Bengaluru Flyoverಗಳು ಎಷ್ಟು ಸುರಕ್ಷಿತ? ಪರಿಶೀಲನೆಗೆ ಮುಂದಾಯ್ತು ಬಿಬಿಎಂಪಿ

By Suvarna News  |  First Published Jun 3, 2022, 3:54 PM IST
  • ರಾಜಧಾನಿ ಫ್ಲೈಓವರ್ ಸೇಫ್ಟಿ ಬಗ್ಗೆ ಬಿಬಿಎಂಪಿಗೆ ಹೆಚ್ಚಿದ ಆತಂಕ
  • ಬೆಂಗಳೂರಿನ ಮೇಲ್ಸೇತುವೆಗಳ ಸದೃಢತೆ ಪರಿಶೀಲನೆಗೆ ಮುಂದಾದ ಪಾಲಿಕೆ
  • ನಗರದಲ್ಲಿದೆ ಒಟ್ಟು 44 ಮೇಲ್ಸೇತುವೆಗಳು

ವರದಿ; ಮಮತಾ ಮರ್ಧಾಳ, ಏಷ್ಯಾನೆಟ್ ಸುವರ್ಣನ್ಯೂಸ್

ಬೆಂಗಳೂರು (ಜೂ3);  ತುಮಕೂರು - ಬಳ್ಳಾರಿ ರಸ್ತೆ ಸಂಪರ್ಕ ಕಲ್ಪಿಸೋ ಪೀಣ್ಯ ಎಲಿವೇಟೆಡ್ ಫ್ಲೈಓವರ್ ಕಥೆ ಗೊತ್ತೇ. ಮೇಲ್ಸೇತುವೆಯ 102 ಮತ್ತು 103ನೇ ಪಿಲ್ಲರ್ ಮಧ್ಯೆ ಕೇಬಲ್ ಸಮಸ್ಯೆ ಕಂಡು ಬಂದ ಹಿನ್ನಲೆ ಫ್ಲೈ ಓವರ್ ನಲ್ಲಿ ಹೆವಿ ವೆಹಿಕಲ್ಸ್ ಓಡಾಡಕ್ಕೆ ನಿರ್ಬಂಧ ಹೇರಲಾಗಿದೆ. ಹೀಗಾಗಿ ವಾಹನ ಸವಾರರು ಫ್ಲೈಓವರ್ ( flyovers) ಮೇಲೆ ಸಂಚರಿಸಲು ಭಯಭೀತರಾಗಿದ್ದಾರೆ.

Tap to resize

Latest Videos

ಇದರ ಬೆನ್ನಲ್ಲೆ ಬಿಬಿಎಂಪಿಗೂ ಫ್ಲೈಓವರ್ (BBMP  flyover) ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಪೀಣ್ಯ ಫ್ಲೈಓವರ್ ಡ್ಯಾಮೇಜ್ ಆದ  ಬೆನ್ನಲ್ಲೇ ಬಿಬಿಎಂಪಿ (Bruhat Bengaluru Mahanagara Palike -BBMP) ಅಧಿಕಾರಿಗಳಲ್ಲಿ  ರಾಜಧಾನಿ ಫ್ಲೈಓವರ್ ಗಳ ಸೇಫ್ಟಿ ಬಗ್ಗೆ ಆತಂಕ ಹೆಚ್ಚಾಗಿದೆ. ಹೀಗಾಗಿ ನಗರದಲ್ಲಿರುವ ಎಲ್ಲಾ ಮೇಲ್ಸೇತುವೆಗಳ ಸದೃಢತೆ ಪರಿಶೀಲನೆಗೆ ಮುಂದಾಗಿದೆ. ಡೇಂಜರ್ ಫ್ಲೈಓವರ್ ಯಾವ್ಯಾವುದು, ಅವುಗಳ ಸ್ಥಿತಿ ಹೇಗಿದೆ, ಎಷ್ಟು ವರ್ಷ ಹಳೆಯವು ಎಂದು ಪರಿಶೀಲನೆ ನಡೆಸ್ತಿದೆ. ಇದಕ್ಕಾಗಿ ಇನ್ ಫ್ರಾ ಕಂಪೆನಿಗೆ ಟೆಂಡರ್ ನೀಡಲಾಗಿದೆ. 

