ಸುಳ್ಳು ಹೇಳಿ ಕುತ್ತಿಗೆ ಹಿಸುಕುತ್ತೀರಾ..? ಎಚ್‌ಡಿಕೆಗೆ ನಾರಾಯಣ ಗೌಡ ಟಾಂಗ್

By Web Desk  |  First Published Nov 28, 2019, 12:58 PM IST

ಎಚ್‌. ಡಿ. ಕುಮಾರಸ್ವಾಮಿ ನನ್ನ ಕುತ್ತಿಗೆ ಹಿಸುಕಲು ಹೊರಟಿದ್ದಾರೆ. ಅದಕ್ಕಾಗಿ ಅತ್ತಿದ್ದಾರೆ ಎಂದು ಕೆ. ಆರ್. ಪೇಟೆ ಬಿಜೆಪಿ ಅಭ್ಯರ್ಥಿ ಕೆ. ಸಿ. ನಾರಾಯಣ ಗೌಡ ಹೇಳಿದ್ದಾರೆ. ಮಂಡ್ಯದಲ್ಲಿ ಮಾತನಾಡಿದ ಅವರು ಕುಮಾರಸ್ವಾಮಿ ಅವರಿಗೆ ಟಾಂಗ್ ಕೊಟ್ಟಿದ್ದಾರೆ.


ಮಂಡ್ಯ(ನ.28): ಎಚ್‌. ಡಿ. ಕುಮಾರಸ್ವಾಮಿ ನನ್ನ ಕುತ್ತಿಗೆ ಹಿಸುಕಲು ಹೊರಟಿದ್ದಾರೆ. ಅದಕ್ಕಾಗಿ ಅತ್ತಿದ್ದಾರೆ ಎಂದು ಕೆ. ಆರ್. ಪೇಟೆ ಬಿಜೆಪಿ ಅಭ್ಯರ್ಥಿ ಕೆ. ಸಿ. ನಾರಾಯಣ ಗೌಡ ಹೇಳಿದ್ದಾರೆ. ಮಂಡ್ಯದಲ್ಲಿ ಮಾತನಾಡಿದ ಅವರು ಕುಮಾರಸ್ವಾಮಿ ಅವರಿಗೆ ಟಾಂಗ್ ಕೊಟ್ಟಿದ್ದಾರೆ.

ಕೆ.ಆರ್‌.ಪೇಟೆಯಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಸಿ.ನಾರಾಯಣಗೌಡ ಮಾತನಾಡಿ, ಕುಮಾರಣ್ಣ ಅತ್ತಿದ್ದಾರೆ. ಯಾಕಂದ್ರೆ ನನ್ನ ಕುತ್ತಿಗೆ ಹಿಸುಕಲು ಹೊರಟಿದ್ದಾರೆ. ಅವರಿಗೆ ಅವರ ಕುಟುಂಬದವರು ಬಿಟ್ಟು ಬೇರೆ ಯಾರು ಒಕ್ಕಲಿಗರು ಬೆಳೆಯಬಾರದು. ನನ್ನ ಕುತ್ತಿಗೆ ಹಿಸುಕೋದಾದ್ರೆ ಮನೆಗೆ ಕರೆಸಿಕೊಂಡು  ಹಿಸುಕಲಿ ಎಂದಿದ್ದಾರೆ.

Tap to resize

Latest Videos

undefined

ತಮ್ಮಣ್ಣಗೆ ಕಾಮಾಟಿಪುರ ಗೊತ್ತಿದೆ ಅಂದ್ರೆ ಅವರಿಗೆ ಅನುಭವವಿರಬೇಕು: ನಾರಾಯಣ ಗೌಡ

ನಾನು ಅವರಿಗೆ ಪತ್ರ ಬರೆದಿದ್ದೇನೆ ಅಂತಾ ಹೇಳಿದ್ದಾರೆ. ಭಗವಂತ ಸಾಕ್ಷಿಯಾಣೆ ನಾನು ಅವರಿಗೆ ಪತ್ರ ಬರೆದಿಲ್ಲ. ಇದು ಅವರೇ ಹುಟ್ಟು ಹಾಕುತ್ತಿರುವ ಕಥೆ. ಕುಮಾರಸ್ವಾಮಿ ಮತ ಕೇಳಲಿ, ಪಕ್ಷ ಬೆಳಸಲಿ. ಆದ್ರೆ ಸುಳ್ಳು ಹೇಳವ ಸ್ಥಿತಿಯನ್ನು ನಿಲ್ಲಿಸಿ ಎಂದು ಹೇಳಿದ್ದಾರೆ.

ಸುಳ್ಳು ಹೇಳಿ ಹೇಳಿ ನಮ್ಮ ಸ್ಥಿತಿ ಹೀಗೆ ಆಯ್ತು. ನಿಮ್ಮನ್ನ ದೂರ ಮಾಡಿಕೊಂಡು ಬರೋದಕ್ಕೆ ನೀವು ಸುಳ್ಳು ಹೇಳಿದ್ದೆ ಕಾರಣ. ಸುಳ್ಳು ಹೇಳಿ ನಮ್ಮ ಕುತ್ತಿಗೆ ಯಾಕೆ ಹಿಸುಕಲು ಹೊರಟಿದ್ದೀರಾ ಎಂದು ಎಚ್.ಡಿ.ಕುಮಾರಸ್ವಾಮಿಗೆ ನಾರಾಯಣಗೌಡ ಪ್ರಶ್ನೆ ಮಾಡಿದ್ದಾರೆ.

ಉಪಚುನಾವಣೆ: ಮಂಡ್ಯದಲ್ಲಿ 52 ಲಕ್ಷ ರೂಪಾಯಿ ವಶ

click me!