ಭಕ್ತ ಅರ್ಪಿಸಿದ್ದ ಮದ್ಯ ಕದ್ದ ವ್ಯಕ್ತಿಗೆ ಕೊರಗಜ್ಜ ಶಿಕ್ಷೆ: ಭಾರಿ ಚರ್ಚೆ

By Kannadaprabha NewsFirst Published Oct 24, 2021, 8:17 AM IST
Highlights
  •  ಭಕ್ತರು ತನಗೆ ಅರ್ಪಿಸಿದ್ದ ಮದ್ಯ ಕದ್ದಾತನಿಗೆ ಕೊರಗಜ್ಜ ಶಿಕ್ಷೆ 
  •  ಕೊರಗಜ್ಜ ಶಿಕ್ಷೆ ನೀಡಿದ್ದಾನೆ ಮಾತುಗಳು ಕೊಡಗು ಜಿಲ್ಲೆಯ ಸುಂಟಿಕೊಪ್ಪ ಸಮೀಪದ ಕೆದಕಲ್‌ ಗ್ರಾಮದಲ್ಲಿ ಕೇಳಿಬಂದಿವೆ

 ಮಡಿಕೇರಿ (ಅ.23):  ಭಕ್ತರು ತನಗೆ ಅರ್ಪಿಸಿದ್ದ ಮದ್ಯ ಕದ್ದಾತನಿಗೆ ಕೊರಗಜ್ಜ (Koragajja) ಶಿಕ್ಷೆ ನೀಡಿದ್ದಾನೆ ಮಾತುಗಳು ಕೊಡಗು (kodagu) ಜಿಲ್ಲೆಯ ಸುಂಟಿಕೊಪ್ಪ ಸಮೀಪದ ಕೆದಕಲ್‌ ಗ್ರಾಮದಲ್ಲಿ ಕೇಳಿಬಂದಿವೆ. 

ವಾರದ ಹಿಂದೆ ವ್ಯಕ್ತಿಯೊಬ್ಬ ಕೊರಗಜ್ಜ ದೇವಸ್ಥಾನದಿಂದ (Temple) ಮದ್ಯದ (Liquor) ಪ್ಯಾಕೆಟ್‌ ಕದ್ದಿದ್ದ. ಸಿಸಿಟಿವಿಯಲ್ಲಿ ಕೃತ್ಯ ಸೆರೆಯಾಗಿತ್ತು. ಭಕ್ತರು ಅರ್ಪಿಸಿದ್ದ ಮದ್ಯದ ಪ್ಯಾಕೆಟ್‌ ಕಾಣೆಯಾದ ಹಿನ್ನೆಲೆಯಲ್ಲಿ ಕದ್ದವನಿಗೆ ಶಿಕ್ಷೆ ಕೊಡುವಂತೆ ಅರ್ಚಕ ಉಮೇಶ್‌ ಕೊರಗಜ್ಜನಿಗೆ ಹರಕೆ ಕಟ್ಟಿದ್ದರು. 

ಕೊರಗಜ್ಜ ಬಳಿಕ ಮಂಗಳೂರಿನ ಪಿಲಿಚಾಮುಂಡಿ ದೇಗುಲ ಹುಂಡಿಯಲ್ಲಿ ಕಾಂಡೋಮ್ ಪತ್ತೆ!

ಹರಕೆ ಕಟ್ಟಿಎರಡೇ ದಿನದಲ್ಲಿ ಮದ್ಯ ಕದ್ದಾತನ ಕಣ್ಣಿಗೆ ಹಾನಿಯಾಗಿದೆ, ಕಣ್ಣು (Eye) ಕಪ್ಪಾಗಿ ಊತ ಬಂದು ಸಂಪೂರ್ಣ ಮುಚ್ಚಿ ಹೋಗಿದೆ ಎಂದು ಜನರು ಹೇಳಿದ್ದಾರೆ. ನಂತರ ಆತ ಕೊರಗಜ್ಜನ ಬಳಿ ಬಂದು ಹರಕೆ ನೀಡಿ ಕ್ಷಮೆ ಕೇಳಿದ್ದಾನೆ. ಕ್ಷಮಾಪಣೆ ಬಳಿಕ ಸುಧಾರಿಸಿಕೊಳ್ಳುತ್ತಿದ್ದಾನೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.

