ಮೈಸೂರು; ಕೊಡಗು ಮಹಿಳೆಗೆ ಪಾರ್ಕ್‌ನಲ್ಲಿಯೆ ಹೆರಿಗೆ, ನೆರವಿಗೆ ಬಂದ ಶಿಕ್ಷಕಿ

By Suvarna News  |  First Published Mar 9, 2021, 8:32 PM IST

ಪಾರ್ಕ್​ನಲ್ಲಿ ಕುಳಿತಿದ್ದ ಜಾಗದಲ್ಲೇ ಹೆರಿಗೆ/ ಕಾರ್ಯಕ್ರಮಕ್ಕೆ ಬಂದಿದ್ದ ವೇಳೆ ಹೆರಿಗೆ ನೋವು ಕಾಣಿಸಿಕೊಂಡ‌ ಪರಿಣಾಮ ಪಾರ್ಕ್‌ನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ/ ಮೈಸೂರಿನ ಪೀಪಲ್ಸ್ ಪಾರ್ಕ್​ನಲ್ಲಿ ನಡೆದ ಘಟನೆ/ ಕೊಡಗು ಮೂಲದ ಮಹಿಳೆ ತನ್ನ ಇಬ್ಬರು ಮಕ್ಕಳೊಂದಿಗೆ ಮೈಸೂರಿಗೆ ಆಗಮಿಸಿದ್ದಳು/


ಮೈಸೂರು(ಮಾ.  09) ಹೆರಿಗೆ ನೋವು ಕಾಣಿಸಿಕೊಂಡ ಪರಿಣಾಮ ಮಹಿಳೆ ಪಾರ್ಕ್ ನಲ್ಲೆ ಮಗುವಿಗೆ ಜನ್ಮ ನೀಡಿದ್ದಾಳೆ.  ಮೈಸೂರಿನ ಪೀಪಲ್ಸ್ ಪಾರ್ಕ್‌ನಲ್ಲಿ ಈ ಘಟನೆ ನಡೆದಿದೆ. ಕೊಡಗು ಮೂಲದ ಮಹಿಳೆಯೇ ಪಾರ್ಕ್ ನಲ್ಲಿ  ಮಗುವಿಗೆ ಜನ್ಮ ನೀಡಿದ್ದಾರೆ.

ತುಂಬು ಗರ್ಭಿಣಿ ತನ್ನ ಇಬ್ಬರು ಮಕ್ಕಳ ಜೊತೆ ಮೈಸೂರಿಗೆ ಆಗಮಿಸಿದ್ದರು. ಈ ನಡುವೆ ಪಾರ್ಕ್‌ನಲ್ಲಿ ಕುಳಿತಿದ್ದಾಗ ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಈ ವೇಳೆ ಗರ್ಭಿಣಿ  ಸಹಾಯಕ್ಕೆ  ಬಂದ ದೈಹಿಕ ಶಿಕ್ಷಣ ಶಿಕ್ಷಕಿ ಶೋಭಾ  ಸಾರ್ವಜನಿಕರ ಸಹಾಯದಿಂದ ಸ್ಥಳದಲ್ಲೇ ಮಹಿಳೆ ಹೆರಿಗೆ ಮಾಡಿಸಿದ್ದಾರೆ.

Tap to resize

Latest Videos

ಅವಧಿಪೂರ್ವ ಶಿಶು; ಅಕಾಲಿಕ ಜನನದ ಆರಂಭಿಕ ಲಕ್ಷಣಗಳು

ದೂರವಾಣಿ ಮೂಲಕ ವೈದ್ಯರ ಸಲಹೆ  ಪಡೆದು ಹೆರಿಗೆ ಮಾಡಲಾಗಿದೆ. ಇನ್ನು ಮಗು ಮತ್ತು ತಾಯಿ‌ಯನ್ನ ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.  ಆಂಬುಲೆನ್ಸ್ ನಲ್ಲಿ, ರೈಲಿನಲ್ಲಿ ಅಷ್ಟೆ ಏಕೆ ವಿಮಾನದಲ್ಲಿಯೂ ಹೆರಿಗೆ ಆದ ಸುದ್ದಿಯನ್ನು ಕೇಳಿದ್ದೇವು. 

click me!