ಅರ್ಕಾವತಿ ಬಡಾವಣೆ: ಮೂಲೆ ನಿವೇಶನ ಹರಾಜಿಗೆ ಹೈಕೋರ್ಟ್ ತಡೆಯಾಜ್ಞೆ

By Suvarna News  |  First Published Jun 3, 2022, 3:52 PM IST

* ಮೂಲೆ ನಿವೇಶನ ಹರಾಜಿಗೆ ಹೈಕೋರ್ಟ್ ತಡೆಯಾಜ್ಞೆ
* ಬಿಡಿಎ ಅಭಿವೃದ್ಧಿಪಡಿಸುತ್ತಿರುವ ಅರ್ಕಾವತಿ ಬಡಾವಣೆಯಲ್ಲಿರುವ ಮೂಲೆ ನಿವೇಶನ
* ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ  ಏಕಸದಸ್ಯಪೀಠ ಈ ಮಧ್ಯಂತರ ಆದೇಶ


ಬೆಂಗಳೂರು, ಜೂನ್.03):  ಬೆಂಗಳೂರು ನಗರದಲ್ಲಿ ಬಿಡಿಎ ಅಭಿವೃದ್ಧಿಪಡಿಸುತ್ತಿರುವ ಅರ್ಕಾವತಿ ಬಡಾವಣೆಯಲ್ಲಿರುವ ಮೂಲೆ ನಿವೇಶನಗಳ ಹರಾಜಿಗೆ ಕರ್ನಾಟಕ ಹೈಕೋರ್ಟ್ ಬ್ರೇಕ್ ಹಾಕಿದೆ.

ಬೆಂಗಳೂರು  ಅಭಿವೃದ್ಧಿ ಪ್ರಾಧಿಕಾರ ಅಭಿವೃದ್ಧಿಪಡಿಸುತ್ತಿರುವ ಅರ್ಕಾವತಿ ಬಡಾವಣೆಯಲ್ಲಿ ನಿವೇಶನ ಹಂಚಿಕೆಯಿಂದ ವಂಚಿತವಾಗಿರುವವರು ಪರ್ಯಾಯ ನಿವೇಶನಕ್ಕಾಗಿ ಕಾಯುತ್ತಿರುವುದರ ಮಧ್ಯೆಯೇ, ಪ್ರಾಧಿಕಾರ ಕೈಗೊಂಡಿರುವ ಮೂಲೆ ನಿವೇಶನಗಳ ಹರಾಜು ಪ್ರಕ್ರಿಯೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

Latest Videos

undefined

ಅರ್ಕಾವತಿ ಲೇಔಟ್ 7ನೇ ಬ್ಲಾಕ್‌ನಲ್ಲಿ ಬಿಡಿಎ ನಿವೇಶನ ಹೊಂದಿದ್ದ ಮಂಜುನಾಥ ರಾವ್, ಮಂಜುಳಾ ಆರ್.ಶೆಟ್ಟಿ ಮತ್ತು ಇಂದುಮತಿ ಬಾಬು ಶೇಖರ್ ಸಲ್ಲಿಸಿದ್ದ ಅರ್ಜಿಗಳನ್ನು ಆಲಿಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ  ಏಕಸದಸ್ಯಪೀಠ ಈ ಮಧ್ಯಂತರ ಆದೇಶ ನೀಡಿದೆ.

ಲಾಭದಾಯಕ ಹುದ್ದೆ: ಬಿಜೆಪಿ ಶಾಸಕ ವಿಶ್ವನಾಥ್‌ಗೆ ಹೈಕೋರ್ಟ್‌ ನೋಟಿಸ್‌

‘‘ಬಿಡಿಎ ಮೊದಲು ಅರ್ಕಾವತಿ ಬಡಾವಣೆಗೆ ಸಂಬಂಽಸಿದ ವ್ಯಾಜ್ಯಗಳನ್ನು ಬಗೆಹರಿಸಬೇಕು, ಅದು ಬಿಟ್ಟು ಮೂಲೆ ನಿವೇಶನಗಳ ಖರೀದಿಗೆ ಹೊಸಬರನ್ನು ಹುಡುಕುವ ಬದಲು ಈಗಾಗಲೇ ನಿವೇಶನ ಮಂಜೂರಾತಿಯಿಂದ ವಂಚಿತರಾದವರಿಗೆ  ನಿವೇಶನ ಹಂಚಿಕೆಗೆ ಆದ್ಯತೆ ನೀಡಬೇಕು. ಬಿಡಿಎ ಖಾಸಗಿ ರಿಯಲ್ ಎಸ್ಟೇಟ್ ಕಂಪನಿಯಂದು ಭಾವಿಸಿ, ಕಾರ್ನರ್‌ಸೈಟ್‌ಗಳನ್ನು ಹರಾಜು ಮಾಡುವ ಮೂಲಕ ಲಾಭವನ್ನು ಹೆಚ್ಚಿಸಲು ಸಾಧ್ಯವಿಲ್ಲ’’ ಎಂದು ನ್ಯಾಯಪೀಠ ಹೇಳಿದೆ.

