1.75 ಕೋಟಿ ರೂ. ವೆಚ್ಚದಲ್ಲಿ 37 ಕೊಳವೆಬಾವಿ: ಕೋಲಾರಕ್ಕೆ ಕಾಂಗ್ರೆಸ್ ಶಾಸಕರ ಭರವಸೆ

Published : Jun 29, 2026, 09:01 AM IST
Kolar

ಸಾರಾಂಶ

ದೇವರಾಜ ಅರಸು ಹಿಂದುಳಿದ ವರ್ಗಗಳ ಇಲಾಖೆಯಿಂದ 1.75 ಕೋಟಿ ರು. ವೆಚ್ಚದಲ್ಲಿ 37 ಕೊಳವೆಬಾವಿಗಳನ್ನು ಕೊರೆಯಿಸಲಾಗುತ್ತಿದೆ. ಶಾಸಕ ಕೊತ್ತೂರು ಮಂಜುನಾಥ್ ಅವರು ಗಂಗಾ ಕಲ್ಯಾಣ ಯೋಜನೆಯಡಿ ಈ ಕಾಮಗಾರಿಗೆ ಚಾಲನೆ ನೀಡಿದ್ದು, ಇದು ಬಡರೈತರು ಮತ್ತು ವಿವಿಧ ಸಮುದಾಯಗಳಿಗೆ ಅನುಕೂಲ ಕಲ್ಪಿಸಲಿದೆ ಎಂದು ತಿಳಿಸಿದ್ದಾರೆ.

ಕೋಲಾರ: ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ದೇವರಾಜ ಅರಸು ಹಿಂದುಳಿದ ವರ್ಗಗಳ ಇಲಾಖೆಯಿಂದ ಒಟ್ಟು 37 ಕೊಳವೆಬಾವಿ ಕೊರೆಯಿಸಲಾಗುತ್ತದೆ. ಅದಕ್ಕೆ ಒಟ್ಟು 1.75 ಕೋಟಿ ರು. ವೆಚ್ಚವಾಗಲಿದೆ. ಕಾಂಗ್ರೆಸ್ ಸರ್ಕಾರ ಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ನಾಯಕತ್ವದಲ್ಲಿ ಬಡರೈತರಿಗೆ, ಅಲೆಮಾರಿಗಳು ಸೇರಿ ವಿವಿಧ ಸಮುದಾಯಗಳಿಗೆ ಅನುಕೂಲ ಮಾಡಿಕೊಡುತ್ತಿದೆ ಎಂದು ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು.

ತಾಲೂಕಿನ ನಾಗಲಾಪುರದಲ್ಲಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಇಲಾಖೆ ವತಿಯಿಂದ ಗಂಗಾ ಕಲ್ಯಾಣ ಯೋಜನೆಯಡಿ ಮಂಗಳವಾರ ಕೊಳವೆಬಾವಿ ಕೊರೆಯಲು ಚಾಲನೆ ನೀಡಿ ಮಾತನಾಡಿದರು.

ಕಾಮಗಾರಿ ಮುಗಿದ್ಮೇಲೆಯೇ ಬಿಲ್ ಕ್ಲಿಯರ್ 

ಕಳೆದ ಬಾರಿ ಗುತ್ತಿಗೆದಾರರು ಅರ್ಧಂಬರ್ಧ ಕೆಲಸ ಮಾಡಿದ್ದರು. ಅರ್ಧ ಕೆಲಸ ಮಾಡಿ ಬಿಟ್ಟು ಹೋಗಿ ಮತ್ತೆ ಬಂದು ಕೆಲಸ ಮಾಡಿದ್ದರು. ಆರು ತಿಂಗಳಲ್ಲಿ ಮುಗಿಯಬಹುದಾದ ಕೆಲಸ ವರ್ಷಾನುಗಟ್ಟಲೆ ಮಾಡಿದರು. ಈ ಬಾರಿ ಸರಿಯಾಗಿ ಕೆಲಸ ಮಾಡಬೇಕು. ಕಾಮಗಾರಿ ಮುಗಿದ ಮೇಲಷ್ಟೇ ಬಿಲ್ ಮಾಡಲಾಗುತ್ತದೆ ಎಂದರು.

ಎಂಎಲ್ಸಿ ಎಂ.ಎಲ್.ಅನಿಲ್ ಕುಮಾರ್, ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ವೈ. ಶಿವಕುಮಾರ್, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಕೆಂದಟ್ಟಿ ಶಿವಕುಮಾರ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ, ಸೂಲೂರು ಗ್ರಾಪಂ ಮಾಜಿ ಅಧ್ಯಕ್ಷ ಪೆಮ್ಮಶೆಟ್ಟಿಹಳ್ಳಿ ಸುರೇಶ್, ಮುಖಂಡರಾದ ವೀರಭದ್ರಯ್ಯ, ರವಿಕುಮಾರ್, ಸಿದ್ದಲಿಂಗಯ್ಯ, ಕೋಟೆ ಶ್ರೀನಿವಾಸ್, ಹಾರೋಹಳ್ಳಿ ರಾಜೆರಶ್ ಸಿದ್ದಲಿಂಗ ಒಡೆಯರ್, ಕೃಷ್ಣಮೂರ್ತಿ, ಉಸ್ಮಾನ್, ನಾರಾಯಣಸ್ವಾಮಿ, ಇಲಾಖೆಯ ಅಮರೇಶ್ ಇದ್ದರು.

ಇದನ್ನೂ ಓದಿ: Kolar: 8 ಕೋಟಿ ಚಿನ್ನಾಭರಣ ಕಳೆದುಕೊಂಡ ಮಹಿಳೆಯರು; ವಾಟ್ಸಪ್ ಗ್ರೂಪ್‌ ರಚಿಸಿ ವಂಚನೆ

ಇದನ್ನೂ ಓದಿ: ರಾಮಲಿಂಗಾ ರೆಡ್ಡಿ, ಮುನಿಯಪ್ಪ ಅಸಮಾಧಾನ ಪಕ್ಷದಲ್ಲೇ, ಶಾಸಕಿ ರೂಪಕಲಾ ಹೇಳಿದ್ದೇನು?

PREV
Read more Articles on
click me!

Recommended Stories

'ಅಂತ್ಯವಾಯ್ತು' ಎಂದವನ ಬದುಕೇ ಅಂತ್ಯ! ಚಾವಣಿ ಕುಸಿದು ಮೂವರು ವಿದ್ಯಾರ್ಥಿಗಳು ಸಾವು
ಎಲ್‌ ನಿನೋ ಎಫೆಕ್ಟ್, ತುಂಗಭದ್ರಾ ಜಲಾಶಯಕ್ಕೆ ಎಂಟು ದಿನಗಳಿಂದ ಶೂನ್ಯ ನೀರಿನ ಒಳಹರಿವು