HIJAB ROW; ಎರಡು ದಿನ ಗಡುವು, ಸಮನ್ವಯ ಸಮಿತಿ ಹೆಸರಲ್ಲಿ ಫೀಲ್ಡಿಗಿಳಿತಾ ಸಿಎಫ್ ಐ?

ನಗರದಲ್ಲಿ ಬಿಬಿಎಂಪಿ, ನಗರಾಭಿವೃದ್ಧಿ ಇಲಾಖೆ, ಬಿಡಿಎ,ಸೇರಿ ವಿವಿಧ ಇಲಾಖೆಗಳಿಂದ ಒಟ್ಟು 44 ಮೇಲ್ಸೇತುವೆಗಳ ನಿರ್ಮಾಣ ಮಾಡಲಾಗಿದೆ. ಇದರಲ್ಲಿ ಬಹುತೇಕ ಫ್ಲೈಓವರ್ ಗಳು 20 ವರ್ಷಕ್ಕೂ ಹಳೆಯದಾಗಿವೆ. ಹೀಗಾಗಿ ಹಲವು ಫ್ಲೈಓವರ್ ಗಳು ಹಾಳಾಗಿರುವ ಹಿನ್ನೆಲೆ ಪರಿಶೀಲನೆ ಮಾಡಲಾಗ್ತಿದೆ. 

ಮೇಲ್ಸೇತುವೆಗಳ ಬೀಮ್, ಪಿಲ್ಲರ್ ಹಾಗೂ ಇನ್ನಿತರ ಅಂಶಗಳನ್ನು ವೈಜ್ಞಾನಿಕ ಮಾದರಿಯಲ್ಲಿ ಲೇಸರ್ ಕಿರಣ ಹಾಯಿಸಿ ಕಮಿಟಿ ಟೆಸ್ಟ್ ಮಾಡ್ತಿದೆ. ನಗರದಲ್ಲಿರುವ 44 ಫ್ಲೈಓವರ್ಗಳನ್ನು ಸರಿಯಾಗಿ ನಿರ್ವಹಣೆ ಮಾಡಿಲ್ಲ. ಹೀಗಾಗಿ ಒಂದೊಂದು ಮೇಲ್ಸೇತುವೆಯದ್ದು ಒಂದೊಂದು ಸಮಸ್ಯೆಯಾಗಿದ್ದು  ಶಿಥಿಲಾವಸ್ಥೆಯತ್ತ ಹೋಗಿದೆ. ಅಲ್ಲದೆ ದಿನದಿಂದ ದಿನಕ್ಕೆ ಸಿಲಿಕಾನ್ ಸಿಟಿಯಲ್ಲಿ ವಾಹನಗಳ ಸಂಖ್ಯೆಯು ಹೆಚ್ಚುತ್ತಿದ್ದು ಮೇಲ್ಸೇತುವೆ ವಾಹನಗಳ ಭಾರ ತಡೆಯಕ್ಕಾಗ್ತಿಲ್ಲ. 

Chikkamagaluru; ಸೋರುತ್ತಿರುವ ಶಾಲೆ, ಒದ್ದೆ ಪುಸ್ತಕವನ್ನು ಬಿಸಿಲಲ್ಲಿ ಒಣಗಿಸುವ ಮಕ್ಕಳು!

ಹೀಗಾಗಿ ಫ್ಲೈಓವರ್ ಗಳು ಯಾವಾಗ ಏನಾಗುತ್ತೋ ಅಂತಾ ಪಾಲಿಕೆ ತಲೆಕೆಡಿಸಿಕೊಂಡಿದೆ. ಮತ್ತೊಂದು ಅವಘಡ ಸಂಭವಿಸುವ ಮುನ್ನ, ಮುನ್ನೆಚ್ಚರಿಕೆ ಕ್ರಮವಾಗಿ ಫ್ಲೈಓವರ್ ಗಳ ಫಿಟ್ನೆಸ್ ಗೆ ಮುಂದಾಗಿದೆ. ಇನ್ನೊಂದು ವಾರದಲ್ಲಿ ಫ್ಲೈಓವರ್ಗಳ ಪರಿಸ್ಥಿತಿ ಹೇಗಿದೆ ಅನ್ನೋ ರಿಪೋರ್ಟ್ ಬಿಬಿಎಂಪಿ ಕೈ ಸೇರಲಿದೆ.

click me!