ಅಲ್ಲದೆ, ಬಿಡಿಎ ಮೊದಲು  ಸದ್ಯ ನಿವೇಶನ ಹಂಚಿಕೆ ವ್ಯಾಜ್ಯ ಪರಿಹರಿಸಲು ಸಹಾನುಭೂತಿ ಹೊಂದಿರಬೇಕು. ಹಂಚಿಕೆದಾರರಿಗೆ ಸಂಬಂಽಸಿದ ಹಲವು ಸಮಸ್ಯೆಗಳು ಪರಿಹಾರಕ್ಕಾಗಿ ಬಾಕಿ ಉಳಿದಿರುವಾಗ ಮತ್ತು ಆ ಹಂಚಿಕೆದಾರರು ಕಚೇರಿಯಿಂದ ಕಚೇರಿಗೆ ದಿನವೂ ಎಡತಾಕುತ್ತಿದ್ದಾರೆ ಮತ್ತು ಪರಿಹಾರ ಕೋರಿ ಈ ಕೋರ್ಟ್ ಮೊರೆ ಹೋಗುತ್ತಿರುವಾಗ, ಬಿಡಿಎ ಮೊದಲು ನಿವೇಶನ ಹಂಚಿಕೆದಾರರಿಗೆ ಸಂಬಂಽಸಿದ ಸಮಸ್ಯೆಗಳು ಬಗೆಹರಿಯುವವರೆಗೆ ಮೂಲೆ ನಿವೇಶನಗಳನ್ನು ಹರಾಜು ಮಾಡಬಾರದು’’ ಎಂದು ನ್ಯಾಯಪೀಠ ಪ್ರಾಽಕಾರಕ್ಕೆ ನಿರ್ದೇಶನ ನೀಡಿದೆ.

ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ಬಿಡಿಎ ಅರ್ಕಾವತಿ ಬಡಾವಣೆಯಲ್ಲಿ ನಿವೇಶನಗಳನ್ನು ಮೂರನೇ ವ್ಯಕ್ತಿಗಳಿಗೆ ಹರಾಜು ಹಾಕುವ ಬದಲು ನಿವೇಶನ ಹಂಚಿಕೆ ಮಾಡಬಹುದಾಗಿದ್ದು, ಕೆಂಪೇಗೌಡ ಬಡಾವಣೆಯಲ್ಲಿ ಅರ್ಜಿದಾರರಿಗೆ ನಿವೇಶನ ನೀಡುವ ಮುನ್ನ ಸದ್ಯ ನಿವೇಶನ ದೊರಕದಿರುವವರಿಗೆ ನಿವೇಶನ ಹಂಚಿಕೆ ಮಾಡುವ ಸಾಧ್ಯತೆಯನ್ನು ಬಿಡಿಎ ಪರಿಶೀಲಿಸಬೇಕಿದೆ ಎಂದರು.

ಪ್ರಕರಣದಲ್ಲಿ ಬಿಡಿಎ ತಮಗೆ ಯಾವುದೇ ನೋಟಿಸ್ ನೀಡದೆ, ಬಡಾವಣೆಯ ಮರುವಿನ್ಯಾಸವನ್ನು ಉಲ್ಲೇಖಿಸಿ ರಸ್ತೆ ರಚನೆಗೆ ತಮ್ಮ ನಿವೇಶನಗಳನ್ನು ಬಳಸಿಕೊಂಡಿದೆ. ಈಗ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಪರ್ಯಾಯ ನಿವೇಶನಗಳನ್ನು ಮಂಜೂರು ಮಾಡಲು ಬಿಡಿಎ ಮುಂದಾಗಿದೆ ಎಂದು ಅರ್ಜಿದಾರರು ಮೊರೆ ಹೋಗಿದ್ದಾರೆ.

ನಾಲಾ ಬಫರ್‌ರೆನ್‌ನಲ್ಲಿ ನಿವೇಶನಗಳನ್ನು ರೂಪಿಸಿದ ಗಂಭೀರ ಪ್ರಮಾದವನ್ನು  ಮನಗಂಡ ಬಿಡಿಎ ತಾನಾಗಿಯೇ ಬಡಾವಣೆ ಯೋಜನೆ ಮಾರ್ಪಾಡು ಮಾಡಿ, ತಾನಾಗಿಯೇ ಅನುಮೋದನೆ ನೀಡಿ, ರಸ್ತೆ ನಿರ್ಮಿಸಿ ನಿವೇಶನಗಳನ್ನು ಅಳಿಸಿ,ಈಗ ಸುಮಾರು 35 ಕಿಲೋಮೀಟರ್ ದೂರದಲ್ಲಿ ಪರ್ಯಾಯ ನಿವೇಶನಗಳನ್ನು ಮಂಜೂರು ಮಾಡಲು ಮುಂದಾಗಿರುವುದು ಎಂಬುದು ಅರ್ಜಿದಾರರ ವಾದವಾಗಿದೆ.

ದ್ವಿತೀಯ ನಾಲಾ ಬಫರ್ ಝೋನ್‌ನಲ್ಲಿ ನಿವೇಶನಗಳನ್ನು ರೂಪಿಸಿದ ಗಂಭೀರ ಪ್ರಮಾದವನ್ನು ಮನಗಂಡ ಬಿಡಿಎ ತಾನಾಗಿಯೇ ಬಡಾವಣೆ ಯೋಜನೆ ಮಾರ್ಪಾಡು ಮಾಡಿ, ತಾನಾಗಿಯೇ ಅನುಮೋದನೆ ನೀಡಿ, ರಸ್ತೆ ನಿರ್ಮಿಸಿ ನಿವೇಶನಗಳನ್ನು ಅಳಿಸಿ, ಈಗ ಸುಮಾರು 35 ಕಿಲೋಮೀಟರ್ ದೂರದಲ್ಲಿ ಪರ್ಯಾಯ ನಿವೇಶನಗಳನ್ನು ಮಂಜೂರು ಮಾಡಲು ಮುಂದಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.

click me!