ಮಳೆಗಾಗಿ ಮಳೆದೇವರು ಇಗ್ಗುತ್ತಪ್ಪನ ಮೊರೆ ಹೋದ ಕೊಡಗಿನ ಜನತೆ!

By Govindaraj S  |  First Published Aug 18, 2023, 6:30 PM IST

ಮಲೆನಾಡು ಜಿಲ್ಲೆಯಾಗಿರುವ ಕೊಡಗಿನಲ್ಲಿ ಕಡಿಮೆ ಎಂದರೆ ನಾಲ್ಕೈದು ತಿಂಗಳು ಮಳೆ ಸುರಿಯುವುದು ವಾಡಿಕೆ. ಆದರೆ ಈ ಬಾರಿ ಕೊಡಗಿನಲ್ಲೇ ಮಳೆ ತೀವ್ರ ಕೊರತೆಯಾಗಿದೆ. ಹೀಗಾಗಿ ಕೊಡಗಿನ ಜನತೆ ಮಳೆಗಾಗಿ ಪ್ರಾರ್ಥಿಸಿ ಮಳೆದೇವರು ಪಾಡಿ ಇಗ್ಗುತ್ತಪ್ಪನ ಮೊರೆ ಹೋಗಿದ್ದಾರೆ. 


ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು (ಆ.18): ಮಲೆನಾಡು ಜಿಲ್ಲೆಯಾಗಿರುವ ಕೊಡಗಿನಲ್ಲಿ ಕಡಿಮೆ ಎಂದರೆ ನಾಲ್ಕೈದು ತಿಂಗಳು ಮಳೆ ಸುರಿಯುವುದು ವಾಡಿಕೆ. ಆದರೆ ಈ ಬಾರಿ ಕೊಡಗಿನಲ್ಲೇ ಮಳೆ ತೀವ್ರ ಕೊರತೆಯಾಗಿದೆ. ಹೀಗಾಗಿ ಕೊಡಗಿನ ಜನತೆ ಮಳೆಗಾಗಿ ಪ್ರಾರ್ಥಿಸಿ ಮಳೆದೇವರು ಪಾಡಿ ಇಗ್ಗುತ್ತಪ್ಪನ ಮೊರೆ ಹೋಗಿದ್ದಾರೆ. ಹೌದು ಕೊಡಗು ಜಿಲ್ಲೆಯಲ್ಲಿ ವಾಡಿಕೆಯಂತೆ ಈ ವೇಳೆಗೆ 2658 ಮಿಲಿ ಮೀಟರ್ ಗಿಂತಲೂ ಹೆಚ್ಚಿನ ಮಳೆ ಸುರಿಯಬೇಕಾಗಿತ್ತು. ಆದರೆ ಈ ಬಾರಿ 1617.46 ಮಿಲಿ ಮೀಟರ್ ಅಷ್ಟೇ ಮಳೆಯಾಗಿದೆ. ಅಂದರೆ ಶೇ 45 ರಷ್ಟು ಮಳೆ ಕೊರತೆಯಾಗಿದೆ. ಇದು ಕೊಡಗಿನ ಜನತೆಯನ್ನು ಆತಂಕಕ್ಕೆ ದೂಡಿದೆ. 

Tap to resize

Latest Videos

undefined

ಹೀಗಾಗಿ ಕೊಡಗಿನ ಕುಲದೇವರು, ಮಳೆ ದೇವರು ಎಂದೇ ಖ್ಯಾತಿಯಾಗಿರುವ ಪಾಡಿ ಇಗ್ಗುತ್ತಪ್ಪ ದೇವರಲ್ಲಿ ಮೊರೆ ಇಟ್ಟಿದ್ದಾರೆ. ಅಖಿಲ ಕೊಡವ ಸಮಾಜದ ನೇತೃತ್ವದಲ್ಲಿ ಇಗ್ಗುತ್ತಪ್ಪನ ದೇವಾಲಯಕ್ಕೆ ಹೋಗಿ ಅಲ್ಲಿ ಸಾಮೂಹಿಕ ವಿಶೇಷ ಪೂಜೆ ಸಲ್ಲಿಸಿ ಪರಿಪರಿಯಾಗಿ ಬೇಡಿದ್ದಾರೆ. ಹೌದು ಕಾಫಿ, ಮೆಣಸು ಬಿಟ್ಟರೆ ಭತ್ತವನ್ನು ಬೆಳೆಯುವ ಕೊಡಗಿನ ರೈತರು ವರ್ಷದ ಕೂಳಿಗಾಗಿ ಗದ್ದೆನಾಟಿ ಮಾಡಿ ಭತ್ತ ಬೆಳೆಯುವುದನ್ನೇ ನಂಬಿದ್ದಾರೆ. ಆದರೆ ಜುಲೈ ತಿಂಗಳ ಎರಡನೇ ವಾರದವರೆಗೆ ಸುರಿಯದಿದ್ದ ಮಳೆ ಜುಲೈ ತಿಂಗಳ ಕೊನೆಯಲ್ಲಿ ಬಿಟ್ಟು ಬಿಡದೆ ಸುರಿದಿತ್ತು. ಆಗಸ್ಟ್ ತಿಂಗಳ ಆರಂಭದಲ್ಲಿಯೂ ಅಷ್ಟೇ ಮಳೆ ಸುರಿದಿತ್ತು. 

ಶಾಸಕ ಹೆಬ್ಬಾರ್‌ ನಡೆಯ ಬಗ್ಗೆ ಮೂಡಿದ ಕುತೂಹಲ: ಬಾಂಬೆ ಬಾಯ್ಸ್‌ ಮರಳಿ ಕಾಂಗ್ರೆಸ್‌ಗೆ?

