ರಾಜಕೀಯ ವಿದ್ಯಮಾನಗಳ ಬಗ್ಗೆ ಟ್ವೀಟ್, KSRDPRU Guest Faculty ಅಮಾನತಿಗೆ ಆಗ್ರಹ

By Suvarna News  |  First Published Jun 3, 2022, 5:24 PM IST

KSRDPRU ವಿಶ್ವವಿದ್ಯಾಲಯದ ಅತಿಥಿ ಉಪನ್ಯಾಸಕರೊಬ್ಬರು ದೇಶ, ಭಾಷೆ ವಿರುದ್ಧ ಆಕ್ಷೇಪಾರ್ಹ ಟ್ವೀಟ್ ಮಾಡಿ ಈಗ ಪೇಚಿಗೆ ಸಿಲುಕಿದ್ದು, ಎಬಿವಿಪಿ ಉಪನ್ಯಾಸಕರ ಅಮಾನತಿಗೆ ಒತ್ತಾಯಿಸಿದೆ.


ವರದಿ:  ಗಿರೀಶ್ ಕಮ್ಮಾರ , ಏಷ್ಯಾನೆಟ್ ಸುವರ್ಣನ್ಯೂಸ್ 

ಗದಗ (ಜೂ.3) : ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯದ (Karnataka State Rural Development and Panchayat Raj University - KSRDPRU) ಅತಿಥಿ ಉಪನ್ಯಾಸಕರೊಬ್ಬರು ( guest faculty) ದೇಶ, ಭಾಷೆ ವಿರುದ್ಧ ಆಕ್ಷೇಪಾರ್ಹ ಟ್ವೀಟ್ ಮಾಡಿದ್ದಾರೆ ಎನ್ನುವ ಆರೋಪ ಹೇಳಿ ಬಂದಿದೆ. 

Tap to resize

Latest Videos

ಈ ಹಿನ್ನೆಲೆಯಲ್ಲಿ ಗದಗ ನಗರದ ಜಿಲ್ಲಾಧಿಕಾರಿಯವರ ಹಳೆಯ ಕಚೇರಿ ಬಳಿಯ ವಿವಿ ಕಚೇರಿ ಎದುರು ಎಬಿವಿಪಿ (ABVP) ಕಾರ್ಯಕರ್ತರು ಧರಣಿ ನಡೆಸಿ, ಅತಿಥಿ ಪ್ರಾಧ್ಯಾಪಕ ಭಾರ್ಗವ್ ಹೆಚ್ ಕೆ ಅವರನ್ನ ಅಮಾನತ್ತು ಮಾಡ್ಬೇಕು ಅಂತಾ ಆಗ್ರಹಿಸಿದ್ದಾರೆ.  'ಭಾರ್ಗವ್ ಅವರು ದೇಶ ದ್ರೋಹಿ ಟ್ವೀಟ್ ಗಳನ್ನ ಮಾಡಿದ್ದಾರೆ'.  

ದೇಶ, ಪ್ರಧಾನಿ ಮೋದಿಯವರ ವಿರುದ್ಧ ಸರಣಿ ಟ್ವೀಟ್ ಮಾಡುವ ಮೂಲಕ ವಿದ್ಯಾರ್ಥಿಗಳ ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದ ಕಾರ್ಯಕರ್ತರು, ಕೂಡ್ಲೆ ಪ್ರಾಧ್ಯಾಪಕ ಭಾರ್ಗವ್ ಅವರ ಅಮಾನತ್ತು ಆಗ್ಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೆ ರಾಜಕೀಯ ಮಾಡೋದಾದ್ರೆ ಶಿಕ್ಷಕ ವೃತ್ತಿ ಬಿಟ್ಟು ರಾಜಕೀಯ ಮಾಡ್ಲಿ ಇಲ್ಲವಾದಲ್ಲಿ ಬೋಧನೆ ಮಾಡ್ಲಿ ಅಂತಾ ಕೆಲ ಯುವಕರು ಆಕ್ರೋಶವನ್ನೂ ವ್ಯಕ್ತ ಪಡಿಸಿದ್ದಾರೆ. 

Bengaluru Flyoverಗಳು ಎಷ್ಟು ಸುರಕ್ಷಿತ? ಪರಿಶೀಲನೆಗೆ ಮುಂದಾಯ್ತು ಬಿಬಿಎಂಪಿ

ಗಣಿತ ಶಾಸ್ತ್ರದ ಅತಿಥಿ ಉಪನ್ಯಾಸಕರಾಗಿ ಭಾರ್ಗವ್ ಕಳೆದ ಆರು ತಿಂಗಳ ಹಿಂದೆ ವಿಶ್ವ ವಿದ್ಯಾಲಯದಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಾರೆ. ಅವರ ಆಕ್ಷೇಪಾರ್ಹ ಟ್ವೀಟ್ ಗಳ ಬಗ್ಗೆ ಗಮನಕ್ಕೆ ಬಂದಿಲ್ಲ. ಮಕ್ಕಳನ್ನ ಪ್ರಚೋದಿಸುವ ಹಾಗೆ ಮಾತನಾಡಿಲ್ಲ. ಈ ಬಗ್ಗೆ ಸಮಗ್ರ ಮಾಹಿತಿ ಪಡೆದು ಕ್ರಮ ತೆಗೆದುಕೊಳ್ಳುವುದಾಗಿ ಕುಲಪತಿ ವಿಷ್ಣುಕಾಂತ ಚಟಪಲ್ಲಿ ತಿಳಿದಿದ್ದಾರೆ. 

