ಹಾಲಿ, ಮಾಜಿ ಶಾಸಕರ ತಳ್ಳಾಟ, ನೂಕಾಟ..!ಕುರ್ಚಿಗಳನ್ನೆಸೆದು ಕಿತ್ತಾಟ

By Kannadaprabha NewsFirst Published Sep 26, 2019, 3:33 PM IST
Highlights

ಹಾಲಿ, ಮಾಜಿ ಶಾಸಕರು ವಾಗ್ವಾದ ಆರಂಭಿಸಿ ಕೊನೆಗೆ ಕುರ್ಚಿಗಳನ್ನೆಸೆದು ಜಗಳ ಮಾಡಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಟಿಎಪಿಸಿಎಂಎಸ್‌ ವಾರ್ಷಿಕ ಸಭೆಯಲ್ಲಿ ಶಾಸಕರು ಅಭಿವೃದ್ಧಿ ಕಾರ‍್ಯಗಳ ಬಗ್ಗೆ ಭಾಷಣ ಮಾಡಿದ್ದಕ್ಕೆ ಮಾಜಿ ಶಾಸಕರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಇಬ್ಬರು ನಡುವೆ ತೀವ್ರ ಸ್ವರೂಪದ ಮಾತಿನ ಚಕಮಕಿ ತಳ್ಳಾಟ, ನೂಕಾಟ ನಡೆದು ಸಭೆ ರಣರಂಗವಾಗಿತ್ತು.

ಕೋಲಾರ(ಸೆ.26): ಟಿಎಪಿಸಿಎಂಎಸ್‌ ವಾರ್ಷಿಕ ಸಭೆಯಲ್ಲಿ ಶಾಸಕರು ಅಭಿವೃದ್ಧಿ ಕಾರ‍್ಯಗಳ ಬಗ್ಗೆ ಭಾಷಣ ಮಾಡಿದ್ದಕ್ಕೆ ಮಾಜಿ ಶಾಸಕರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಇಬ್ಬರು ನಡುವೆ ತೀವ್ರ ಸ್ವರೂಪದ ಮಾತಿನ ಚಕಮಕಿ ತಳ್ಳಾಟ, ನೂಕಾಟ ನಡೆದು ಸಭೆ ರಣರಂಗವಾದ ಘಟನೆ ಬುಧವಾರ ನಡೆದಿದೆ.

ಬಂಗಾರಪೇಟೆ ಪಟ್ಟಣದ ಟಿಎಪಿಸಿಎಂಎಸ್‌ ಅಕ್ಕಿ ಗಿರಣಿ ಆವರಣದಲ್ಲಿ ತಾಲೂಕು ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಸಂಘದಿಂದ ನಡೆದ ವಾರ್ಷಿಕ ಸಭೆಯಲ್ಲಿ ಶಾಸಕ ಎಸ್‌.ಎನ್‌. ನಾರಾಯಣಸ್ವಾಮಿ ತಮ್ಮ ಭಾಷಣದಲ್ಲಿ ಕೆಸಿ ವ್ಯಾಲಿ ಸೇರಿದಂತೆ ತಾವು ಮಾಡಿರುವ ಅಭಿವೃದ್ಧಿ ಕಾರ‍್ಯಗಳನ್ನು ಜನರ ಮುಂದಿಡಲು ಮುಂದಾದಾಗ ಆಕ್ಷೇಪ ವ್ಯಕ್ತಪಡಿಸಿದ ಮಾಜಿ ಶಾಸಕ ಎಂ. ನಾರಾಯಣಸ್ವಾಮಿ, ಕಳೆದ 5 ವರ್ಷಗಳಿಂದ ನೀವು ಏನು ಮಾಡಿದ್ದೀರಿ ಎಂಬುದನ್ನು ನೋಡಿದ್ದೇನೆ ಎಂದಿದ್ದಾರೆ.

ಎಲ್ಲವೂ ಬರೀ ಭಾಷಣ

ಎಲ್ಲವೂ ಬರೀ ಭಾಷಣ ಅಷ್ಟೆ. ಯಾವುದೇ ಹೊಸ ಕಾಮಗಾರಿ ಮಾಡಿಸಿಲ್ಲ. ಕೆಸಿ ವ್ಯಾಲಿ ನೀರು ತಾಲೂಕಿಗೆ ಬರಲು ನಿಮ್ಮ ಶ್ರಮ ಸಹ ಇಲ್ಲ. ಹಳೇ ಕಾಮಗಾರಿಗಳಿಗೆ ತಮ್ಮ ಲೇಬಲ್‌ ಹಾಕಿಕೊಳ್ಳಲಾಗಿದೆ. ಅಷ್ಟಕ್ಕೂ ಇದು ಅಭಿವೃದ್ಧಿ ಕಾಮಗಾರಿ ಚರ್ಚಿಸುವ ಸಭೆಯಲ್ಲ. ಟಿಎಪಿಎಸಿಎಂಎಸ್‌ನಿಂದ ರೈತರಿಗಾಗುವ ಅನುಕೂಲಗಳ ಬಗ್ಗೆ ಮಾತ್ರ ಹೇಳಿ ಎಂದು ಶಾಸಕರ ಭಾಷಣಕ್ಕೆ ಅಡ್ಡಿಪಡಿಸಿದಾಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು. ಮತ್ತೊಂದು ಕಡೆ ಅವರ ಬೆಂಬಲಿಗರು ವೇದಿಕೆಯತ್ತ ನುಗ್ಗಿ ಗಲಾಟೆ ಆರಂಭಿಸಿದ್ದಾರೆ.

