ಹುಬ್ಬಳ್ಳಿಯಲ್ಲಿ ಕೈಗಾರಿಕೆ ಸ್ಥಾಪನೆಗೆ ಒತ್ತು ನೀಡಿ: ಜಗದೀಶ್‌ ಶೆಟ್ಟರ್‌

By Kannadaprabha News  |  First Published Aug 18, 2023, 5:56 PM IST

ಜಿಲ್ಲೆಯಲ್ಲಿ ಕೈಗಾರೀಕರಣ ಅಭಿವೃದ್ಧಿಗೆ ಒತ್ತು ನೀಡಬೇಕಾಗಿದೆ. ಹೊಸ ಹೊಸ ಕೈಗಾರಿಕೆಗಳ ಸ್ಥಾಪನೆಗೆ ಕರ್ನಾಟಕ ಕೈಗಾರಿಕೆ ಪ್ರದೇಶಗಳ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಅಧಿಕಾರಿಗಳು ಅವಕಾಶ ಮಾಡಿಕೊಡಬೇಕು. 


ಹುಬ್ಬಳ್ಳಿ (ಆ.18): ಜಿಲ್ಲೆಯಲ್ಲಿ ಕೈಗಾರೀಕರಣ ಅಭಿವೃದ್ಧಿಗೆ ಒತ್ತು ನೀಡಬೇಕಾಗಿದೆ. ಹೊಸ ಹೊಸ ಕೈಗಾರಿಕೆಗಳ ಸ್ಥಾಪನೆಗೆ ಕರ್ನಾಟಕ ಕೈಗಾರಿಕೆ ಪ್ರದೇಶಗಳ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಅಧಿಕಾರಿಗಳು ಅವಕಾಶ ಮಾಡಿಕೊಡಬೇಕು. ಇದರಿಂದ ಕೈಗಾರಿಕೆಗಳ ಜತೆಗೆ ನಗರಗಳು ಅಭಿವೃದ್ಧಿ ಹೊಂದಲಿವೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿಪ ಸದಸ್ಯ ಜಗದೀಶ್‌ ಶೆಟ್ಟರ್‌ ಹೇಳಿದರು. ಅವರು ಗುರುವಾರ ಗೃಹ ಕಚೇರಿಯಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಮತ್ತು ಕೈಗಾರಿಕಾ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.

ಎಫ್‌.ಎಂ.ಜಿ.ಸಿ ಕ್ಲಸ್ಟರ್‌ ಹಾಗೂ ಇತರೆ ಕೈಗಾರಿಕೆ ಸ್ಥಾಪಿಸಲು ಅಗತ್ಯವಿರುವ ಖಾಲಿ ಪ್ರದೇಶಗಳನ್ನು ಕೈಗಾರಿಕೋದ್ಯಮಿಗಳಿಗೆ ಒದಗಿಸಬೇಕು. ಆ ಮೂಲಕ ಕೈಗಾರಿಕೋದ್ಯಮಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು. ಹೊಸ ಕೈಗಾರಿಕೆಗಳ ಸ್ಥಾಪನೆಗೆ ಅವಶ್ಯಕವಾಗಿರುವ ಸವಲತ್ತು ಮತ್ತು ಅನುಕೂಲಗಳನ್ನು ಮಾಡಿಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಕೆಐಎಡಿಬಿ ಅಭಿವೃದ್ಧಿ ಅಧಿಕಾರಿಗಳಾದ ಬಿ.ಟಿ.ಪಾಟೀಲ, ಎಸ್‌.ಎಲ್‌.ಎಒ ನವೀನ ಹುಲ್ಲೂರ,ಉಪ ಅಭಿವೃದ್ಧಿ ಅಧಿಕಾರಿ ಗೋವಿಂದ ಭಜಂತ್ರಿ,ಎಂಜಿನಿಯರ್‌ ಎಸ್‌.ಎಂ. ಕಣಬೂರ ಸೇರಿದಂತೆ ಹಲವರಿದ್ದರು.

