ಅಲ್ಲೂರು ಕೆ ಗ್ರಾಮದಲ್ಲಿ 200 ವರ್ಷಗಳ ಇತಿಹಾಸ ಹೊಂದಿರುವ 101 ಎತ್ತುಗಳ ಜಾತ್ರೆ, ಪೂಜೆ

Published : Sep 26, 2026, 02:59 PM IST
Alluru Jatre

ಸಾರಾಂಶ

ಚಿತ್ತಾಪುರ ತಾಲೂಕಿನ ಅಲ್ಲೂರ (ಕೆ) ಗ್ರಾಮದಲ್ಲಿ 200 ವರ್ಷಗಳ ಇತಿಹಾಸವಿರುವ 101 ಎತ್ತುಗಳ ವಿಶೇಷ ಪೂಜೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ಹಿಂದೆ ಮನುಷ್ಯರು ಮತ್ತು ಎತ್ತುಗಳಿಗೆ ಬಂದ ಅನಾರೋಗ್ಯವನ್ನು ಹೋಗಲಾಡಿಸಲು ಶುರುವಾದ ಈ ಸಂಪ್ರದಾಯವನ್ನು ಇಂದಿಗೂ ಮುಂದುವರೆಸಿಕೊಂಡು ಬರಲಾಗುತ್ತಿದೆ.

ಕಲಬುರಗಿ: ಚಿತ್ತಾಪುರ ತಾಲೂಕಿನ ಅಲ್ಲೂರ (ಕೆ) ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಅದ್ದೂರಿಯಾಗಿ ನೂರಾಒಂದು ಎತ್ತುಗಳ ವಿಶೇಷ ಪೂಜೆ ನಡೆಯಿತು. ಸುಮಾರು 200 ವರ್ಷಗಳ ಹಿಂದೆ ಗ್ರಾಮದಲ್ಲಿ ಮನುಷ್ಯರು ಮತ್ತು ಎತ್ತು ಗಳು ಆನಾರೊಗ್ಯದಿಂದ ನರಳುತ್ತಿದ್ದರು. ಆಗ ದೇವರ ಮೊರೆ ಹೊದಾಗ 101 ಎತ್ತುಗಳ ಪೂಜೆಯನ್ನು ಮಾಡಬೇಕೆಂದು ಹೇಳಿದ್ದರು.

101 ಎತ್ತುಗಳ ಪೂಜೆ ಬಗ್ಗೆ ಗ್ರಾಮಸ್ಥರು ಏನು ಹೇಳುತ್ತಾರೆ?

ಪ್ರತಿ ವರ್ಷ 101 ಎತ್ತುಗಳ ಪೂಜೆಯನ್ನು ಮಾಡಿದ್ದರಿಂದ ಎತ್ತುಗಳು ಮತ್ತು ಮನುಷ್ಯ ರು ಆರೊಗ್ಯವಾಗಿರುವ ನಂಬಿಕೆಯ ಮೇಲೆ ಇಂದಿಗೂ ಅಲ್ಲೂರ(ಕೆ) ಗ್ರಾಮದಲ್ಲಿ ಎತ್ತುಗಳ ಪೂಜೆಯನ್ನು ಮಾಡಲಾಗುತ್ತಿದೆ ಎನ್ನುತ್ತಾರೆ ಗ್ರಾಮಸ್ಥರು.

ಬೆಳಗ್ಗೆ 11 ಗಂಟೆಗೆ ಗ್ರಾಮದ ಹಿರಿಯರಾದ ಮಹಾಂತೇಯ ಸ್ವಾಮಿ, ಶಿವಾನಂದಯ್ಯ ಸ್ವಾಮಿ, ಮಹೇಶ ಗೌಡ ದಳಪತಿ, ರವಿಗೌಡ, ರವಿ ಠಾಣಗುಂದಿ, ಶರಣಗೌಡ ಪೊಲೀಸ್ ಪಾಟೀಲ್ ಸೇರಿದಂತೆ ಹಲವರು ಮಹಾಂತೇಶ್ವರ ಮಠದ ಗದ್ದುಗೆಗ ಪೂಜೆಯನ್ನು ಸಲ್ಲಿಸಿದ ನಂತರ ಹಲುಗೆ, ಬಾಜಿ ನುಡಿಸುತ್ತಾ ಮಕ್ಕಳ ಕೊಲಾಟದ ಮೂಲಕ ಗ್ರಾಮದಲ್ಲಿ ಮೆರವಣೆಗೆ ನಡೆಸಿ ಗಂಗಮ್ಮ ತಾಯಿಗೆ ಪೂಜೆ ಸಲ್ಲಿಸಿದರು.

ಪೂಜೆಯಂದು ಗ್ರಾಮದಲ್ಲಿ ಹಬ್ಬದ ವಾತಾವರಣ

ಇಂದಿನ ದಿನವನ್ನು ಗ್ರಾಮದ ಎಲ್ಲಾರೂ ಕೂಡಿಕೊಂಡು ಒಟ್ಟಾಗಿ ಆಚರಿಸುವುದರಿಂದ ಗ್ರಾಮದಲ್ಲಿ ಹಬ್ಬದ ವಾತಾವರಣ ಇರುತ್ತದೆ, ಈ ಸಂಬ್ರಮವನ್ನು ನೋಡಲು ಸುತ್ತ ಮುತ್ತಲಿನ ಗ್ರಾಮಸ್ಥರು ಬಂದು ಕಾರ್ಯಕ್ರಮವನ್ನು ನೋಡಿ ಆನಂದಿಸುತ್ತಾರೆ ಎಂದು ಗ್ರಾಮದ ಬಸವರಾಜ ತಳವಾರ ಹೇಳುತ್ತಾರೆ.

PREV
Read more Articles on
click me!

Recommended Stories

ಕೊಪ್ಪಳದಲ್ಲಿ ಅ. 5ರಿಂದ ಆರ್‌ಪಿಸಿ, ಅ. 12ರಿಂದ ಕೆಕೆ ಅಭ್ಯರ್ಥಿಗಳಿಗೆ ಪರೀಕ್ಷೆ ಮಾಹಿತಿ
ಹೈನುಗಾರಿಕೆಯಿಂದ 25 ಲಕ್ಷ ಮೌಲ್ಯದ ಥಾರ್ ಖರೀದಿಸಿದ ಕೆಎಂ ದೊಡ್ಡಿ ರೈತನಿಂದ ಹಸುವಿಗೆ ಸೀಮಂತ