ಅದು ಏಷಿಯಾದ ಎರಡನೇ ಅತೀ ದೊಡ್ಡ ಟೊಮೊಟೊ ಮಾರುಕಟ್ಟೆ. ಆದ್ರೆ ಏನೂ ಪ್ರಯೋಜನ ಅಲ್ಲಿಗೆ ಬಂದ ರೈತರಿಗೆ ಒಂದಿಲ್ಲೊಂದು ಕಷ್ಟ ಮಾತ್ರ ಇದ್ದಿದ್ದೇ. ಇತ್ತ ಬೆಲೆಯೂ ಇಲ್ಲದೇ, ಅತ್ತ ಕೊಳ್ಳೋರು ಇಲ್ಲದೆ ವಾಪಸ್ಸು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕೋಲಾರ: ಅದು ಏಷಿಯಾದ ಎರಡನೇ ಅತೀ ದೊಡ್ಡ ಟೊಮೊಟೊ ಮಾರುಕಟ್ಟೆ. ಆದ್ರೆ ಏನೂ ಪ್ರಯೋಜನ ಅಲ್ಲಿಗೆ ಬಂದ ರೈತರಿಗೆ ಒಂದಿಲ್ಲೊಂದು ಕಷ್ಟ ಮಾತ್ರ ಇದ್ದಿದ್ದೇ. ಇತ್ತ ಬೆಲೆಯೂ ಇಲ್ಲದೇ, ಅತ್ತ ಕೊಳ್ಳೋರು ಇಲ್ಲದೆ ವಾಪಸ್ಸು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಷ್ಟಪಟ್ಟು ಬೆಳೆದ ಬೆಳೆಯನ್ನು ಸುರಿದು ಹೋಗೋಣ ಅಂದ್ರು ಅದಕ್ಕೂ ಸೌಕರ್ಯ ಇಲ್ಲದಂತಾಗಿದೆ. ಈ ಕುರಿತ ಸ್ಟೋರಿ ಇಲ್ಲಿದೆ ನೋಡಿ...
ಹೌದು ಕೋಲಾರ ಜಿಲ್ಲೆಯ ಎಪಿಎಂಸಿ ಮಾರುಕಟ್ಟೆ ಅಂದ್ರೆ ಏಷಿಯಾದ ಎರಡನೇ ಅತೀ ದೊಡ್ಡ ಟೊಮೊಟೊ ಮಾರುಕಟ್ಟೆ ಅಂತಾನೆ ಹೆಗ್ಗಳಿಕೆ ಪಡೆದಿರುವ ಮಾರುಕಟ್ಟೆ. ಆದ್ರೆ ಸಿಕ್ಕಿರುವ ಹೆಗ್ಗಳಿಕೆಗೂ ಇಲ್ಲಿರುವ ವ್ಯವಸ್ಥೆಗೂ ಒಂದಕ್ಕೊಂದು ಸಂಬಂಧವಿಲ್ಲ, ಅಷ್ಟರ ಮಟ್ಟಿಗೆ ಮೂಲಭೂತ ಸೌಕರ್ಯದ ಕೊರತೆ ಇಲ್ಲಿ ಮನೆ ಮಾಡಿದೆ. ಬೆಲೆ ಇಲ್ಲದೆ ಕಂಗಾಲಾಗಿದ್ದ ರೈತರಿಗೆ ಕಳೆದ ತಿಂಗಳು ಟೊಮೊಟೋ ಗೆ ಡಿಮ್ಯಾಂಡ್ ಕ್ರಿಯೇಟ್ ಆಗಿ ಕೊಂಚ ಬೆಲೆ ಸಿಕ್ಕಿತ್ತು. ಪ್ರತಿ 15 ಕೆಜಿಯ ಬಾಕ್ಸ್ ಗೆ 2 ಸಾವಿರ ರುಪಾಯಿ ಬೆಲೆ ಸಿಕಿತ್ತು, ಆದರೆ ಮಳೆ ಬಿದ್ದು ಟೊಮೊಟೋ ಕ್ವಾಲಿಟಿ ಕಡಿಮೆ ಆಗಿರುವ ಪರಿಣಾಮ ದಿಢೀರನೇ ಬೆಲೆ ಕುಸಿದಿದ್ದು ಪ್ರತಿ 15 ಕೆಜಿಯಾ ಟೊಮೊಟೋ ಬಾಕ್ಸ್ ಗೆ ಕೇವಲ 100 ರಿಂದ 150 ರೂಪಾಯಿ ವರೆಗೂ ಮಾರಾಟವಾಗ್ತಿದೆ.
