ಕುರುಬ ಸಮುದಾಯದ ಮತಗಳ ಸೆಳೆಯಲು ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ನ.21ರಂದು ಕೆ. ಆರ್. ಪೇಟೆಗೆ ಆಗಮಿಸುವ ಬೆನ್ನಲ್ಲೇ ದಲಿತರ ಮತ ಸೆಳೆಯಲು ಬಿಜೆಪಿ ತಂತ್ರಗಾರಿಕೆ ಆರಂಭಿಸಿದೆ.
ಮಂಡ್ಯ(ನ.20): ಕೆ. ಆರ್. ಪೇಟೆ ಉಪಚುನಾವಣೆಯಲ್ಲಿ ಅಭ್ಯರ್ಥಿಗಳು ಜಾತಿ ರಾಜಕಾರಣಕ್ಕೆ ಮುಂದಾಗಿದ್ದಾರಾ ಎಂಬ ಸಂದೇಹ ಮೂಡುವಂತಾಗಿದೆ. ಕುರುಬ ಸಮುದಾಯದ ಮತಗಳ ಸೆಳೆಯಲು ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ನ.21ರಂದು ಕೆ. ಆರ್. ಪೇಟೆಗೆ ಆಗಮಿಸುವ ಬೆನ್ನಲ್ಲೇ ದಲಿತರ ಮತ ಸೆಳೆಯಲು ಬಿಜೆಪಿ ತಂತ್ರಗಾರಿಕೆ ಆರಂಭಿಸಿದೆ.
ಬಿಜೆಪಿ ದಲಿತ ಮುಖಂಡ ಶಿವಣ್ಣ ನೇತೃತ್ವದಲ್ಲಿ ಕೆ. ಆರ್. ಪೇಟೆ ದಲಿತ ಮುಖಂಡರೊಂದಿಗೆ ಸಭೆ ನಡೆದಿದೆ. ಕೆ. ಆರ್. ಪೇಟೆಯ ಬಿಜೆಪಿ ಕಚೇರಿಯಲ್ಲಿ ಸಭೆ ನಡೆದಿದ್ದು ಸಭೆಯಲ್ಲಿ ದಲಿತ ಮತ ಸೆಳೆಯುವ ತಂತ್ರಗಾರಿಕೆ ಬಗ್ಗೆ ಚರ್ಚೆ ನಡೆದಿದೆ.
undefined
ಕೆ. ಆರ್. ಪೇಟೆ ಉಪಚುನಾವಣೆ ಬಂದೋಬಸ್ತಿಗೆ ಪ್ಯಾರಾ ಮಿಲಿಟರಿ
ಕೆಆರ್ ಪೇಟೆ ಕ್ಷೇತ್ರದಲ್ಲಿ 40 ಸಾವಿರ ದಲಿತ ಮತದಾರರು ಇದ್ದು, ಜಾತಿ ಲೆಕ್ಕಾಚಾರದಲ್ಲಿ ತಂತ್ರಗಾರಿಕೆ ರೂಪಿಸಲು ಬಿಜೆಪಿ ಮುಂದಾಗಿದೆ. 40 ಸಾವಿರ ಮತದಾರರಿರುವ ದಲಿತ ಸಮುದಾಯವನ್ನು ಸಂಪೂರ್ಣ ಸೆಳೆಯಲು ಪ್ಲಾನ್ ಮಾಡಲಾಗಿದ್ದು, ಕ್ಷೇತ್ರದಲ್ಲಿ ಎರಡನೇ ದೊಡ್ಡ ಸಮುದಾಯವಾಗಿರುವ ದಲಿತ ಸಮುದಾಯದ ಮತಗಳು ಪ್ರಮುಖ ಪಾತ್ರ ವಹಿಸುತ್ತದೆ. ನಾರಾಯಣಗೌಡ ಗೆಲುವಿಗೆ ದಲಿತ ಮತಗಳು ಬಹುಮುಖ್ಯವಾಗಿದ್ದು, ಹಾಗಾಗಿ ಬಿಜೆಪಿ ಮುಖಂಡರಿಂದ ದಲಿತ ಮತಗಳಿಗೆ ಗಾಳ ಹಾಕುವ ಕೆಲಸ ಆರಂಭವಾಗಿದೆ.
ಸರ್ಕಾರದ ರಕ್ಷಣೆಗೆ ಸ್ನೇಹಿತರು ಬರ್ತಾರೆಂಬ ವಿಶ್ವಾಸವಿದೆ: ಮಾಧುಸ್ವಾಮಿ
ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದಲಿತ ಮತದಾರರಿದ್ದಾರೆ. ಅವರನ್ನು ಸಂಪೂರ್ಣ ಬಿಜೆಪಿಯತ್ತ ಸೆಳೆಯಲು ಇಂದಿನ ಸಭೆಯಲ್ಲಿ ಚರ್ಚಿಸಲಾಗಿದೆ. ಮುಂದಿನ ದಿನಗಳಲ್ಲಿ ಡಿಸಿಎಂ ಗೋವಿಂದ ಕಾರಜೋಳ, ಸಂಸದ ಶ್ರೀನಿವಾಸ್ ಪ್ರಸಾದ್‌ರನ್ನು ಕರೆತಂದು ನಾರಾಯಣಗೌಡರ ಪರ ಪ್ರಚಾರ ನಡೆಸಲಾಗುವುದು ಎಂದು ಕೆ. ಆರ್. ಪೇಟೆಯಲ್ಲಿ ಬಿಜೆಪಿ ದಲಿತ ಮುಖಂಡ ಶಿವಣ್ಣ ಹೇಳಿದ್ದಾರೆ.
ಮಂಡ್ಯ: ಸೊಸೆಯನ್ನು ಕೊಂದ ಮಾವ ಜೈಲಿನಲ್ಲೇ ಆತ್ಮಹತ್ಯೆ
ನಾರಾಯಣಗೌಡರ ಪರ ಕ್ಷೇತ್ರದಲ್ಲಿ ಉತ್ತಮ ರೆಸ್ಪಾನ್ಸ್ ಇದೆ. ಅವರಿಗೆ ಕ್ಷೇತ್ರದ ಮತದಾರರು ಆಶೀರ್ವಾದ ಮಾಡಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ಧಾರೆ. ಡಿಸೆಂಬರ್ 5ರಂದು ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.