ಯಡಿಯೂರಪ್ಪ ಚೆನ್ನಾಗಿ ಹಾಲು ಹಿಂಡೋ ಆಕಳು ಎಂದ ಅನರ್ಹ ಶಾಸಕ

By Web Desk  |  First Published Nov 20, 2019, 1:41 PM IST

ಸಿದ್ದರಾಮಯ್ಯ ಹಾಗೂ ದೇವೇಗೌಡರ ಮಾತು ಕೇಳಿ ಸ್ಪೀಕರ್ ರಮೇಶ್ ಕುಮಾರ್ ಅವರು ನನ್ನನ್ನ ಅನರ್ಹ ಮಾಡಿದ್ರು ಎಂದ ಬಿ. ಸಿ. ಪಾಟೀಲ| ನಾನು ಕಾಂಗ್ರೆಸ್ ಗೆ ರಾಜೀನಾಮೆ ನೀಡಿದ್ದೇ ಫೈನಲ್ ನಿರ್ಧಾರವಾಗಿತ್ತು| ಕಾಂಗ್ರೆಸ್ ನವರು ನಮ್ಮ‌ಕೈ ಹಿಡಿತಾರೆ ಅಂತಾ ಮಾಡಿದ್ದೆ| ಅವರು ಕೈ ಹಿಡಿಲಿಲ್ಲ. ಅದಕ್ಕೆ ನಾವು ಅವರಿಗೆ ಕೈಕೊಟ್ಟೆವು|


ಹಿರೇಕೆರೂರು(ನ.20): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡರ ಮಾತು ಕೇಳಿ ಸ್ಪೀಕರ್ ರಮೇಶ್ ಕುಮಾರ್ ಅವರು ನನ್ನನ್ನ ಅನರ್ಹ ಮಾಡಿದ್ರು, ಕಾಂಗ್ರೆಸ್ ನವರು ನಮ್ಮ‌ಕೈ ಹಿಡಿತಾರೆ ಅಂತಾ ಮಾಡಿದ್ದೆ. ಅವರು ಕೈ ಹಿಡಿಲಿಲ್ಲ. ಅದಕ್ಕೆ ನಾವು ಅವರಿಗೆ ಕೈಕೊಟ್ಟೆವು ಎಂದು ಕಾಂಗ್ರೆಸ್ ಅನರ್ಹ ಶಾಸಕ ಬಿ. ಸಿ ಪಾಟೀಲ ಅವರು ಹೇಳಿದ್ದಾರೆ. 

ಬುಧವಾರ ತಾಲೂಕಿನ ಎಮ್ಮಿಗನೂರು ಗ್ರಾಮದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಚೆನ್ನಾಗಿ ಹಾಲು ಹಿಂಡೋ ಆಕಳು ಇದ್ದ ಹಾಗೆ, ಯಡಿಯೂರಪ್ಪ ಹಿಂದೆ ನಮ್ಮನ್ನ ಪಕ್ಷಕ್ಕೆ ಕರೆದಿದ್ದರು. ಆಗ ನಾವು ಕಾಂಗ್ರೆಸ್ ನಿಂದ ಗೆದ್ದಿದ್ದೆವು. ಕಾಂಗ್ರೆಸ್ ನವರು ನಮ್ಮ‌ಕೈ ಹಿಡಿತಾರೆ ಅಂತಾ ಮಾಡಿದ್ದೆ, ಅವರು ಕೈ ಹಿಡಿಲಿಲ್ಲ. ಅದಕ್ಕೆ ನಾವು ಅವರಿಗೆ ಕೈಕೊಟ್ಟೆವು ಎಂದು ಹೇಳಿದ್ದಾರೆ. 

Tap to resize

Latest Videos

ಹಿರೇಕರೂರು ಉಪಕದನ: ನಾಮಪತ್ರ ವಾಪಸ್ ಪಡೆದ ಶಿವಲಿಂಗ ಶಿವಾಚಾರ್ಯ ಶ್ರೀ

ಹದಿನೈದು ವಿಧಾನಸಭಾ ಕ್ಷೇತ್ರದ ಚುನಾವಣೇಲಿ ಹಿರೇಕೆರೂರು ಕ್ಷೇತ್ರ ನಂಬರ್ ಒನ್ ಆಗಬೇಕು.ಹೆಚ್ಚಿನ ಮತಗಳ ಅಂತರದಿಂದ ನನ್ನನ್ನು ಗೆಲ್ಲಿಸಬೇಕು ಎಂದು ಮತದಾರರಿಗೆ ಬಿ.ಸಿ ಪಾಟೀಲ ಅವರು ಮನವಿ ಮಾಡಿದ್ದಾರೆ. 
ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ಅಸಮಾಧಾನ ಇದೆ. ಆದರೆ, ನಮ್ಮಲ್ಲಿ ಯಾವುದೇ ಅಸಮಾಧಾನ ಇಲ್ಲ. ಯು.ಬಿ.ಬಣಕಾರ ಮತ್ತು ನಾನು ಜೋಡೆತ್ತು ರೀತಿ ಇದ್ದೇವೆ. ಉಪಚುನಾವಣೆ ಬರುತ್ತೆ ಅಂತಾ ನಾನೂ ನಿರೀಕ್ಷೆ ಕೂಡ ಮಾಡಿರಲಿಲ್ಲ ಎಂದು ಹೇಳಿದ್ದಾರೆ. 

ಹಿರೇಕೆರೂರು ಉಪಚುನಾವಣೆಯಲ್ಲಿ ಅಚ್ಚರಿ ಬೆಳವಣಿಗೆ‌:ಸ್ವಾಮೀಜಿಗೆ JDS ಗಾಳ

ಎಮ್ಮಿಗನೂರು ಗ್ರಾಮದಲ್ಲಿ ಬಿ. ಸಿ. ಪಾಟೀಲ ಅವರು ಪಾದಯಾತ್ರೆ ಮೂಲಕ ತಮಗೆ ಮತ ನೀಡುವಂತೆ ಮನವಿ ಮಾಡುತ್ತಿದ್ದಾರೆ. ಪಾಟೀಲಗೆ ಬಿಜೆಪಿ ಮಾಜಿ ಶಾಸಕ ಯು.ಬಿ.ಬಣಕಾರ ಹಾಗೂ ಕಾರ್ಯಕರ್ತರ ಸಾಥ್ ನೀಡುತ್ತಿದ್ದಾರೆ. ಗ್ರಾಮದ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಬಿ.ಸಿ.ಪಾಟೀಲರನ್ನ ಸ್ವಾಗತಿಸಿದ್ದಾರೆ.

ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ. 

click me!