ರೈಲು ನಿಲ್ದಾಣಕ್ಕೆ ಪೇಜಾವರಶ್ರೀ ಹೆಸರು: ಕೇಂದ್ರ ಸಚಿವರಿಗೆ ಕೋಟ ಶಿಫಾರಸು

By Kannadaprabha NewsFirst Published Jan 14, 2020, 2:03 PM IST
Highlights

ರೈಲು ನಿಲ್ದಾಣಕ್ಕೆ ‘ಪೇಜಾವರ ರೈಲು ನಿಲ್ದಾಣ’ ಎಂದು ನಾಮಕರಣ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕೇಂದ್ರ ರೈಲ್ವೆ ಸಚಿವರಿಗೆ ಶಿಫಾರಸು ಪತ್ರ ಬರೆದಿದ್ದಾರೆ.

ಮಂಗಳೂರು(ಜ.14): ಕೊಂಕಣ ರೈಲುಮಾರ್ಗ ವ್ಯಾಪ್ತಿಯಲ್ಲಿರುವ ಜೋಕಟ್ಟೆ ರೈಲು ನಿಲ್ದಾಣಕ್ಕೆ ‘ಪೇಜಾವರ ರೈಲು ನಿಲ್ದಾಣ’ ಎಂದು ನಾಮಕರಣ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕೇಂದ್ರ ರೈಲ್ವೆ ಸಚಿವರಿಗೆ ಶಿಫಾರಸು ಪತ್ರ ಬರೆದಿದ್ದಾರೆ.

ಉಡುಪಿ ಪೇಜಾವರ ಮಠದ ಮೂಲಮಠ ಕೆಂಜಾರಿನಲ್ಲಿದ್ದು, ಇಲ್ಲಿರುವ ರೈಲು ನಿಲ್ದಾಣಕ್ಕೆ ಪೇಜಾವರ ಶ್ರೀಗಳ ಹೆಸರಿಡುವಂತೆ ಸ್ಥಳೀಯ ಗ್ರಾಮ ವಾಸಿಗಳು ಹಾಗೂ ರೈಲ್ವೆ ಹೋರಾಟಗಾರರ ಬೇಡಿಕೆಯಂತೆ ಈ ಶಿಫಾರಸು ಪತ್ರವನ್ನು ಸಲ್ಲಿಸಲಾಗಿದೆ.

ಚುಕುಬುಕು ರೈಲಿನಲ್ಲೇ ಕುಳಿತು ಪಾಠ ಕೇಳಲಿದ್ದಾರೆ ಸರ್ಕಾರಿ ಶಾಲೆ ಮಕ್ಕಳು..!

2016ರಲ್ಲಿ ಜೋಕಟ್ಟೆರೈಲು ನಿಲ್ದಾಣ ನಿರ್ಮಾಣವಾದಂದಿನಿಂದಲೂ ಈ ಬೇಡಿಕೆ ಕೇಳಿಬರುತ್ತಿದೆ. ಇದೀಗ ಬೇಡಿಕೆಗೆ ಸ್ಪಂದಿಸಿರುವ ಕೋಟ ಶ್ರೀನಿವಾಸ ಪೂಜಾರಿ ರೈಲ್ವೆ ಸಚಿವರಿಗೆ ಶಿಫಾರಸು ಪತ್ರ ಬರೆದಿದ್ದಾರೆ.

'ಖಾಸಗಿ ರೈಲು ಅಪಘಾತಕ್ಕೀಡಾದರೆ ರೈಲ್ವೆ ಪರಿಹಾರ ಇಲ್ಲ'

click me!