ವಿಜಯನಗರ ರಾಜಮನೆತನದ 100 ವರ್ಷ ಹಳೆಯ ಚಿನ್ನದ ಸೀರೆ ಖರೀದಿಸುವ ಭಾಗ್ಯ? ಏನಿದರ ವಿಶೇಷತೆ

Published : Sep 26, 2026, 06:13 PM IST
Hampi Golden Saree

ಸಾರಾಂಶ

ವಿಜಯನಗರ ರಾಜಮನೆತನದ ಶ್ರೀಮತಿ ರತ್ನಶ್ರೀ ಅವರು 100 ವರ್ಷಕ್ಕೂ ಹಳೆಯದಾದ ಮಹಾರಾಣಿ ಲಾಲ್ ಕುಮಾರಿ ಬಾಯಿ ಅವರ ಬಂಗಾರದ ಸೀರೆಯ ವಿಶೇಷತೆಗಳನ್ನು ಹಂಚಿಕೊಂಡಿದ್ದಾರೆ. ಚಿನ್ನದ ಎಳೆಗಳಿಂದ 'ಸದಾ ಸೌಭಾಗ್ಯವತಿ ರಹೋ' ಎಂದು ಬರೆಯಲಾಗಿರುವ ಈ ಸೀರೆಯು ಐತಿಹಾಸಿಕ ವಿನ್ಯಾಸವನ್ನು ಹೊಂದಿದೆ.

ಹಂಪಿ: ಮಹಿಳೆಯರಿಗೆ ಮನೆಯಲ್ಲಿ ನೂರಾರು ಸೀರೆಗಳಿದ್ರೂ ಮತ್ತೊಂದು ಖರೀದಿಸಬೇಕು ಅನ್ನೋದು ಮಹತ್ವಾಕಾಂಕ್ಷೆಯನ್ನು ಹೊಂದಿರುತ್ತಾರೆ. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ 80ರ ಕಾಲಘಟ್ಟದ ಫೋಟೋಗಳು ಟ್ರೆಂಡಿಂಗ್‌ನಲ್ಲಿವೆ. ಅದೇ ರೀತಿ ಸಾಂಪ್ರದಾಯಿಕ ಮತ್ತು ಐತಿಹಾಸಿಕ ಹಿನ್ನೆಲೆಯುಳ್ಳ ವಿನ್ಯಾಸದ ಸೀರೆಗಳತ್ತ ಮಹಿಳೆಯರು ಆಕರ್ಷಿತರಾಗುತ್ತಿದ್ದಾರೆ. ಇಂದು ನಾವು ನಿಮಗೆ ವಿಜಯನಗರ ಕಾಲದ ಬಂಗಾರದ ಸೀರೆ ಬಗ್ಗೆ ಹೇಳುತ್ತಿದ್ದೇವೆ.

ಮಹಾರಾಣಿ ಲಾಲ್ ಕುಮಾರಿ ಬಾಯಿ ಅವರ ಸೀರೆ

ವಿಜಯನಗರ ರಾಜಮನೆತನದವರಾದ ಶ್ರೀಮತಿ ರತ್ನಶ್ರೀ ಶ್ರೀಕೃಷ್ಣದೇವರಾಯ ಅವರು ತಮ್ಮ ಮನೆತನದ ಬಂಗಾರದ ಸೀರೆ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ. Mysoorina kathegalu ಯುಟ್ಯೂಬ್ ಚಾನೆಲ್‌ಗೆ ನೀಡಿರುವ ಸಂದರ್ಶನದಲ್ಲಿ ಚಿನ್ನದ ಸೀರೆ ಮತ್ತು ಚಿನ್ನದ ರವಿಕೆ ಹಾಗೂ ಅದರಲ್ಲಿನ ವಿಶೇಷತೆಯನ್ನು ಶ್ರೀಮತಿ ರತ್ನಶ್ರೀ ವಿವರಿಸಿದ್ದಾರೆ. ಸ್ವತಂತ್ರಪೂರ್ವದ ಕೊನೆಯ ಆನೆಗೊಂದಿಯ ಮಹಾರಾಣಿಯಾಗಿದ್ದ ಲಾಲ್ ಕುಮಾರಿ ಬಾಯಿ ಅವರ ಸೀರೆ ಇದಾಗಿದೆ.

ಚಿನ್ನದ ಸೀರೆಯ ವಿಶೇಷತೆ ಏನು?

