ಕೋಲಾರ: ಜಿಲ್ಲೆಗೆ ಅಪ್ಪಳಿಸುತ್ತಾ ಹಿಕ್ಕಾ ಚಂಡಮಾರುತ..? ಎಚ್ಚರಿಕೆಗೆ ಡಿಸಿ ಸೂಚನೆ

By Kannadaprabha NewsFirst Published Sep 26, 2019, 3:48 PM IST
Highlights

ಜಿಲ್ಲೆಗೆ ಹಿಕ್ಕಾ ಚಂಡಮಾರುತ ಅಪ್ಪಳಿಸುವ ಸಾಧ್ಯತೆಯ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಜನರು ಜಾಗೃತೆ ವಹಿಸುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ. ಚಂಡಮಾರುತದ ಪ್ರಭಾವದಿಂದ ಜಿಲ್ಲೆಯಾದ್ಯಂತ ನಾಲ್ಕು ದಿನಗಳ ಕಾಲ ಹೆಚ್ಚಿನ ಮಳೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಕೋಲಾರ(ಸೆ. 26): ಹಿಕ್ಕಾ ಚಂಡಮಾರುತವು ಜಿಲ್ಲೆಯಾದ್ಯಂತ ಪ್ರವೇಶಿಸಿದ್ದು ಮುಂದಿನ ನಾಲ್ಕು ದಿನಗಳು ಬಿರುಗಾಳಿಯೊಂದಿಗೆ ಅತಿಹೆಚ್ಚಿನ ಮಳೆ ಆಗುವುದಾಗಿ ಭಾರತ ಹವಾಮಾನ ಇಲಾಖೆ ಎಚ್ಚರಿಕೆ ನೀಡಿರುವುದರಿಂದ ಈ ಸಂಬಂಧ ಅಧಿಕಾರಿಗಳು ಸಾರ್ವಜನಿಕ ಆಸ್ತಿ ಪಾಸ್ತಿಗೆ ಹಾನಿ ಆಗದಂತೆ ಎಚ್ಚರ ವಹಿಸಬೇಕೆಂದು ತಿಳಿಸಿದ್ದಾರೆ.

ತಾಲೂಕು ಕಚೇರಿಗಳಲ್ಲಿ ಕೂಡಲೇ ಕಂಟ್ರೋಲ್‌ ರೂಂಗಳನ್ನು ತೆರೆಯಬೇಕು ಸಾರ್ವಜನಿಕರಿಂದ ಮಾಹಿತಿ ಪಡೆದು ಜಿಲ್ಲಾಧಿಕಾರಿಗೆ ರವಾನಿಸಬೇಕು ಹೆಚ್ಚಿನ ಹಾನಿ ಬಗ್ಗೆ ಆಗದಂತೆ ಸೂಕ್ತ ರಕ್ಷಣಾ ವ್ಯವಸ್ಥೆಯನ್ನು ಮಾಡಬೇಕೆಂದೂ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ನೆರೆ ಸಂತ್ರಸ್ತರಿಗೆ 5 ತಿಂಗಳ ಬಾಡಿಗೆ ಒಟ್ಟಿಗೆ ನೀಡಲು ನಿರ್ಧಾರ

ಅತಿವೃಷ್ಟಿಯಿಂದ ಆಗುವ ಜೀವ ಹಾನಿ ಜಾನುವಾರುಗಳಿಗೆ ಆಗುವ ಸಾವು ನೋವುಗಳು ಹಾಗು ಆಸ್ತಿ ಪಾಸ್ತಿ ನಷ್ಟಹಾಗು ಬೆಳೆ ಹಾನಿಯ ಬಗ್ಗೆ ಮಾಹಿತಿ ಸಂಗ್ರಹಿಸಿ ಕೂಡಲೇ ಜಿಲ್ಲಾಡಳಿತಕ್ಕೆ ಗಂಟೆಗೊಮ್ಮೆ ಕಳಿಸಬೇಕು. ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರವನ್ನು ಈಗಾಗಲೇ ಸ್ಥಾಪಿಸಿದ್ದು ದಿನದ ಎಲ್ಲ ಸಮಯದಲ್ಲಿ ಇಬ್ಬರು ನುರಿತ ಹೋಂ ಗಾರ್ಡ್‌ಗಳ ನಿಯೋಜನೆಗೊಂಡಿದ್ದು ಅವರು ಮಾಹಿತಿ ರವಾನಿಸುತ್ತಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

'ಸಮ್ಮಿಶ್ರ ಸರ್ಕಾರವಿದ್ದಾಗ ಭಾಯ್-ಭಾಯ್.. ಈಗ ವಿಲನ್-ವಿಲನ್'..!

ರಾಜ್ಯದ ಹಲವೆಡೆ ಮತ್ತೆ ಮಳೆಯಾಗುತ್ತಿದ್ದು, ಕರಾವಳಿಯ ಹಲವು ಭಾಗಗಳಲ್ಲಿ ಇನ್ನೂ ಮಳೆ ಮುಂದುವರಿದಿದೆ. ದಕ್ಷಿಣ ಕನ್ನಡದ ಬೆಳ್ತಂಗಡಿ ಭಾಗದಲ್ಲಿ ಮಳೆ ಹೆಚ್ಚಾಗಿದ್ದು, ನದಿಗಳಲ್ಲಿಯೂ ಪ್ರವಾಹ ಹೆಚ್ಚಾಗಿದೆ. ಇದೀಗ ಕೋಲಾರದಲ್ಲಿಯೂ ಚಂಡಮಾರುತದ ಭೀತಿ ಆವರಿಸಿದ್ದು, ಜನ ಎಚ್ಚರಿಕೆ ವಹಿಸಬೇಕಾಗಿದೆ.

ಹಾಲಿ, ಮಾಜಿ ಶಾಸಕರ ತಳ್ಳಾಟ, ನೂಕಾಟ..!ಕುರ್ಚಿಗಳನ್ನೆಸೆದು ಕಿತ್ತಾಟ

click me!