ದೇಶದ ಮೊದಲ ಕೋವಿಡ್ ಸಾವಿಗೆ ವರ್ಷ- ಸಾವಿನ ಅಪಖ್ಯಾತಿ ಪಡೆದ ಜಿಲ್ಲೆ ಕಲಬುರಗಿ

Suvarna News   | Asianet News
Published : Mar 09, 2021, 04:08 PM ISTUpdated : Mar 09, 2021, 04:10 PM IST
ದೇಶದ ಮೊದಲ ಕೋವಿಡ್ ಸಾವಿಗೆ ವರ್ಷ- ಸಾವಿನ ಅಪಖ್ಯಾತಿ ಪಡೆದ ಜಿಲ್ಲೆ ಕಲಬುರಗಿ

ಸಾರಾಂಶ

ದೇಶದ ಮೊದಲ ಕೊರೋನಾ ವೈರಸ್ ಸಾವಿಗೆ ಒಂದು ವರ್ಷ ಕಂಪ್ಲೀಟ್ ಆಗಿದೆ. ಕಲಬುರಗಿಯಲ್ಲಿ 76 ವರ್ಷದ ವೃದ್ಧ ಮಹಾಮಾರಿಗೆ ಬಲಿಯಾಗಿದ್ದು ಸಾಕಷ್ಟು  ಆತಂಕವನ್ನೇ ಉಂಟು ಮಾಡಿತ್ತು. 

 ಕಲಬುರಗಿ (ಮಾ.09):  2020ನೇ ಇಸ್ವಿಯ ಮಾರ್ಚ್ 10ನೇ ದಿನಾಂಕ ನೆನೆದರೆ ಸಾಕು, ಕಲಬುರಗಿಯಷ್ಟೇ ಅಲ್ಲ, ಇಡೀ ದೇಶವೇ ಬೆಚ್ಚಿ ಬೀಳುತ್ತದೆ! ಸದ್ಯ ಕೊರೋನಾಗೆ ವ್ಯಾಕ್ಸಿನ್ ಕಂಡು ಹಿಡಿದಿದ್ದು, ಆತಂಕ ಕೊಂಚ ಕಡಿಮೆಯಾದರೂ ಪ್ರಕರಣಗಳು ಮಾತ್ರ ಇನ್ನೂ ಪತ್ತೆಯಾಗುತ್ತಲೇ ಇದೆ. 

 ದೇಶದಲ್ಲೇ ಮೊದಲ ಕೋವಿಡ್- 19 ಸಾವಿಗೆ ಕಲಬುರಗಿ ನಗರ ಸಾಕ್ಷಿಯಾಗಿದ್ದು ಇದೇ ದಿನ. ದೇಶದಲ್ಲಿ ಬಹುದೊಡ್ಡ ಮಟ್ಟದ ಆತಂಕ ಹುಟ್ಟುಹಾಕಿದ್ದ ಈ ಸಾವು ಸಂಭವಿಸಿ ವರ್ಷ ಪೂರೈಸುತ್ತಿದೆ. 

ಭಾರತವಷ್ಟೇ ಅಲ್ಲ, ದಕ್ಷಿಣ ಏಷಿಯಾ ಭಾಗದಲ್ಲೇ ಕಲಬುರಗಿಯಲ್ಲಾದ ಕೋವಿಡ್ ರೋಗಿಯ ಸಾವಿನ ಸಂಗತಿ ಆತಂಕ ಹುಟ್ಟುಹಾಕಿತ್ತಲ್ಲದೆ, ವಿಶ್ವಸಂಸ್ಥೆ ಸಹ ಕಲಬುರಗಿಯತ್ತ ಕಡೆ ಗಮನಹರಿಸಿತ್ತು. 

ಕರ್ನಾಟಕ ಸೇರಿ 6 ರಾಜ್ಯಗಳಲ್ಲಿ ಕೊರೋನಾ ಮತ್ತಷ್ಟು ಹೆಚ್ಚಳ!

 130 ಕೋಟಿ ಜನವಸತಿಯ ಭಾರತದಲ್ಲಿ ಕೋವಿಡ್- 19 ಸೋಂಕಿನ ಸಾವು ಸಂಭವಿಸಿದರೆ ಅದನ್ನು ನಿಯಂತ್ರಣಕ್ಕೆ ತರುವುದು ಬಹುದೊಡ್ಡ ಸವಾಲು ಎಂಬ ಕಾರಣಕ್ಕಾಗಿ ವಿಶ್ವಸಂಸ್ಥೆಯವರು ಸತತ ಕಲಬುರಗಿ ಮೇಲೆ ಕಣ್ಣಿಟ್ಟಿತ್ತು.  ಜಿಲ್ಲಾಡಳಿತವೂ ಈ ಬಗ್ಗೆ ತೀವ್ರ ಗಮನಹರಿಸಿತ್ತು. ಕಲಬುರಗಿಯ ಪ್ರಕರಣ ಕೊರೋನಾ ಕಾಲಖಂಡದಲ್ಲಿ ಅದೆಷ್ಟು ಮಹತ್ವ ಪಡೆದಿತ್ತು ಎಂಬುದನ್ನು ಊಹಿಸಬಹುದು.

ಭಾರತದಲ್ಲಿ ಕೊರೋನಾಗೆ ಮೊದಲ ಬಲಿ? ಕರ್ನಾಟಕದ ವ್ಯಕ್ತಿ ಸಾವು! .

ಸೌದಿ ಅರೇಬಿಯಾದಿಂದ ಆಗಮಿಸಿದ್ದ ಕಲಬುರಗಿಯ 76 ವರ್ಷದ ವೃದ್ಧ ಕೊರೋನಾ ವೈರಸ್‌ನಿಂದ ಸಾವಿಗೀಡಾಗಿದ್ದರು.  ಕೊರೋನಾದಿಂದ  ಆತ ಮೃತಪಟ್ಟಿದ್ದೆಂದು ಆರೋಗ್ಯ ಇಲಾಖೆ ದೃಢಪಡಿಸಿತ್ತು.  ಇದು ದೇಶದಲ್ಲೇ ಕೊರೋನಾದಿಂದ ಸಂಭವಿಸಿದ ಮೊದಲ ಸಾವಾಗಿತ್ತು. 

PREV
click me!

Recommended Stories

'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC
ನೆಲಮಂಗಲದಲ್ಲಿ ಹಸುವಿನ ಕತ್ತು ಕೊಯ್ದು ವಿಕೃತಿ ಮೆರೆದ ಕಳ್ಳರು; ಬೆಚ್ಚಿಬಿದ್ದ ಗ್ರಾಮಸ್ಥರು