ಸೈಕಲ್ ಹೊತ್ತು ಮಧುಗಿರಿಯ ಏಕಶಿಲಾ ಬೆಟ್ಟ ಏರಿದ ಆಂಧ್ರ ಎಂಜಿನಿಯರ್‌! ಯಾರು ಈ ಸಾಹಸಿ?

Kannadaprabha News   | Kannada Prabha
Published : Sep 30, 2026, 06:35 AM IST
AP Engineer Carries Cycle Up Madhugiri Fort on World Tourism Day

ಸಾರಾಂಶ

ಆಂಧ್ರಪ್ರದೇಶದ ಎಂಜಿನಿಯರ್ ಸಾಯಿ ಕುಮಾರ್ ಅವರು ವಿಶ್ವ ಪ್ರವಾಸೋದ್ಯಮ ದಿನದಂದು ಸೈಕಲ್ ಹೊತ್ತುಕೊಂಡು ತುಮಕೂರಿನ ಮಧುಗಿರಿ ಏಕಶಿಲಾ ಬೆಟ್ಟವನ್ನು ಏರುವ ಮೂಲಕ ವಿಶಿಷ್ಟ ಸಾಧನೆ ಮಾಡಿದ್ದಾರೆ. ಗ್ರಾಮೀಣ ಜೀವನ ಮತ್ತು ಪರಂಪರೆಯನ್ನು ಅಧ್ಯಯನ ಮಾಡಲು ಇವರು ಸೈಕ್ಲಿಂಗ್ ಚಾರಣವನ್ನು ಹವ್ಯಾಸವಾಗಿಸಿಕೊಂಡಿದ್ದಾರೆ.

ಸೋಮಶೇಖರ್ ವೈ

ಮಧುಗಿರಿ (ಸೆ.30): ಆಂಧ್ರದ ಹಿಂದೂಪುರದ ನಿವಾಸಿ, ಎಂಜಿನಿಯರ್ ಸಾಯಿ ಕುಮಾರ್ ಎಂಬುವರು ವಿಶ್ವಪ್ರಸಿದ್ಧ ತುಮಕೂರು ಜಿಲ್ಲೆಯ ಏಕಶಿಲಾ ಮಧುಗಿರಿ ಬೆಟ್ಟವನ್ನು ಸೈಕಲ್‌ ಹೊತ್ತು ಏರುವ ಮೂಲಕ ವಿಶಿಷ್ಟ ಸಾಧನೆ ಮಾಡಿದ್ದಾರೆ. ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ಅವರು ಈ ಸಾಹಸ ಮೆರೆದಿದ್ದಾರೆ.

ಕಳೆದ ಆರು ವರ್ಷಗಳಿಂದ ಸೈಕ್ಲಿಂಗ್

ಸಾಯಿಕುಮಾರ್ ಪ್ರಸ್ತುತ ಕಿಯಾ ಮೋಟಾರ್ಸ್ ಇಂಡಿಯಾದ ಪೂರಕ ಘಟಕದಲ್ಲಿ ಉದ್ಯೋಗಿಯಾಗಿದ್ದಾರೆ. ಕಳೆದ ಆರು ವರ್ಷಗಳಿಂದ ಅವರು ಸೈಕ್ಲಿಂಗ್ ಅನ್ನು ಕೇವಲ ಹವ್ಯಾಸವಾಗಿ ಮಾತ್ರವಲ್ಲದೆ ಗ್ರಾಮೀಣ ಜೀವನ, ಪರಂಪರೆ ಮತ್ತು ಸಾಮಾಜಿಕ ವಿಕಾಸವನ್ನು ಅಧ್ಯಯನ ಮಾಡುವ ಸಾಧನವಾಗಿಯೂ ಅನುಸರಿಸುತ್ತಿದ್ದಾರೆ.

ಹಿಂದೆ ಆರು ಬಾರಿ ಮಧುಗಿರಿ ಬೆಟ್ಟ ಏರಿದ್ದ ಸಾಹಸಿ!

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಾಯಿಕುಮಾರ್‌, ‘ಮಧುಗಿರಿ ಬೆಟ್ಟವನ್ನು ಈ ಹಿಂದೆ ಆರು ಬಾರಿ ಏರಿದ್ದೆ. ಆದರೆ, ಅದರ ರಚನೆ ಮತ್ತು ಶಿಲ್ಪದ ಮೂಲ ತಿಳಿದುಕೊಳ್ಳುವ ಉತ್ಸುಕತೆಯಿಂದ ಈ ಸೈಕಲ್ಲಿನೊಂದಿಗೆ ಬೆಟ್ಟವನ್ನು ಏರುವುದು ನನಗೆ ಆಸಕ್ತಿ ಮೂಡಿಸಿತ್ತು. ಈಗ ವಿಶ್ವ ಪ್ರವಾಸೋದ್ಯಮದ ದಿನದ ಅಂಗವಾಗಿ ಗಿರಿಯನ್ನೇರುವ ಪ್ರಯತ್ನ ಮಾಡಿ ಸಫಲನಾಗಿದ್ದು ತೃಪ್ತಿ ತಂದಿದೆ’ ಎಂದಿದ್ದಾರೆ.

