ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಖೈದಿ ಸಾವು

By Suvarna News  |  First Published Mar 9, 2021, 4:22 PM IST

ಶಿವಮೊಗ್ಗದ ಕೇಂದ್ರ ಕಾರಾಗೃಹದಿಂದ ಖೈದಿಯೋರ್ವರು ಅನಾರೋಗ್ಯದಿಂದ ಕುಸಿದುಬಿದ್ದು ಮೃತಪಟ್ಟಿದ್ದಾರೆ. 


ಶಿವಮೊಗ್ಗ (ಮಾ.09): ಶಿವಮೊಗ್ಗ ಕೇಂದ್ರ‌ ಕಾರಾಗೃಹದಲ್ಲಿ ಖೈದಿಯೋರ್ವ ಅನಾರೋಗ್ಯದಿಂದ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ಇಂದು ಬೆಳಗ್ಗೆ ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ದಕ್ಷಿಣ ಕನ್ನಡ ಮೂಲದ ಜಗದೀಶ್ ಶೆಟ್ಟಿ(51) ಎಂಬ  ಖೈದಿ ಸಾವಿಗೀಡಾಗಿದ್ದಾರೆ . 

Tap to resize

Latest Videos

ಜಗದೀಶ್ ಹೃದಯ ಸಂಬಂಧಿ ರೋಗದಿಂದ ಬಳಲುತ್ತಿದ್ದರು ಎನ್ನಲಾಗಿದ್ದು, ಇಂದು ಬೆಳಗ್ಗೆ ಜಗದೀಶ್ ಕುಸಿದು ಬಿದ್ದಿದ್ದು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಶಿವಮೊಗ್ಗದಲ್ಲಿ ಭಾರೀ ಪ್ರಮಾಣದ ಸ್ಫೋಟಕ ಪತ್ತೆ ...

 ಜೈಲು ಸಿಬ್ಬಂದಿ ಕೂಡಲೇ ಜಗದೀಶ್‌ರನ್ನು ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ದಿದ್ದು, ಅದಾಗಲೇ ಅವರು ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದರು. 

 ಪ್ರಕರಣವೊಂದರಲ್ಲಿ ದಕ್ಷಿಣ ಕನ್ನಡ ಮಂಗಳೂರು ಪ್ರಧಾನ ಜಿಲ್ಲಾ ಮತ್ತು  ಸತ್ರ ನ್ಯಾಯಾಲಯ ಜಗದೀಶ್ ಗೆ 7 ವರ್ಷ ಕಠಿಣ ಶಿಕ್ಷೆ ವಿಧಿಸಿತ್ತು.  02.09.2018 ರಿಂದ ಜಗದೀಶ್ ಶಿವಮೊಗ್ಗ ಕೇಂದ್ರ ಕಾರಾಗೃಹ ದಲ್ಲಿ ಶಿಕ್ಷೆ ಅನುಭವಿಸುತ್ತಿದ್ದರು.

click me!