Kodagu: ಸುಂಟಿಕೊಪ್ಪದಲ್ಲಿ ಕೆಇಬಿ ಮತ್ತು ಪಂಚಾಯಿತಿ ಪೈಟ್‌: ತೆರಿಗೆ ಕಟ್ಟದ ಅಂಗಡಿಗಳ ಬಂದ್

By Sathish Kumar KH  |  First Published Feb 15, 2023, 10:40 PM IST

ತೆರಿಗೆ ಕಟ್ಟದ ಅಂಗಡಿಗಳ ಬಂದ್ ಸುಂಟಿಕೊಪ್ಪ ಪಂಚಾಯಿತಿ
ಪಂಚಾಯಿತಿ 35 ಲಕ್ಷ ರೂಪಾಯಿಯನ್ನು ವಿದ್ಯುತ್ ಬಿಲ್ಲನ್ನು ಬಾಕಿ
ಕೆಇಬಿ ಮತ್ತು ಪಂಚಾಯಿತಿಗಳ ನಡುವೆ ಬಿಗ್‌ ಫೈಟ್‌


ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಫೆ.15):  ಗ್ರಾಮಗಳ ಅಭಿವೃದ್ಧಿಗೆ ಇರುವ ಸರ್ಕಾರವೆಂದೇ ಹೇಳುವ ಗ್ರಾಮ ಪಂಚಾಯಿತಿಗಳು ಆರ್ಥಿಕವಾಗಿ ಸದೃಢವಾಗಿರಬೇಕು. ಆದರೆ ಅದಕ್ಕೆ ಪಂಚಾಯಿತಿ ವ್ಯಾಪ್ತಿಯಲ್ಲಿರುವ ವಿವಿಧ ಮಳಿಗೆಗಳು ಅಥವಾ ನೀರು, ಮನೆ ತೆರಿಗೆಗಳೇ ಆದಾಯದ ಮೂಲಗಳು. ಆದರೆ ಅದನ್ನು ಸರಿಯಾಗಿ ಸಂಗ್ರಹಿಸದಿದ್ದರೆ ಪಂಚಾಯಿತಿ ಆದಾಯಕ್ಕೆ ಸಂಪೂರ್ಣ ಕುತ್ತು ಬರುತ್ತದೆ. 

ಹೀಗೆ ಆದಾಯಕ್ಕೆ ಕೊರತೆ ಎದುರಾಗಿ ಪಂಚಾಯಿತಿಯೇ ಕತ್ತಲಲ್ಲಿ ಮುಳುಗಿರುವ ಘಟನೆ ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ. ಈ ಕುರಿತು ಸುವರ್ಣ ನ್ಯೂಸ್ ಬಿಗ್ ತ್ರಿ ಸುದ್ದಿ ಪ್ರಕಟಿಸುತ್ತಿದ್ದಂತೆ ಗ್ರಾಮ ಪಂಚಾಯಿತಿ ಆದಾಯ ಕೊರತೆಗೆ ಕಾರಣವಾಗಿದ್ದ ಮಳಿಗೆಗಳಿಗೆ ಬೀಗ ಹಾಕಲಾಗಿದೆ. 