ಮಳೆ ಸುರಿಯುತ್ತಿರುವ ಪರಿಣಾಮ ಈಗಾಗಲೇ ದಲ್ಲಾಳಿಗಳು ಖರೀದಿ ಮಾಡಿರುವ ಟೊಮೊಟೊ ವ್ಯಾಪಾರವಾಗದೆ ಇದ್ದಲ್ಲೇ ಇದ್ದು ಕೊಳೆಯುತ್ತಿದೆ. ಬೆಳೆದ ಬೆಳೆ ವ್ಯಾಪಾರವಾಗದೇ ರೈತರಿಗೆ ದಿಕ್ಕು ತೋಚದೆ ತಮ್ಮ ಕೈಯಾರೆ ಬೆಳೆದ ಬೆಳೆಯನ್ನು ರಸ್ತೆ ಬದಿಯಲ್ಲಿ ಸುರಿದು ಬರಿಗೈಯಲ್ಲಿ ವಾಪಸ್ಸು ಹೋಗ್ತಿದ್ದಾರೆ. ಆದ್ರೆ ಅದಕ್ಕೂ ಸೂಕ್ತವಾದ ಜಾಗವಿಲ್ಲದ ಪರಿಣಾಮ ರೈತರು ಹಾಗೂ ದಲ್ಲಾಳಿಗಳು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ಹೊರ ಹಾಕ್ತಿದ್ದಾರೆ.
Kolar: ವರುಣಾಘಾತ, ಬೆಲೆ ಇಲ್ಲದೇ ಬೀದಿಗೆ ಬಿದ್ದ ಟೊಮ್ಯಾಟೋ..!
ಹೌದು ಮಾರಾಟವಂತು ಆಗ್ತಿಲ್ಲ ಕೊನೆ ಪಕ್ಷ ಸುರಿದು ಹೋಗೋಕೆ ಜಾಗದ ವ್ಯವಸ್ಥೆ ಸಹ ಜಿಲ್ಲಾಡಳಿತ ದಿಂದ ಇದುವರೆಗೂ ಮಾಡಿಲ್ಲ. ಮೊದಲೇ ವ್ಯಾಪಾರವಾಗದೆ ಕೋಪದಲ್ಲಿದ್ದ ರೈತರು ಇಷ್ಟ ಬಂದ ಜಾಗದಲ್ಲಿ,ರಸ್ತೆ ಪಕ್ಕದಲ್ಲಿ ಕಿಮಿ ಗಟ್ಟಲೇ ಟೊಮೊಟೊ ಸುರಿದು ಹೋಗ್ತಿದ್ದಾರೆ.ಇದರಿಂದ ಸ್ಥಳೀಯರಿಗೆ,ಓಡಾಡುವ ವಾಹನ ಸವಾರರಿಗೆ ಟೊಮೊಟೊ ಕೊಳೆತ ವಾಸನೆ ಸೇವಿಸಿ ಸಂಚಾರಿಸುವ ಅನಿವಾರ್ಯತೆ ಉಂಟಾಗಿದೆ. ಒಂದೂ ವೇಳೆ ಸೂಕ್ತವಾದ ಜಾಗದ ವ್ಯವಸ್ಥೆ ಮಾಡಿದ್ರೆ ಈ ರೀತಿಯ ಯಾತನೆ ಅನುಭವಿಸುವ ಅನಿವಾರ್ಯತೆ ಇರೋದಿಲ್ಲ, ಹೇಳಿಕೊಳ್ಳೋಕೆ ಏಷಿಯಾದ ಎರಡನೇ ಅತೀ ದೊಡ್ಡ ಟೊಮೊಟೊ ಮಾರುಕಟ್ಟೆ ಅಂತ ಹೆಗ್ಗಳಿಗೆ ಕೊಟ್ಟಿದಿರಿ ಆದ್ರೆ ಮೂಲಭೂತ ಸೌಕರ್ಯ ಮಾತ್ರ ಇಲ್ಲ ಅಂತ ವಾಹನ ಸವಾರರು,ಸ್ಥಳೀಯರುಸರ್ಕಾರದ ವಿರುದ್ಧ ಹಿಡಿ ಶಾಪ ಹಾಕ್ತಿದ್ದಾರೆ. ಈ ಬಗ್ಗೆ ಉಸ್ತುವಾರಿ ಸಚಿವರಾದ ಮುನಿರತ್ನ ಪ್ರತಿಕ್ರಿಯೆ ನೀಡಿದ್ದು,ಆದಷ್ಟೂ ಬೇಗ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದ್ದಾರೆ.
ಅತಿಯಾಗಿ ಟೊಮೇಟೊ ತಿನ್ನೋ ಅಭ್ಯಾಸ ಬಿಟ್ಬಿಡಿ, ಕೀಲು ನೋವು ಕಾಡುತ್ತೆ !
ಒಟ್ನಲ್ಲಿ ಹೇಳಿದ್ನೆ ಹೇಳುವ ಕೆಲಸ ಜನಪ್ರತಿನಿಧಿಗಳು ಮಾಡ್ತಿದ್ದು,ಕೆಲಸ ಮಾಡಿ ಯಾರು ತೋರಿಸುತ್ತಿಲ್ಲ.ರೈತರ ಗೋಳು ಕೇಳೋರು ಯಾರು ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದ್ದು,ಇನ್ನಾದ್ರೂ ಸಮಸ್ಯೆ ಬಗೆಹರಿಸಲಿ ಅನ್ನೋದು ನಮ್ಮ ಕಳಕಳಿ.