ಹೀಗಾಗಿ ತಡವಾಗಿ ಮಳೆ ಸುರಿದರೂ ಭತ್ತ ಬೆಳೆಯುವುದಕ್ಕೆ ಏನು ಚಿಂತಿಯಿಲ್ಲ ಎಂದು ರೈತರು ಗದ್ದೆಗಳನ್ನು ಉತ್ತು ಭತ್ತದ ಮಡಿಗಳನ್ನು ಮಾಡಿಕೊಂಡು ಕಾಯುತ್ತಿದ್ದಾರೆ. ಅಲ್ಲದೆ ಈಗಾಗಲೇ ಭತ್ತದ ಸಸಿಗಳು ಬಂದಿದ್ದು ಬಿತ್ತನೆಗೆ ಸಿದ್ಧವಾಗಿವೆ. ಆದರೆ ಆಗಸ್ಟ್ ಆಗಸ್ಟ್ ತಿಂಗಳ ಮೊದಲ ವಾರದಲ್ಲೇ ಕಡಿಮೆಯಾದ ಮಳೆ ಮಾಯವಾಗಿಬಿಟ್ಟಿದೆ. ಹೀಗಾಗಿ ರೈತರು ಈ ವರ್ಷದ ಕೂಳಿಗಾದರೂ ಭತ್ತ ಬೆಳೆಯಲು ಸಾಧ್ಯವಾಗುವುದೋ ಇಲ್ಲವೋ ಎನ್ನುವ ಆತಂಕಪಡುವಂತೆ ಆಗಿದೆ. ಸದ್ಯ ಗದ್ದೆಗಳಲ್ಲಿ ಈಗಾಗಲೇ ಭತ್ತದ ಸಸಿಗಳು ಬೆಳೆದಿದ್ದು ನಾಟಿ ಮಾಡುವ ಹಂತಕ್ಕೆ ಬೆಳೆದಿವೆ. 

ಆದರೆ ಮಳೆ ಕೊರತೆಯಾಗಿರುವುದರಿಂದ ನಾಟಿ ಮಾಡಿದರೆ ಬೆಳೆ ಒಣಗಿ ಹೋಗುವ ಸ್ಥಿತಿ ನಿರ್ಮಾಣವಾದರೆ ಹೇಗೆ ಎನ್ನುವ ಚಿಂತೆ ರೈತರಿಗೆ ಎದುರಾಗಿದೆ. ಮತ್ತೊಂದೆಡೆ ನಾಟಿ ಮಾಡದಿದ್ದರೆ ಮಡಿಯಲ್ಲೇ ಸಸಿಗಳು ಬೆಳೆದು ಹಾಳುವ ಆತಂಕವೂ ಇದೆ. ಹೀಗಾಗಿ ಕೊಡಗಿನ ಜನತೆ ಉತ್ತಮ ಮಳೆ ಸುರಿದು ಮಳೆ, ಬೆಳೆ ಚೆನ್ನಾಗಿ ಬರಲಿ ಎಂದು ಆಶೀರ್ವದಿಸು ದೇವರೆ ಎಂದು ಪ್ರಾರ್ಥಿಸಿದ್ದೇವೆ ಎಂದು ಮುಖಂಡ ಸುಬ್ರಹ್ಮಣಿ ಕಾವೇರಪ್ಪ ತಿಳಿಸಿದ್ದಾರೆ. ಬೆಳೆಗಳಿಗೆ ಮಳೆ ಕೊರತೆಯಷ್ಟೇ ಕಾವೇರಿ, ಲಕ್ಷ್ಮಣತೀರ್ಥ, ಪಯಶ್ವಿನಿ ಸೇರಿದಂತೆ ಪ್ರಮುಖ ನದಿಗಳು ಹುಟ್ಟಿ ಹರಿಯುವ ಕೊಡಗಿನಲ್ಲಿ ಮಳೆಯ ಕೊರತೆ ಎದುರಾಗಿರುವುದರಿಂದ ಕುಡಿಯುವ ನೀರಿಗೂ ಆಹಾಕಾರ ಎದುರಾಗುವ ಸಾಧ್ಯತೆ ಇದೆ. 

ಆನ್‌ಲೈನ್‌ ಮೋಸದ ಜಾಲ: ಕಾರಿನ ಆಸೆಗೆ 11 ಲಕ್ಷ ಹಣ ಕಳೆದುಕೊಂಡ ಕಾಫಿನಾಡಿನ ಯುವಕ

ಸದ್ಯ ನಗರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿಲ್ಲ. ಆದರೆ ಮಳೆಗಾಲ ಮುಗಿಯುವ ಮೊದಲೇ ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಹೀಗಾಗಿ ಕಡಿಮೆ ಪ್ರಮಾಣದಲ್ಲಿ ಎಷ್ಟು ಅಗತ್ಯವೋ ಅಷ್ಟನ್ನು ಮಾತ್ರ ಮಿತವಾಗಿ ಬಳಸುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ತಿಳಿಸಿದ್ದಾರೆ. ಜೊತೆಗೆ ಜಿಲ್ಲೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಹೋಂ ಸ್ಟೇ, ರೆಸಾರ್ಟ್ಗಳು ಇದ್ದು ಅವುಗಳಲ್ಲಿಯೂ ಕಡಿಮೆ ಬಳಸಬೇಕು. ಇದನ್ನು ಹೋಂಸ್ಟೇ ರೆಸಾರ್ಟ್ಗಳಿಗೆ ಬರುವ ಪ್ರವಾಸಿಗರಿಗೂ ಸೂಚಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

click me!