ಹಾರ್ದಿಕ್ ಪಟೇಲ್‌ ಬಿಜೆಪಿ ಸೇರ್ಪಡೆಯಾದ ವಿಚಾರಕ್ಕೆ ಸಂಬಂಧಪಟ್ಟಂತೆ ಟ್ವೀಟ್ ಮಾಡಿದ್ದ ಭಾರ್ಗವ್, ಈ ಹಿಂದೆ ಕಾಂಗ್ರೆಸ್ ನಲ್ಲಿದ್ದಾಗ ಹಾರ್ದಿಕ್ ಅವರನ್ನ ಸಿಡಿ ವಿಚಾರಕ್ಕೆ ಟೀಕಿಸಲಾಗುತ್ತಿತ್ತು. ಈಗ ಬಿಜೆಪಿ ಅವರನ್ನ ಹಾರ್ದಿಕವಾಗಿ ಸ್ವಾಗತಿಸಿದೆ ಎಂದು ಟ್ವೀಟ್ ಮಾಡಿದ್ದಾರೆ.  

Love Jihad ಆರೋಪ, ಸೌತಡ್ಕ ದೇವಾಲಯಕ್ಕೆ ಹಿಂದೂಯೇತರರ ವಾಹನ ಪ್ರವೇಶಕ್ಕೆ ನಿರ್ಬಂಧ

ಪಠ್ಯ ಪರಿಷ್ಕರಣೆ ವಿಚಾರವಾಗಿ ಬಹುತೇಕ ಭಾಷೆಗಳಿಗೆ ಸಂಸ್ಕೃತ ಮೂಲ ಅಂತಾ ಪಠ್ಯದಲ್ಲಿ ಹೇಳಲಾಗಿದೆ.  ಸಂಸ್ಕೃತ ಕ್ಕೂ ಮುಂಚೆ ಕನ್ನಡ ಇತ್ತು.  ಕನ್ನಡದಿಂದ ಸಂಸ್ಕೃತ ಹುಟ್ಟಿದೆ ಅಂತಾ ಟ್ವೀಟ್ ಮಾಡಿರೋದು ಸದ್ಯ ಚರ್ಚೆಯಲ್ಲಿದೆ.

ಸಂಸ್ಕೃತ ಪ್ರೀತಿಸುವವರು ಯುರೋಪಿಯನ್ ಮೂಲದವರು, ಕನ್ನಡ ಮೊದಲು ಅಂತಾ ಹೇಳುವವರು ದ್ರಾವಿಡರು ಎಂದೂ ಟ್ವೀಟ್ ಮಾಡಿದ್ದಾರೆ‌. ಅಲ್ದೆ, ಪ್ರಧಾನಿ ಮೋದಿ ವಿರುದ್ಧವೂ ಕೆಲ ಟ್ವೀಟ್ ಗಳಿದ್ದು ಸದ್ಯ ಈ ಟ್ವೀಟ್ ಗಳ ಸ್ಕ್ರೀನ್ ಶಾಟ್ ಗಳು ಸಾಮಾಜಿಕ ಮಧ್ಯಮದಲ್ಲಿ ಹರಿದಾಡ್ತಿವೆ. 

Hijab Row; ಎರಡು ದಿನ ಗಡುವು, ಸಮನ್ವಯ ಸಮಿತಿ ಹೆಸರಲ್ಲಿ ಫೀಲ್ಡಿಗಿಳಿತಾ ಸಿಎಫ್ ಐ?

ಈ ಬಗ್ಗೆ ರಿಯಾಕ್ಷನ್ ಪಡೆಯೋದಕ್ಕೆ ಭಾರ್ಗವ್ ಅವರನ್ನ ಸಂಪರ್ಕಿಸಲು ಪ್ರಯತ್ನಿಸಿದ್ರೆ ಫೋನ್ ಸ್ವಿಚ್ ಆಫ್ ಆಗಿದೆ. ಒಂದ್ಕಡೆ ವಿದ್ಯಾರ್ಥಿ ಸಂಘಟನೆಗಳು ಭಾರ್ಗವ್ ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿವೆ.. ಮತ್ತೊಂದ್ಕಡೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುತ್ತೇನೆ ಅಂತಾ ವಿವಿ ಕುಲಪತಿಗಳು ಹೇಳಿದ್ದು, ಸದ್ಯಕ್ಕೆ ವಿವಾದ ತಣ್ಣಗಾದಂತಿದೆ. 

click me!