Kolar: ಅನಧಿಕೃತ ಬೈಕ್ ಟ್ಯಾಕ್ಸಿಗಳಿಗೆ ಬ್ರೇಕ್ ಹಾಕಲು ಆಟೋ ಚಾಲಕರಿಂದ ಮನವಿ ಸಲ್ಲಿಕೆ

Published : Sep 30, 2026, 07:04 AM IST
Bike Taxi

ಸಾರಾಂಶ

ಬಂಗಾರಪೇಟೆಯಲ್ಲಿ ಅನಧಿಕೃತ ಬೈಕ್ ಟ್ಯಾಕ್ಸಿಗಳ ಹಾವಳಿಯಿಂದ ಆಟೋ ಚಾಲಕರ ಜೀವನಕ್ಕೆ ತೊಂದರೆಯಾಗಿದೆ. ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ನಡೆಯುತ್ತಿರುವ ಈ ಬೈಕ್ ಟ್ಯಾಕ್ಸಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಟೋ ಚಾಲಕರ ಸಂಘವು ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದೆ.

ಕೋಲಾರ: ಬಂಗಾರಪೇಟೆ ನಗರದಲ್ಲಿ ಅನಧಿಕೃತವಾಗಿ ಬೈಕ್ ಟ್ಯಾಕ್ಸಿ ನಡೆಸುತ್ತಿದ್ದು, ಅವರ ವಿರುದ್ಧ ಕಾನೂನು ರೀತಿ ಕಠಿಣ ಕ್ರಮಕೈಗೊಳ್ಳಬೇಕೆಂದು ತ್ರಿಚಕ್ರ ವಾಹನ ಚಾಲಕರ ಮಾಲೀಕರ ಸಂಘ ಆಗ್ರಹಿಸಿದೆ.

ನಗರದಲ್ಲಿ ಸುಮಾರು 30 ವರ್ಷಗಳಿಂದ ಸರ್ಕಾರದ ನಿಯಮಾನುಸಾರ ಮೋಟಾರು ವಾಹನ ಕಾಯ್ದೆ ಅಡಿಯಲ್ಲಿ ಆಟೋ ರೀಕ್ಷಾ ವಾಹನಗಳನ್ನು ವಾಣಿಜ್ಯ ಬಳಕೆಯ ವಾಹನಗಳೆಂದು ನೋಂದಣಿ ಮಾಡಿಸಿ ಅಧಿಕೃತವಾಗಿ ಆಟೋಗಳನ್ನು ಓಡಿಸಿ ಜೀವನ ನಡೆಸಲಾಗುತ್ತಿದೆ. ಸರ್ಕಾರ ವಿಧಿಸಿರುವ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಇಲಾಖೆ ಮತ್ತು ನ್ಯಾಯಾಲಯಗಳಲ್ಲಿ ದಂಡ ವಿಧಿಸಲಾಗುತ್ತಿದೆ.

ಆಫ್ ಆಧಾರಿತ ಟ್ಯಾಕ್ಸಿಗಳು

ಕಾನೂನು ಬದ್ಧವಾಗಿ ಸಾರಿಗೆ ವ್ಯವಸ್ಥೆಯಲ್ಲಿ ಉಪಸಾರಿಗೆಯಾಗಿ ಆಟೋ ರಿಕ್ಷಾ ಕ್ಯಾಬ್ ಚಾಲನೆ ಮಾಡಲಾಗುತ್ತಿದೆ. ಆದರೆ ಇತ್ತೀಚಿಗೆ ಆಫ್ ಆಧಾರಿತ ಟ್ಯಾಕ್ಸಿಗಳು ಕಾನೂನು ಬಾಹಿರವಾಗಿ ಸರ್ಕಾರದ ನೀತಿ ನಿಯಮಗಳನ್ನು ಗಾಳಿಗೆ ತೂರಿ ಪ್ರಯಾಣಿಕರಿಗೆ ಸುರಕ್ಷತೆ ಇಲ್ಲದೆ ನಗರದಲ್ಲಿ ನೂರಾರು ಬೈಕ್ ಟ್ಯಾಕ್ಸಿ ಚಾಲ್ತಿಯಲ್ಲಿದೆ, ಇದರಿಂದ ಆಟೋ ನಂಬಿ ಜೀವನ ನಡೆಸುತ್ತಿರುವ ನಮಗೆ ತೊಂದರೆಯಾಗಿದ್ದು, ಆದ್ದರಿಂದ ತಾಲೂಕು ಆಡಳಿತ ಹಾಗೂ ಆಟಿಓ ಇಲಾಖೆ ಅನಧಿಕೃತವಾಗಿ ಕಾನೂನು ಬಾಹಿರವಾಗಿ ಚಾಲನೆ ಮಾಡುತ್ತಿರುವ ಬೈಕ್ ವಾಹನಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ತಹಸೀಲ್ದಾರ್ ಸುಜಾತ ಅವರಿಗೆ ಮನವಿ ನೀಡಿದರು.

ಆಟೋ ಚಾಲಕರ ಸಂಘದ ರಾಜ್ಯಾಧ್ಯಕ್ಷ ಕೆ.ವಿ.ಸುರೇಶ್ ಕುಮಾರ್, ತಾಲೂಕು ಅಧ್ಯಕ್ಷ ಮುನಿವೆಂಕಟಪ್ಪ, ಉಪಅಧ್ಯಕ್ಷ ಜಾನಿಪಾಷ, ಗೌರವ ಅಧ್ಯಕ್ಷಸಿ.ಸುರೇಶ್, ಖಜಾಂಚಿ ಶಿವಪ್ಪ ಟಿ., ಪ್ರಧಾನ ಕಾರ್ಯದರ್ಶಿ ವಿ.ಮಂಜುನಾಥ್, ಕಮಲ್, ವೆಂಕಟಗಿರಿಯಪ್ಪ, ಅಶೋಕ್ ಕುಮಾರ್ ಇದ್ದರು.

ಇದನ್ನೂ ಓದಿ: Kolar: ಜಿಲ್ಲಾಧಿಕಾರಿಗಳಿಂದ ಭೂಗಳ್ಳರಿಗೆ 50 ಕೋಟಿ ಮೌಲ್ಯದ 14.37 ಎಕರೆ ಜಮೀನು ನೀಡಿದ ಆರೋಪ

PREV
Read more Articles on
click me!

Recommended Stories

ಬೆಂಗಳೂರು ಮಳೆ ಅವಾಂತರ: ಬೆಳ್ಳಂಬೆಳಗ್ಗೆ ಖಾಸಗಿ ಬಸ್‌ಗೆ ಡಿಕ್ಕಿಯಾದ ಇವಿ ಬಸ್, ತಪ್ಪಿದ ಅನಾಹುತ
Bengaluru: 100 ಕೋಟಿ ರೂ. ಮೌಲ್ಯದ 3 ಎಕರೆ 13 ಗುಂಟೆ ಸರ್ಕಾರಿ ಜಮೀನು ವಶಕ್ಕೆ ಪಡೆದ ಜಿಬಿಎ