ದಕ್ಷಿಣ ಕನ್ನಡ (Dakshina kannada), ಕೊಡಗು ಭಾಗದಲ್ಲಿ ಕೊರಗಜ್ಜನ ಪವಾಡ ಹೆಚ್ಚಿದ್ದು, ತಮ್ಮ ಇಷ್ಟಾರ್ಥಗಳು ಈಡೇರಲು ಭಕ್ತರು ಮದ್ಯ, ಚಕ್ಕುಲಿ ಮತ್ತು ಒಂದು ಕಟ್ಟು ಬೀಡಿ ಅಥವಾ ವೀಳ್ಯದೆಲೆ ಮತ್ತಿತರ ವಸ್ತುಗಳನ್ನು ಕೊರಗಜ್ಜನಿಗೆ ಹರಕೆಯಾಗಿ ಸಲ್ಲಿಸುವುದು ವಾಡಿಕೆ.

ಮತ್ತೊಂದು ದೇಗುದಲ್ಲಿ ಕಾಂಡೋಮ್

ಎರಡು ದಿನಗಳ ಹಿಂದೆಯಷ್ಟೇ ಮಂಗಳೂರಿನ ಕೊರಗಜ್ಜ ದೇವಸ್ಥಾನದ ಹುಂಡಿಗೆ ಕಾಂಡೋಮ್ ಹಾಕಿ, ನೋವು ಅನುಭವಿಸುತ್ತಿದ್ದ ಇಬ್ಬರು ಶರಣಾಗಿ, ಪೊಲೀಸರ ಅತಿಥಿಯಾಗಿದ್ದಾರೆ. ಆ ಮೂಲಕ ದಕ್ಷಿಣ ಕನ್ನಡ ದೈವಗಳ ಶಕ್ತಿ ಏನೆಂಬುವುದು ಜಾಗಜ್ಜಾಹೀರಾಗಿದೆ. ಆದರೂ, ಕಿಡಿಕೇಡಿಗಳು ತಮ್ಮ ದುಷ್ಕೃತ್ಯವನ್ನು ಮುಂದುವರಿಸಿದ್ದು, ಮತ್ತೆ ದೇವಸ್ಥಾನದ ಹುಂಡಿಯಲ್ಲಿ ಕಾಂಡೋಮ್ ಪತ್ತೆಯಾಗಿದೆ. 
 
ಮಂಗಳೂರು ಹೊರವಲಯದ ಕೊಂಡಾಣ ಬಂಟ ಪಿಲಿಚಾಮುಂಡಿ ದೈವಸ್ಥಾನದ ಹುಂಡಿಯಲ್ಲಿ ಕಾಂಡೋಮ್ ಪತ್ತೆಯಾಗಿದ್ದು, ಆಡಳಿತ ಮಂಡಳಿ ಇಂದು ಹುಂಡಿ ಒಡೆಯುವ ಸಂದರ್ಭದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. 

ಕೊರಗಜ್ಜನ ಹುಂಡಿಗೆ ಕಾಂಡೋಮ್, ಅಶ್ಲೀಲ ಬರಹ : ಓರ್ವ ಸಾವು- ಮತ್ತಿಬ್ಬರು ಶರಣು ...
ಮೂರು ತಿಂಗಳ ಹಿಂದಷ್ಟೇ ಕಾಣಿಕೆ ಹುಂಡಿ ತೆರೆಯಲಾಗಿತ್ತು. ಇಂದು ಮತ್ತೆ ಹುಂಡಿ ತೆರೆದಾಗ ಕಾಂಡೋಮ್ ಪತ್ತೆಯಾಗಿದೆ. ಈ ಹಿಂದೆ ಮಂಗಳೂರಿನ ಅನೇಕ ದೈವಸ್ಥಾನಗಳ ಹುಂಡಿಯಲ್ಲಿ ಕಾಂಡೋಮ್ ಪತ್ತೆಯಾಗಿತ್ತು. ಇದೀಗ ಈ ದೇವಾಲಯದ ಹುಂಡಿಯಲ್ಲಿಯೂ  ಕಾಂಡೋಮ್ ಪತ್ತೆಯಾಗಿತ್ತು. 

click me!