ ಮಾಡಲಾಗುತ್ತಿದೆ ಎಂದು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಮೈಸೂರು (ಮೇ.30): ಯಾವುದೇ ದೇಶವಾಗಲಿ ಯಾರೂ ಪ್ರತ್ಯಕ್ಷವಾಗಿ ಯುದ್ಧ ಮಾಡುವ ಬದಲಿಗೆ ಸುಳ್ಳಿರಲಿ, ವಾಸ್ತವತೆಗೆ ವಿರುದ್ಧವಾಗಿರಲಿ ತಮ್ಮ ಸಿದ್ಧಾಂತ, ಅನಿಸಿಕೆಯನ್ನು ಪದೇ ಪದೇ ಹೇಳಿ ಅದೇ ಸತ್ಯ ಎಂದು ಜನರನ್ನು ನಂಬುವಂತೆ ಮಾಡಲಾಗುತ್ತಿದೆ ಎಂದು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು. ನಗರದ ವೀರ ಸಾವರ್ಕರ್ ಪ್ರತಿಷ್ಠಾನದ ವತಿಯಿಂದ ಕಲಾಮಂದಿರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವೀರ ಸಾವರ್ಕರ್ ಸಮ್ಮಾನ್ ಪ್ರಶಸ್ತಿ ಸ್ವೀಕರಿಸಿ ಅವರು ವಾತನಾಡಿದರು. ಯಾವುದೇ ದೇಶವಾಗಲಿ ಯಾರೂ ಪ್ರತ್ಯಕ್ಷವಾಗಿ ಯುದ್ಧ ಮಾಡುವುದಿಲ್ಲ. ಇಂದು ಜಗತ್ತಿನಲ್ಲಿ ನಡೆಯುವ ಯುದ್ಧ ಎಂದರೆ ತಮ್ಮ ಸಿದ್ಧಾಂತಗಳನ್ನು, ತಮ್ಮ ಬಲವನ್ನು ಮತ್ತೊಬ್ಬರ ಮೇಲೆ ಹೇರಿ ಹೆರುವ ಪ್ರಚಾರ ಯುದ್ಧ ತಂತ್ರವಾಗಿದೆ.
ಭಾರತದ ಮೇಲೆ ಪಾಕಿಸ್ತಾನ, ಚೀನಾ, ಅಮೆರಿಕ, ಜರ್ಮನಿ, ಇಂಗ್ಲೆಂಡ್ ಮುಂತಾದ ಯಾವುದೇ ದೇಶವಾದರೂ ಪ್ರತ್ಯಕ್ಷವಾಗಿ ಯುದ್ಧ ಮಾಡುವುದಿಲ್ಲ ಎಂದರು. ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆಯೂ ಇದೇ ರೀತಿಯ ಪ್ರಚಾರ ನಡೆಯುತ್ತಿದೆ. ಜೂ. 4 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದ್ದು, ಮೋದಿ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂದು ಹೇಳಲಾರಂಭಿಸಿದರು. ನಂತರ ನಾಲ್ಕೈದು ಹಂತಗಳ ಚುನಾವಣೆ ಮುಗಿದ ಮೇಲೆ ಬಿಜೆಪಿ ವಿರುದ್ಧವಾದ ಪ್ರಚಾರ ಬಲಹೀನವಾಗತೊಡಗಿದೆ ಎಂದು ಅವರು ಹೇಳಿದರು.