ಈ ಸೀರೆಯು ಶ್ರೀಮತಿ ರತ್ನಶ್ರೀ ಅವರಿಗೆ ಅತ್ತೆಯಿಂದ ಬಂದಿರುವ ಬಳುವಳಿಯಾಗಿದೆ. ರತ್ನಶ್ರೀ ಅವರ ಅತ್ತೆಗೆ ಈ ಸೀರೆಯನ್ನು ಅವರತ್ತೆ ನೀಡಿದ್ದರು. ಹಾಗಾಗಿ ಇದು 100 ವರ್ಷಕ್ಕೂ ಹಳೆಯದಾದ ಸೀರೆಯಾಗಿದೆ. ಒಮ್ಮೆ ಸೀರೆಯನ್ನು ಪರಿಶೀಲಿಸುವಾಗ ಅದರ ಮೇಲಿರುವ ಬರಹವನ್ನು ರತ್ನಶ್ರೀಯವರು ಗಮನಿಸಿದ್ದಾರೆ. ಈ ಸೀರೆಯನ್ನು ಮನೆಗೆ ಬಂದಂತಹ ವಧುವಿಗೆ ನೀಡಲಾಗಿತ್ತು. ಹಾಗಾಗಿ ಸೀರೆ ಮೇಲೆ ಬಂಗಾರದ ಎಳೆಗಳಿಂದ "ಸದಾ ಸೌಭಾಗ್ಯವತಿ ರಹೋ" (ಯಾವಾಗಲೂ ದೀರ್ಘಸುಮಂಗಲಿಯಾಗಿರು) ಎಂದು ಬರೆಯಲಾಗಿತ್ತು.

ಸೀರೆ ಮಧ್ಯದ ಭಾಗದಲ್ಲಿ ಸಣ್ಣ ಸಣ್ಣ ಸ್ವಸ್ಚಿಕ್ ಚಿಹ್ನೆಗಳ ಕುಸೂರಿ ಕೆಲಸವನ್ನು ಮಾಡಲಾಗಿದೆ. ಗೋಲ್ಡನ್ ಕಲರ್ ಸೀರೆಯ ಬಾರ್ಡರ್‌ನಲ್ಲಿ ಹಸಿರು ಬಣ್ಣದ ಥ್ರೆಡ್ ವರ್ಕ್ ಮಾಡಲಾಗಿದೆ. ಈ ಥ್ರೆಡ್ ವರ್ಕ್ ಮೇಲೆ ಮತ್ತು ಸೆರಗಿನ ಮೇಲೆ ಸದಾ ಸೌಭಾಗ್ಯವತಿ ರಹೋ ಎಂಬ ಬರಹಗಳಿವೆ. ಇನ್ನು ಸೀರೆಯ ರವಿಕೆಯು ಬಂಗಾರದ ಎಳೆಗಳನ್ನು ಹೊಂದಿದ್ದು, ಯುರೋಪಿಯನ್ ಶೈಲಿಯಂತೆ ಸಣ್ಣದ ಬೋ ಹೊಂದಿದೆ. ಹಾಗೆಯೇ ಹಿಂಭಾಗದಲ್ಲಿ ನೆಟ್ ಫ್ಯಾಬ್ರಿಕ್ ಹೊಂದಿದೆ.

ಹಿಂಭಾಗದ ಫ್ಯಾಬ್ರಿಕ್ ಸಂಪೂರ್ಣವಾಗಿ Adjustable ಆಗಿದ್ದು, ಹೆವಿ ಸೀರೆಗಳನ್ನು ಧರಿಸಿದಾಗ ನೆಟ್ ಫ್ಯಾಬ್ರಿಕ್ ಕೂಲ್ ಮಾಡುತ್ತದೆ. 100ಕ್ಕೂ ಹೆಚ್ಚು ವರ್ಷದ ಹಳೆಯದಾದ ಸೀರೆಯಾದ್ರೂ ಇದನ್ನು ಇಂದಿಗೂ ಧರಿಸಬಹುದು ಎಂದು ಶ್ರೀಮತಿ ರತ್ನಶ್ರೀ ಶ್ರೀಕೃಷ್ಣದೇವರಾಯ ಹೇಳುತ್ತಾರೆ.

ನೀವು ಖರೀದಿ ಮಾಡಬಹುದು!

