ಮಂಗಳೂರಿಂದ ಮೈಸೂರು, ಬೆಂಗಳೂರಿಗೆ ಮಲ್ಟಿಆ್ಯಕ್ಸೆಲ್‌ ವೋಲ್ವೊ

Kannadaprabha News   | Asianet News
Published : Jan 14, 2020, 01:53 PM ISTUpdated : Jan 14, 2020, 02:49 PM IST
ಮಂಗಳೂರಿಂದ ಮೈಸೂರು, ಬೆಂಗಳೂರಿಗೆ ಮಲ್ಟಿಆ್ಯಕ್ಸೆಲ್‌ ವೋಲ್ವೊ

ಸಾರಾಂಶ

ಮಂಗಳೂರು - ಮೈಸೂರು- ಮಂಗಳೂರು ಮಾರ್ಗದಲ್ಲಿ ಹೊಸ ವೋಲ್ವೊ ಸಾರಿಗೆಯನ್ನು ಹಾಗೂ ಮಂಗಳೂರು- ಬೆಂಗಳೂರು- ಮಂಗಳೂರು ಮಾರ್ಗದಲ್ಲಿ ಹೊಸ ಮಲ್ಟಿಆ್ಯಕ್ಸೆಲ್‌ ವೋಲ್ವೊ ಸಾರಿಗೆಯನ್ನು ಜನವರಿ 11ರಿಂದ ಆಂಭಿಸಲಾಗಿದೆ.

ಮಂಗಳೂರು(ಜ.14): ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮಂಗಳೂರು ವಿಭಾಗದಿಂದ ಮಂಗಳೂರು - ಮೈಸೂರು- ಮಂಗಳೂರು ಮಾರ್ಗದಲ್ಲಿ ಹೊಸ ವೋಲ್ವೊ ಸಾರಿಗೆಯನ್ನು ಹಾಗೂ ಮಂಗಳೂರು- ಬೆಂಗಳೂರು- ಮಂಗಳೂರು ಮಾರ್ಗದಲ್ಲಿ ಹೊಸ ಮಲ್ಟಿಆ್ಯಕ್ಸೆಲ್‌ ವೋಲ್ವೊ ಸಾರಿಗೆಯನ್ನು ಜನವರಿ 11ರಿಂದ ಆಂಭಿಸಿದೆ.

ಮಂಗಳೂರು- ಮೈಸೂರು- ಮಂಗಳೂರು ವೋಲ್ವೊ ಬಸ್‌ ಮಂಗಳೂರು ಬಸ್ಸು ನಿಲ್ದಾಣದಿಂದ ಬೆಳಗ್ಗೆ 5.30 ಗಂಟೆಗೆ ಹೊರಟು ಪುತ್ತೂರು 6.30, ಸುಳ್ಯ 7.20, ಮಡಿಕೇರಿ 8.30 ಮಾರ್ಗವಾಗಿ ಮೈಸೂರಿಗೆ ರಾತ್ರಿ 10.30 ಗಂಟೆಗೆ ತಲುಪುವುದು ಹಾಗೂ ಮರು ಪ್ರಯಾಣದಲ್ಲಿ ಮೈಸೂರಿನಿಂದ ಬೆಳಗ್ಗೆ 7 ಗಂಟೆಗೆ ಹೊರಟು ಮಡಿಕೇರಿಗೆ 9 ಗಂಟೆ, ಸುಳ್ಯ 10.10, ಪುತ್ತೂರು 11 ಮಾರ್ಗವಾಗಿ ಮಂಗಳೂರಿಗೆ 12 ಗಂಟೆಗೆ ತಲುಪಲಿದೆ.

ಮೈಸೂರು ವಿವಿ ಫ್ರೀ ಕಾಶ್ಮೀರ ಪೋಸ್ಟರ್ ಪ್ರಕರಣ; ಹಿಂದೆ ಸರಿದ ವಕೀಲ

ಮಂಗಳೂರು- ಬೆಂಗಳೂರು- ಮಂಗಳೂರು ಮಲ್ಟಿಆ್ಯಕ್ಸೆಲ್‌ ವೋಲ್ವೊ ಬಸ್‌ ಮಂಗಳೂರಿನಿಂದ ಬೆಳಗ್ಗೆ 7 ಗಂಟೆಗೆ ಹೊರಟು ಪುತ್ತೂರಿಗೆ 8 ಗಂಟೆ, ಮಡಿಕೇರಿ 10, ಮೈಸೂರು 1 ಗಂಟೆಗೆ ತಲುಪಿ ಬೆಂಗಳೂರಿಗೆ 3 ಗಂಟೆಗೆ ತಲುಪಲಿದೆ. ಮರು ಪ್ರಯಾಣದಲ್ಲಿ ಬೆಂಗಳೂರಿನಿಂದ 11 ಗಂಟೆಗೆ ಹೊರಟು ಮೈಸೂರು 2.30, ಮಡಿಕೇರಿ 4.30, ಪುತ್ತೂರು ಮಾರ್ಗವಾಗಿ ಮಂಗಳೂರಿಗೆ 6.45 ಗಂಟೆಗೆ ತಲುಪಲಿದೆ.

ಪತಿ ಕೊಂದು ಹೂತಿಟ್ಲು; ಎರಡೂವರೆ ವರ್ಷಗಳ ನಂತ್ರ ಬಯಲಾದ ಕೊಲೆ ರಹಸ್ಯ..!

ಅವತಾರ್‌ ವ್ಯವಸ್ಥೆ ಮೂಲಕ ಮುಂಗಡ ಆಸನ ಕಾದಿರಿಸುವ ವ್ಯವಸ್ಥೆ ಇದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆ ತಿಳಿಸಿದೆ.

PREV
click me!

Recommended Stories

ಗೃಹ ಲಕ್ಷ್ಮೀ ಅಡಿ 1.24 ಕೋಟಿ ಸ್ತ್ರೀಯರಿಗೆ ₹1.54 ಕೋಟಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಬೆಂಗಳೂರು : ಹೊಸ ಮಾರ್ಗಗಳಿಗೆ ಬರಲಿವೆ ಚಾಲಕ ರಹಿತ ರೈಲು