ಬೆಂಗಳೂರು-ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ; ಮೆಮು ರೈಲುಗಳ ತಾತ್ಕಾಲಿಕ ನಿಲ್ದಾಣ ಬದಲಾವಣೆ ಅವಧಿ ವಿಸ್ತರಣೆ

Sathish Kumar KH   | Kannada Prabha
Published : Sep 28, 2026, 05:46 AM IST
Bengaluru Ashokapuram Memu Train Service

ಸಾರಾಂಶ

ಕೆಎಸ್ಆರ್ ಬೆಂಗಳೂರು ಮತ್ತು ಅಶೋಕಪುರಂ (ಮೈಸೂರು) ನಡುವೆ ಸಂಚರಿಸುವ ಮೆಮು ರೈಲುಗಳ ತಾತ್ಕಾಲಿಕ ಬದಲಾವಣೆಯನ್ನು ನೈಋತ್ಯ ರೈಲ್ವೆ ಮುಂದುವರಿಸಿದೆ. ಈ ರೈಲುಗಳು ಅಶೋಕಪುರಂ ಬದಲಿಗೆ ಮೈಸೂರಿನಿಂದಲೇ ತಮ್ಮ ಪ್ರಯಾಣವನ್ನು ಆರಂಭಿಸಿ, ಅಲ್ಲಿಯೇ ಮುಕ್ತಾಯಗೊಳಿಸಲಿವೆ.

ಮೈಸೂರು (ಸೆ.28): ಕಾರ್ಯಾಚರಣಾ ಕಾರಣಗಳಿಂದಾಗಿ ರೈಲು ಸಂಖ್ಯೆ 66551/ 66552 ಕೆಎಸ್ಆರ್ ಬೆಂಗಳೂರು– ಅಶೋಕಪುರಂ– ಕೆಎಸ್ಆರ್ ಬೆಂಗಳೂರು ಮೆಮು (MEMU) ರೈಲುಗಳ ತಾತ್ಕಾಲಿಕವಾಗಿ ಮೈಸೂರಿನಲ್ಲಿ ಆರಂಭ ಹಾಗೂ ಮುಕ್ತಾಯಗೊಳಿಸುವ ವ್ಯವಸ್ಥೆಯನ್ನು ನೈಋತ್ಯ ರೈಲ್ವೆ (SWR) ಮುಂದುವರಿಸಲು ನಿರ್ಧರಿಸಿದೆ.

ಈ ಹಿಂದೆ ಈ ತಾತ್ಕಾಲಿಕ ವ್ಯವಸ್ಥೆಯನ್ನು ಸೆಪ್ಟೆಂಬರ್ 26ರವರೆಗೆ ಜಾರಿಗೊಳಿಸಲಾಗಿತ್ತು. ಪ್ರಯಾಣಿಕರ ಹಿತದೃಷ್ಟಿಯಿಂದ ಈಗ ಈ ಅವಧಿಯನ್ನು ಸೆಪ್ಟೆಂಬರ್ 27ರಿಂದ 2027ರ ಮಾರ್ಚ್ 27ರವರೆಗೆ ವಿಸ್ತರಿಸಿ ಆದೇಶಿಸಲಾಗಿದೆ.

ಸಂಚಾರದಲ್ಲಿ ಉಂಟಾಗುವ ಬದಲಾವಣೆಗಳು:

ರೈಲು ಸಂಖ್ಯೆ 66551 (ಕೆಎಸ್ಆರ್ ಬೆಂಗಳೂರು– ಅಶೋಕಪುರಂ ಮೆಮು): ಈ ರೈಲು ತಾತ್ಕಾಲಿಕವಾಗಿ ಅಶೋಕಪುರಂ ನಿಲ್ದಾಣದ ಬದಲಿಗೆ ಮೈಸೂರು ನಿಲ್ದಾಣದಲ್ಲಿ ತನ್ನ ಪ್ರಯಾಣವನ್ನು ಮುಕ್ತಾಯಗೊಳಿಸಲಿದೆ.

ರೈಲು ಸಂಖ್ಯೆ 66552 (ಅಶೋಕಪುರಂ– ಕೆಎಸ್ಆರ್ ಬೆಂಗಳೂರು ಮೆಮು): ಈ ರೈಲು ತಾತ್ಕಾಲಿಕವಾಗಿ ಅಶೋಕಪುರಂ ನಿಲ್ದಾಣದ ಬದಲಿಗೆ ಮೈಸೂರು ನಿಲ್ದಾಣದಿಂದ ತನ್ನ ಪ್ರಯಾಣವನ್ನು ಆರಂಭಿಸಲಿದೆ.

ಪ್ರಯಾಣಿಕರು ಈ ಬದಲಾವಣೆಯನ್ನು ಗಮನಿಸಿ, ತಮ್ಮ ಪ್ರಯಾಣವನ್ನು ಯೋಜಿಸಿಕೊಳ್ಳುವಂತೆ ನೈಋತ್ಯ ರೈಲ್ವೆಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಗಿರೀಶ ಧರ್ಮರಾಜ ಕಲಗೊಂಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV
Read more Articles on
click me!

Recommended Stories

ವಿಧಾನಸೌಧಕ್ಕೆ ಬಾಂಬ್​ ಇಟ್ಟು ಸ್ಫೋಟಿಸಿದಂತೆ ವಿಡಿಯೋ ಹರಿಬಿಟ್ಟ ಯುವಕ! AI ಸೃಷ್ಟಿಕರ್ತ ಯಾರೀತ
ರಾಜ್ಯದ ಜನತೆಗೆ ಮತ್ತೆ ವಿದ್ಯುತ್ ದರ ಏರಿಕೆ ಶಾಕ್: ವಿಜಯದಶಮಿ, ದೀಪಾವಳಿ ತಿಂಗಳ ಬಿಲ್‌ನಲ್ಲಿ ಯುನಿಟ್‌ಗೆ 40-50 ಪೈಸೆ ಹೆಚ್ಚಳ