ರಾಜಮನೆತನದ ಮಾದರಿಯಲ್ಲಿಯೇ ಶ್ರೀಮತಿ ರತ್ನಶ್ರೀ ಶ್ರೀಕೃಷ್ಣದೇವರಾಯ ಕಾಂಚೀವರಂ ಸೀರೆಯನ್ನು ತೆಗೆದುಕೊಂಡು ಮಾರುಕಟ್ಟೆಗೆ ಬಂದಿದ್ದಾರೆ. ಈ ಬಂಗಾರ ಸೀರೆಯನ್ನು ಲಾಂಚ್ ಮಾಡಲಾಗಿದ್ದು, ಇದರಲ್ಲಿ "ಸೌಭಾಗ್ಯವತಿ ಭವ" ಎಂಬ ಅಕ್ಷರಗಳ ಕುಸೂರಿ ಕೆಲಸವಿದೆ. ಇನ್ನು ಬಾರ್ಡರ್‌ನಲ್ಲಿ ಮೀನುಗಳ ಚಿತ್ತಾರವನ್ನು ತೆಗೆದುಕೊಂಡು ಬರಲಾಗಿದೆ. ಹಂಪಿಯ ದೇವಾಲಯದ ಕೆತ್ತನೆಯಲ್ಲಿಯೂ ಹೆಚ್ಚು ಮೀನುಗಳ ಕೆತ್ತನೆಯನ್ನು ನೋಡಬಹುದು. ಮೀನು ಅಂದ್ರೆ ಬೆಳವಣಿಗೆ, ಸಂತಾನ ಎಂದರ್ಥ. ಈ ಒಂದು ಕಾರಣದಿಂದ ಸೀರೆಯ ಬಾರ್ಡರ್‌ನಲ್ಲಿ ಮೀನುಗಳ ಚಿತ್ತಾರವಿದೆ ಎಂದು ಶ್ರೀಮತಿ ರತ್ನಶ್ರೀ ಶ್ರೀಕೃಷ್ಣದೇವರಾಯ ಹೇಳುತ್ತಾರೆ.

ಈ ಸೀರೆಗಳನ್ನು ಮಾರಾಟಕ್ಕೆ ಲಭ್ಯವಿದ್ದು, ಹೆಚ್ಚಿನ ಮಾಹಿತಿಗಾಗಿ Devaraya Heritage Weaves ಭೇಟಿ ನೀಡಬಹುದು. ಇಲ್ಲಿ ನಿಮಗೆ ವಿಜಯನಗರ ಕಾಲದ ಮಾದರಿಯಲ್ಲಿ ವಿವಿಧ ವಿನ್ಯಾಸದ ಗುಣಮಟ್ಟದ ಸೀರೆಗಳು ಸಿಗುತ್ತವೆ.

ಇದನ್ನೂ ಓದಿ: ಬೀರುವಿನಲ್ಲಿರೋ ರೇಷ್ಮೆ ಸೀರೆ ಹಾಳಾಗಬಾರದಾ? ಬ್ಯಾಡ್ ಸ್ಮೆಲ್, ಕೀಟಗಳ ಕಾಟನಾ? 1 ಕರ್ಪೂರದಲ್ಲಿದೆ 10 ಪರಿಹಾರ

ಇದನ್ನೂ ಓದಿ: ನೀತಾ ಅಂಬಾನಿ ರಾಯಲ್‌ ನೆಕ್ಲೆಸ್‌ ವೈರಲ್, 14 ಅಕ್ಕಸಾಲಿಗರು 3 ವರ್ಷದಿಂದ ಮಾಡಿರೋ ಬೃಹತ್‌ ಹಾರ! ಬೆಲೆ ಎಷ್ಟು?

PREV
Read more Articles on
click me!

Recommended Stories

ಹಾಸನಾಂಬ ದೇವಿ ಜಾತ್ರಾ ಪೋಸ್ಟರ್ ಬಿಡುಗಡೆ, 12 ದಿನ ಸಾರ್ವಜನಿಕ ದರ್ಶನಕ್ಕೆ ಅವಕಾಶ
ಬಾಗಲಕೋಟೆ: ಅಪಘಾತದಲ್ಲಿ ನೆಚ್ಚಿನ ಶಿಕ್ಷಕ ಸಾವು; ಪಾರ್ಥಿವ ಶರೀರಕ್ಕೆ ಪುಷ್ಪ ವೃಷ್ಠಿ, ಮಕ್ಕಳಿಂದ ಕಣ್ಣೀರ ವಿದಾಯ!