ಸಾಯಿಕುಮಾರ್ ವಿಶ್ವ ಪರ್ಯಟನೆ

ನೇಪಾಳ, ಥೈಲ್ಯಾಂಡ್, ಪಾಕಿಸ್ತಾನ ಮತ್ತು ಮಲೇಷ್ಯಾಗಳಿಗೆ ಭೇಟಿ ನೀಡಿದ್ದು, ಅಲ್ಲಿನ ಜನರ ಜೀವನ ವಿಧಾನ ,ಆಹಾರ ಪದ್ಧತಿ, ವಸ್ತ್ರ ವಿನ್ಯಾಸ, ಸಾಂಸ್ಕೃತಿಕ ಆಚರಣೆ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಿದ್ದಾರೆ. ಥೈಲ್ಯಾಂಡ್‌ನಾದ್ಯಂತ ಗ್ರಾಮೀಣ ಪ್ರದೇಶದಲ್ಲಿ 100 ಕಿ.ಮೀ.ಗೂ ಹೆಚ್ಚು ದೂರ ಕಾಲ್ನಡಿಗೆಯಲ್ಲಿ ಕ್ರಮಿಸಿ, ಮುಖ್ಯವಾಗಿ ರೈತರೊಂದಿಗೆ ಸಂವಹನ ನಡೆಸಿ ಅವರ ಕೃಷಿ ಪದ್ಧತಿ ಮತ್ತು ಜೀವನಶೈಲಿಯ ಅಧ್ಯಯನ ನಡೆಸಿದ್ದಾರೆ.

4,000 ಕಿ.ಮೀ.ಸೈಕಲ್ ಪ್ರಯಾಣ

ಈವರೆಗೆ 4,000 ಕಿ.ಮೀ.ಸೈಕಲ್ ಪ್ರಯಾಣ ಕೈಗೊಂಡಿದ್ದು, ಸಾಂಸ್ಕೃತಿಕ ಸಂಬಂಧವನ್ನು ಬೆಸೆಯಲು ನೆರವಾಗಿದೆ. ಆಗಾಗ್ಗೆ ದೀರ್ಘ-ದೂರ ಸೈಕ್ಲಿಂಗ್ ಮತ್ತು ಚಾರಣವನ್ನು ಸಂಯೋಜಿಸುತ್ತಾರೆ. ಸಾಯಿಕುಮಾರ್ ತಂದೆ ಸಾಮಾನ್ಯ ಆಟೋ ಡ್ರೈವರ್, ತಾಯಿ ದರ್ಜಿ ವೃತ್ತಿ ಮಾಡುತ್ತಾರೆ. ಈ ಹಿಂದೆ ಆಂಧ್ರದ ಮಡಕಶಿರಾ ಬೆಟ್ಟವನ್ನು ಬರಿಗಾಲಲ್ಲಿ ಏರಿದ್ದು, ಇವರ ಸಾಹಸ ಪ್ರವೃತ್ತಿಗೆ ಸಾಕ್ಷಿಯಾಗಿದೆ.

PREV
Read more Articles on
click me!

Recommended Stories

ಭಾರತ್‌ ಗ್ಯಾಸ್‌ ಗ್ರಾಹಕರಿಗೆ ಸಿಹಿಸುದ್ದಿ: ಇನ್ನು ಹಣವಿಲ್ಲದಿದ್ರೂ ಸಿಗುತ್ತೆ ಎಲ್‌ಪಿಜಿ ಸಿಲಿಂಡರ್! ಹೇಗೆ ಗೊತ್ತಾ?
ಬೆಂಗಳೂರು-ಮಂಗಳೂರು ರೈಲು ಪ್ರಯಾಣಿಕರಿಗೆ ಶಾಕ್! ನಾಳೆಯ ಸ್ಪೆಷಲ್ ಟ್ರೇನ್ ಇಲ್ಲಿ ಸ್ಟಾಪ್ ಇಲ್ಲ! ಯಾರಿಗೆಲ್ಲ ತೊಂದರೆ?