ಯಡಿಯೂರಪ್ಪ 30 ಸ್ಥಾನಗಳಲ್ಲಿಯೂ ಗೆಲ್ಲಲಿ : ಡಿಕೆಶಿ!

Published : Nov 28, 2019, 12:52 PM ISTUpdated : Nov 28, 2019, 12:57 PM IST
ಯಡಿಯೂರಪ್ಪ 30 ಸ್ಥಾನಗಳಲ್ಲಿಯೂ ಗೆಲ್ಲಲಿ : ಡಿಕೆಶಿ!

ಸಾರಾಂಶ

ನಾನು ಚುನಾವಣೆ ನಡೆಯುವ ಎಲ್ಲಾ ಕ್ಷೇತ್ರಗಳಲ್ಲಿಯೂ ಪ್ರಚಾರ ಮಾಡ್ತೀನಿ. ಯಡಿಯೂರಪ್ಪ 15 ಕ್ಷೇತ್ರ ಬಿಟ್ಟು 30 ಕ್ಷೇತ್ರಗಳಲ್ಲಿಯೂ ಗೆಲ್ಲಲ್ಲಿ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ. 

ಬೆಂಗಳೂರು [ನ.28]: ರಾಜ್ಯದಲ್ಲಿ ಉಪ ಚುನಾವಣಾ ಕಣ ರಂಗೇರಿದೆ. ಚುನಾವಣಾ ಕ್ಷೇತ್ರಗಳಲ್ಲಿ ಭರ್ಜರಿ ಪ್ರಚಾರ ಕಾರ್ಯ ನಡೆಯುತ್ತಿದೆ. 

ರಾಜ್ಯದಲ್ಲಿ ಅನರ್ಹತೆಯಿಂದ ತೆರವಾದ 15 ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯಲಿದ್ದು, ಯಡಿಯೂರಪ್ಪ 15 ಅಲ್ಲ 30 ಸ್ಥಾನಗಳಲ್ಲಿಯೂ ಗೆಲ್ಲಲಿ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. 

ಬೆಂಗಳೂರಿನಲ್ಲಿ ಮಾತನಾಡಿದ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ನಾನು ಯಾವುದೇ ಭವಿಷ್ಯ ಹೇಳುವುದಿಲ್ಲ. ಎಷ್ಟಾದರೂ ಗೆಲ್ಲಲ್ಲಿ ಎಂದರು. 

ಇನ್ನು ವಿವಿಧ ಉಪ ಚುನಾವಣಾ ಕ್ಷೇತ್ರಗಳಲ್ಲಿ ಪ್ರಚಾರ ನಡೆಸುವ ಬಗ್ಗೆಯೂ ಪ್ರತಿಕ್ರಿಯಿಸಿದ ಡಿಕೆಶಿ ನಾನು ಗೋಕಾಕ್ ಸೇರಿದಂತೆ ಎಲ್ಲಾ 15 ಕಡೆಯೂ ಪ್ರಚಾರಕ್ಕೆ ಹೋಗುತ್ತೇನೆ ಎಂದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಎಲ್ಲಾ ಕಡೆಯೂ ಕವರ್ ಮಾಡಲಿದ್ದು, ರಾಣೆಬೆನ್ನೂರು, ಹಿರೇಕೆರೂರು ಕ್ಷೇತ್ರಗಳಿಗೆ ಹೋಗಿ ನಮ್ಮ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸುತ್ತೇನೆ. ಪಕ್ಷ ಯಾವ ರೀತಿ ಪ್ರಚಾರಕ್ಕೆ ನಿಯೋಜನೆ ಮಾಡಿರುತ್ತದೆಯೋ ಹಾಗೆ ತೊಡಗಿಕೊಳ್ಳಬೇಕಾಗುತ್ತದೆ ಎಂದರು. 

ಇನ್ನು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ನಡೆಯುವ ವಿಚಾರದ ಬಗ್ಗೆಯೂ ಪ್ರತಿಕ್ರಿಯಿಸಿದ ಡಿಕೆಶಿ, ನಮ್ಮ ಕಾರ್ಯಕರ್ತರು ಯಾವ ದಬ್ಬಾಳಿಕೆಗೂ ಬಗ್ಗುವುದಿಲ್ಲ. ಜಗ್ಗುವುದಿಲ್ಲ. ಯಾರಿಗೂ ಪ್ರಚಾರದ ವಿಷಯದಲ್ಲಿ ಪ್ರತಿಷ್ಟೆ ಇಲ್ಲ ಎಂದು ಹೇಳಿದರು.   

ಡಿಸೆಂಬರ್ 5 ರಂದು ರಾಜ್ಯದಲ್ಲಿ ಉಪ ಚುನಾವಣೆ ನಡೆಯಲಿದ್ದು, 9 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

PREV
click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!