Latest Videos

undefined

ಮತ್ತೆ ಮುನ್ನಲೆಗೆ ಬಂದ ಈದ್ಗಾ ಮೈದಾನ ವಿವಾದ: ಗಣೇಶೋತ್ಸವಕ್ಕೆ ಅನುಮತಿ ನೀಡುವಂತೆ ಪಾಲಿಕೆಗೆ ಮನವಿ

ಭ್ರಷ್ಟಾಚಾರದ ಬಗ್ಗೆ ಮಾತಾಡುವ ನೈತಿಕತೆ ಬಿಜೆಪಿಗಿಲ್ಲ: ಭ್ರಷ್ಟಾಚಾರದ ಕುರಿತು ಮಾತನಾಡುವ ನೈತಿಕತೆ ಬಿಜೆಪಿಯವರಿಗಿಲ್ಲ. ಹಿಂದೆ ಅಧಿಕಾರದಲ್ಲಿದ್ದ ವೇಳೆ ಅವರು 40% ಭ್ರಷ್ಟಾಚಾರ ಆರೋಪದ ಕುರಿತು ಉತ್ತರ ನೀಡಲಿಲ್ಲ. ಇದರಿಂ ದಾಗಿಯೇ ಜನಮನ್ನಣೆ ಕಳೆದುಕೊಂಡು ಸೋಲು ಅನುಭವಿಸುವಂತಾಯಿತು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಕಿಡಿಕಾರಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ 120 ಸ್ಥಾನಗಳಿಂದ 60 ಸ್ಥಾನಕ್ಕೆ ಇಳಿಯುತ್ತದೆ ಎಂದರೆ ಏನರ್ಥ? ಈ ರೀತಿಯ ಆರೋಪ ಹೊರೆಸುವ ನೈತಿಕತೆ ಬಿಜೆಪಿ ಉಳಿದಿಲ್ಲ ಎಂದರು.

ಸೌಜನ್ಯ ಪ್ರಕರಣ ಮರು ತನಿಖೆಯಾಗಲಿ: ಪ್ರಮೋದ್‌ ಮುತಾಲಿಕ್‌

ಇನ್ನು, ‘ಅಡುಗೆ ಇದ್ದಾಗ ಶೆಟ್ಟರ್‌ ಊಟಕ್ಕೆ ಬರುತ್ತಾರೆ’ ಬೊಮ್ಮಾಯಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಕಳೆದ ಎರಡು ವರ್ಷದಿಂದ ಜಗದೀಶ್‌ ಶೆಟ್ಟರ್‌ ಯಾವ ಅಧಿಕಾರ ದಲ್ಲಿದ್ರು ಎಂಬುದು ಬಿಜೆಪಿಯವರಿಗೆ ಗೊತ್ತಿರಲಿಲ್ಲವೆ? ಬಸವರಾಜ ಬೊಮ್ಮಾಯಿ ಕ್ಯಾಬಿನೆಟ್‌ನಲ್ಲಿ ನಾನು ಸಚಿವನಾಗಿ ಕಾರ್ಯ ನಿರ್ವಹಿಸುವುದಿಲ್ಲ ಎಂದಿದ್ದೆ. ಅವಾಗಲೇ ಬಿಜೆಪಿ ಸೋಲುತ್ತೆ ಅಂತ ಅವರಿಗೆ ಅನ್ನಿಸಿರಬೇಕು. ಅಂದರೆ, ಕಾಂಗ್ರೆಸ್‌ ಮೊದಲೇ ಗೆಲ್ಲುತ್ತೆ ಅಂತ ಬಿಜೆಪಿಯವರಿಗೂ ಖಾತ್ರಿ ಆಗಿತ್ತು ಎಂದು ತಿರುಗೇಟು ನೀಡಿದರು.

click me!