ಕುರ್ಚಿಗಳನ್ನೆಸೆದು ಕಿತ್ತಾಟ:

ನಾನು 6 ವರ್ಷಗಳಿಂದ ಕ್ಷೇತ್ರದ ಚಿತ್ರಣವನ್ನೇ ಬದಲಾಯಿಸಿದ್ದೇನೆ. ಆದರೆ ನೀವು ನಾಲ್ಕೈದು ಬಾರಿ ಶಾಸಕರಾದರೂ ಜನರನ್ನು ಯಾಮಾರಿಸಿಕೊಂಡು ಬರಲಾಗಿದೆ ವಿನಃ ಅಭಿವೃದ್ಧಿ ಬರೀ ಶೂನ್ಯ ಎಂದಾಗ, ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ಅವರು ಏರಿದ ಧ್ವನಿಯಲ್ಲಿ ಶಾಸಕರ ಮೇಲೆ ಎರಗಿ ನಿಮ್ಮದು ಬರೀ ದ್ವೇಷದ ರಾಜಕಾರಣ. ಬೇರೊಬ್ಬರು ಮಾಡಿರುವ ಕಾಮಗಾರಿಗಳಿಗೆ ನಿಮ್ಮ ಹೆಸರನ್ನು ಹಾಕಿಕೊಂಡು ಬಿಟ್ಟಿಪ್ರಚಾರ ಪಡೆಯುತ್ತಿದ್ದೀರಿ. ನಿಮಗೆ ನಾಚಿಕೆಯಾಗಬೇಕು ಎಂದಾಗ ವೇದಿಕೆ ಮುಂದಿದ್ದ ಇಬ್ಬರ ಬೆಂಬಲಿಗರೂ ಪರಸ್ಪರ ನಿಂದಿಸಿಕೊಂಡು ತಮ್ಮ ನಾಯಕರೇ ಗ್ರೇಟ್‌ ಎಂದು ಒಬ್ಬರು ಮತ್ತೊಬ್ಬರು ತಮ್ಮ ನಾಯಕರೇ ಉತ್ತಮ ಆಡಳಿತ ನೀಡಿದ್ದಾರೆ. ಅವರ ಬಗ್ಗೆ ಮಾತನಾಡಲು ನಿಮಗೆ ಹಕ್ಕಿಲ್ಲ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿಕೊಂಡು ಕುರ್ಚಿಗಳನ್ನು ಎಸೆದುಕೊಂಡರು. ನಾನು ಅಭಿವೃದ್ಧಿ ಕೆಲಸ ಮಾಡಿಲ್ಲ ಎಂದು ಸಾಬೀತು ಮಾಡಿ. ಸಾರ್ವಜನಿಕವಾಗಿ ನಿಮ್ಮ ಕಾಲು ಕೆಳಗೆ ನುಗ್ಗುವೆ ಎಂದು ಶಾಸಕರು ಸವಾಲ್‌ ಎಸೆದರು.

ನೆರೆ ಸಂತ್ರಸ್ತರಿಗೆ 5 ತಿಂಗಳ ಬಾಡಿಗೆ ಒಟ್ಟಿಗೆ ನೀಡಲು ನಿರ್ಧಾರ

ವೇದಿಕೆಯಲ್ಲಿ ಮುಖಂಡರು ಮೂಖ ಪ್ರೇಕ್ಷಕರಾಗಿ ಇಬ್ಬರ ನಾಯಕರ ಜಳಗವನ್ನು ನೋಡುತ್ತಿದ್ದರು. ಗಲಾಟೆ ವೇಳೆ ಕೇವಲ ಒಂದಿಬ್ಬರು ಪೊಲೀಸರು ಮಾತ್ರ ಇದ್ದರಿಂದ ಗಲಾಟೆ ನಿಯಂತ್ರಿಸಲು ಅಸಹಾಯಕರಾಗಿದ್ದರು. ಒಂದು ಹಂತದಲ್ಲಿ ಹಾಲಿ ಮತ್ತು ಮಾಜಿ ಶಾಸಕರು ಕೈಕೈ ಮಿಲಾಯಿಸುವ ಹಂತಕ್ಕೆ ಹೋದರು. ಆಗ ಟಿಎಪಿಸಿಎಂಎಸ್‌ ಅಧ್ಯಕ್ಷ ಮಾರ್ಕಂಡೇಗೌಡ ಮಧ್ಯ ಪ್ರವೇಶಿಸಿ ಇಬ್ಬರನ್ನು ಬೇರ್ಪಡಿಸಲು ಹರಸಾಹಸ ಮಾಡಬೇಕಾಯಿತು.

'ಸಮ್ಮಿಶ್ರ ಸರ್ಕಾರವಿದ್ದಾಗ ಭಾಯ್-ಭಾಯ್.. ಈಗ ವಿಲನ್-ವಿಲನ್'..!

click me!