
ರಾಯಚೂರು: ಇಲ್ಲಿನ ಬಸ್‌ನಿಲ್ದಾಣ ಹತ್ತಿರದ ವಿಆರ್‌ಎಲ್ ಕಚೇರಿ ಬಳಿ ಕಟ್ಟಡವೊಂದರ ಚಾವಣಿ ಕುಸಿದು ಸ್ಥಳದಲ್ಲಿಯೇ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿದ್ದು, ಮೂವರು ವಿದ್ಯಾರ್ಥಿಗಳಿಗೆ ಗಂಭೀರ ಗಾಯಗಳಾಗಿವೆ. ಅರ್ಜುನ್ ಎಂಬಾತ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ,
ನಾಗರಾಜ್ ಕ್ಯಾದಿಗ್ಗೇರಾ (21), ರವಿ ಕುಮಾರ ಸಮುದ್ರ (22) ಸ್ಥಳದಲ್ಲಿಯೇ ಮೃತಪಟ್ಟವರು. ಗಂಭೀರ ಗಾಯಗೊಂಡಿರುವ ವಿದ್ಯಾರ್ಥಿಗಳಾದ ಅರ್ಜುನ ಕೋತಿಗುಡ್ಡ, ಪ್ರಭು ಮಾತ್ಪಳ್ಳಿ ಹಾಗೂ ಉಮೇಶ ಎಚ್.ಎನ್.ತಾಂಡಾರನ್ನು ಹೆಚ್ಚಿನ ಚಿಕಿತ್ಸೆಗೆ ರಿಮ್ಸ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಇವರಲ್ಲಿ ಅರ್ಜುನ್ ಸಾವನ್ನಪ್ಪಿದ್ದಾನೆ.
ನಾಗರಾಜ ಕ್ಯಾದಿಗ್ಗೇರಾ ಎಂಬ ವಿದ್ಯಾರ್ಥಿ ‘ಅಂತ್ಯವಾಯ್ತು’ ಎಂಬ ಕಿರುಚಿತ್ರ ತಯಾರಿಸಿದ್ದು, ಅದೇ ಕಟ್ಟಡದ ಮೇಲ್ಭಾಗದಲ್ಲಿರುವ ಶ್ರೀ ಗುರು ಫೊಟೋ ಸ್ಟುಡಿಯೋದಲ್ಲಿ ಕೆಲಸದ ನಿಮಿತ್ಯ ವಿದ್ಯಾರ್ಥಿಗಳು ತೆರಳಿದ್ದರು. ಭಾನುವಾರ ಸ್ಟುಡಿಯೋ ಬಂದ್ ಮಾಡಿದ್ದರಿಂದ ಅವರನ್ನು ಮೊಬೈಲ್‌ನಲ್ಲಿ ಸಂಪರ್ಕಿಸಲು ಪ್ರಯತ್ನಿಸುತ್ತಿರುವಾಗ ಈ ಘಟನೆ ಜರುಗಿದೆ ಎನ್ನಲಾಗಿದೆ.
ಇದನ್ನೂ ಓದಿ: ಎಲ್ ನಿನೋ ಎಫೆಕ್ಟ್, ತುಂಗಭದ್ರಾ ಜಲಾಶಯಕ್ಕೆ ಎಂಟು ದಿನಗಳಿಂದ ಶೂನ್ಯ ನೀರಿನ ಒಳಹರಿವು
ಶಾಸಕಿ ಕರೆಮ್ಮ ಜಿ.ನಾಯಕ ಭೇಟಿ ನೀಡಿ ಮೃತ ವಿದ್ಯಾರ್ಥಿಗಳ ಕುಟುಂಬಕ್ಕೆ ಸಾಂತ್ವನ ತಿಳಿಸಿದರು. ಈ ಸಂಬಂಧ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ: ಜೀವ ನದಿ ನೇತ್ರಾವತಿ ಒಡಲಿಗೆ ನೇರವಾಗಿ ವಸತಿ ಸಮುಚ್ಚಯಗಳಿಂದ ಶೌಚಾಲಯದ ತ್ಯಾಜ್ಯ ನೀರು!