undefined
ಹೇಮೆ ಯೋಜನೆ ಆರಂಭಿಸದಿದ್ದರೆ ಟ್ರ್ಯಾಕ್ಟರ್ ಚಲೋ: ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಕೆ
ಸಾವರ್ಕರ್ ವಿರುದ್ಧವೂ ಅಪಪ್ರಚಾರ: ಭಾರತದ ವಿಚಾರ ಧಾರೆಯನ್ನು ಮ್ಯಾಕ್ಸ್ಮುಲ್ಲರ್ ಅಂತಹವರನ್ನು ಬಳಸಿ ನಾಶಪಡಿಸುವ ಪ್ರಯತ್ನ ನಡೆಯಿತು. ಅಂತೆಯೇ ಅಪಪ್ರಚಾರ ವೀರ ಸಾವರ್ಕರ್ ವಿರುದ್ಧವೂ ನಡೆದಿತ್ತು. ನಡೆಯುತ್ತಲೂ ಇದೆ. ಲಿಯಾಕತ್ ಅಲಿಖಾನ್ ದೇಶಕ್ಕೆ ಬಂದಾಗ ಸುರಕ್ಷತೆ ಕಾಪಾಡುವ ಹೆಸರಿನಲ್ಲಿ ದೇಶಭಕ್ತ ಸಾವರ್ಕರ್ ಅವರನ್ನು ಜೈಲಿನಲ್ಲಿ ಬಂಧಿಸಿಟ್ಟರು. ಇನ್ನು ಹೊರಗೆ ಇದ್ದರೆ ಹೋರಾಟ ನಡೆಸಬಹುದು ಹಾಗಾಗಿ ಜೈಲಿನಿಂದ ಬಿಡುಗಡೆ ಆಗಲೆಂದು ಸಾವರ್ಕರ್ ಅವರು ಬರೆದಿದ್ದ ಕ್ಷಮಾಪಣೆ ಪತ್ರದ ಒಕ್ಕಣೆಯನ್ನು ತಿರುಚಿ ಅವರ ವಿರುದ್ಧ ಅಪಪ್ರಚಾರ ಮಾಡಲಾಯಿತು ಎಂದು ಅವರು ಹೇಳಿದರು.
ಲೂಟಿಕೋರ ಸರ್ಕಾರಕ್ಕೆ ಕೇಂದ್ರದತ್ತ ಬೊಟ್ಟು ಮಾಡುವುದೇ ಕೆಲಸ: ಕೇಂದ್ರ ಸಚಿವ ಭಗವಂತ ಖೂಬಾ
ಅಧ್ಯಕ್ಷತೆ ವಹಿಸಿದ್ದ ಸರಸ್ವತಿ ಸಮ್ಮಾನ್ ಪುರಸ್ಕೃತ ಸಾಹಿತಿ ಡಾ.ಎಸ್.ಎಲ್. ಭೈರಪ್ಪ ಮಾತನಾಡಿ, ಸೋನಿಯಾಗಾಂಧಿ ಅವರು 5 ರಾಜ್ಯಗಳಲ್ಲಿ ಕ್ರಿಶ್ಚಿಯನ್ ಸಮುದಾಯದವರನ್ನೇ ಮುಖ್ಯಮಂತ್ರಿಗಳನ್ನಾಗಿ ಮಾಡಿದರು. ಅಲ್ಲದೇ ಕೇರಳದ ಎ.ಕೆ. ಅಂಟೋನಿ ಅವರನ್ನು ರಕ್ಷಣಾಮಂತ್ರಿಯನ್ನಾಗಿ ನೇಮಿಸಿದರು. ಹೀಗೆ ಎಲ್ಲೆಲ್ಲಿ ಅಧಿಕಾರ ಹಿಡಿಯಲು ಸಾಧ್ಯವೋ ಅಲ್ಲೆಲ್ಲಾ ಕ್ರಿಶ್ಚಿಯನ್ನರನ್ನೇ ಆಯ್ಕೆ ಮಾಡಿಕೊಂಡು ಕೂರಿಸುತಿದ್ದರು. ಹಾಗೆಯೇ ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದಾಗ ರಾಷ್ಟ್ರದ ಸಂಪತ್ತಿನ ಹೆಚ್ಚು ಭಾಗ ಮುಸಲ್ಮಾನರಿಗೆ ಸೇರಬೇಕು ಎಂದು ತೀಮಾನಿಸಲಾಯಿತು ಎಂದರು. ವೀರ ಸಾವರ್ಕರ್ ಪ್ರತಿಷ್ಠಾನದ ಅಧ್ಯಕ್ಷೆ ಡಾ. ಯಶಸ್ವಿನಿ, ಡಾ. ಚಂದ್ರಶೇಖರ್, ರಜತ್, ಶಿವಕುಮಾರ್ ಚಿಕ್ಕಕಾನ್ಯ,, ರಾಕೇಶ್ ಭಟ್ ಮೊದಲಾದವರು ಇದ್ದರು.