Latest Videos

undefined

Kodagu: ಜನರ ನಿದ್ದೆಗೆಡಿಸಿದ ನರಭಕ್ಷಕ ಗಂಡು ಹುಲಿ ಸೆರೆ: ನಿಟ್ಟುಸಿರು ಬಿಟ್ಟ ಜನ

ಹೌದು ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ಪಟ್ಟಣ ಪಂಚಾಯಿತಿ ರೀತಿಯಲ್ಲಿ ಇರುವ ಸುಂಟಿಕೊಪ್ಪ  ಗ್ರಾಮ ಪಂಚಾಯಿತಿ ಮೀನು, ಕೋಳಿ, ಮಟನ್ ಮಾರಾಟದ ಹಕ್ಕುಗಳನ್ನು ಪ್ರತಿವರ್ಷ ಹರಾಜು ಕೂಗುತ್ತದೆ. ಅದರಿಂದಲೇ 35 ರಿಂದ 40 ಲಕ್ಷ ಆದಾಯ ಬರುತ್ತದೆ. ಆದರೆ ಕೇವಲ ಕೋಳಿ, ಮೀನು ಮಾರಾಟದ ಮೂರು ಅಂಗಡಿಗಳಿಂದಲೇ ಬರೋಬ್ಬರಿ 28 ಲಕ್ಷ ತೆರಿಗೆ ಸಂಗ್ರಹವಾಗದೆ ಬಾಕಿ ಇದೆ. ತೆರಿಗೆ  ಸಂಗ್ರಹ ಒಂದೆಡೆ ಬಾಕಿ ಇದ್ದರೆ, ಮತ್ತೊಂದೆಡೆ ಪಂಚಾಯಿತಿ 35 ಲಕ್ಷ ರೂಪಾಯಿಯನ್ನು ವಿದ್ಯುತ್ ಬಿಲ್ಲನ್ನು ಬಾಕಿ ಉಳಿಸಿಕೊಂಡಿದೆ. 

ಹೀಗಾಗಿ ಕೆಇಬಿ ಕೂಡ ಪಂಚಾಯಿತಿ ಕಚೇರಿಯ ವಿದ್ಯುತ್ ಸಂಪರ್ಕವನ್ನು ಕಡಿತ ಮಾಡಿತ್ತು. ಈ ಕುರಿತು ಸುವರ್ಣ ನ್ಯೂಸ್ ಬುಧವಾರ ಸುದ್ದಿ ಪ್ರಸಾರ ಮಾಡುತ್ತಿದ್ದಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಅಧ್ಯಕ್ಷರು ಫೀಲ್ಡಿಗೆ ಇಳಿದರು. ಪಂಚಾಯಿತಿಯ ವ್ಯಾಪ್ತಿಯಲ್ಲಿ ಮೀನು ಮತ್ತು ಮಾಂಸ ಮಾರಾಟದ ಹಕ್ಕು ಪಡೆದು ತೆರಿಗೆ ಕಟ್ಟದ ಮೂರು ಅಂಗಡಿಗಳಿಗೆ ಬೀಗ ಹಾಕಿದರು. ಅಷ್ಟೇ ಅಲ್ಲ, ಇನ್ನು 15 ದಿನಗಳ ಒಳಗಾಗಿ ಬಾಕಿ ಇರುವ ತೆರಿಗೆಯನ್ನು ಕಟ್ಟದಿದ್ದರೆ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಹರಾಜು ಹಾಕಲಾಗುವುದು ಎಂದು ಪಿಡಿಓ ವೇಣುಗೋಪಾಲ್ ಎಚ್ಚರಿಕೆ ನೀಡಿದರು. 

ಪಂಚಾಯಿತಿಗೆ ಒಂದೆಡೆ ವಿದ್ಯುತ್ ಸಂಪರ್ಕ ಇಲ್ಲ. ಮತ್ತೊಂದೆಡೆ ಪಂಚಾಯಿತಿಯ ನೂತನ ಕಟ್ಟಡ ಸಿದ್ದವಾಗಿದ್ದರೂ ವಿದ್ಯುತ್ ತೆರಿಗೆ ಕಟ್ಟದ ಹೊರತ್ತು ಹೊಸ ಕಟ್ಟಡಕ್ಕೂ ವಿದ್ಯುತ್ ಸಂಪರ್ಕ ಕೊಡುವುದಿಲ್ಲ ಎಂದು ಕೆಇಬಿ ಅಧಿಕಾರಿಗಳು ಪಟ್ಟು ಹಿಡಿದಿದ್ದಾರೆ. ಆದರೆ ಪಿಡಿಓ ವೇಣುಗೋಪಾಲ್ ಅವರು ಕೆಇಬಿ ಯಿಂದಲೂ ಕೂಡ ತಪ್ಪು ತಪ್ಪು ವಿದ್ಯುತ್ ಬಿಲ್ಲು ಬರುತ್ತಿದ್ದು, ಅತೀ ಹೆಚ್ಚು ವಿದ್ಯುತ್ ಬಿಲ್ಲು ಬರುತ್ತಿದೆ. ಇದನ್ನು ಪರಿಶೀಲಿಸುವಂತೆ ಕೆಇಬಿಗೂ ಮನವಿ ಮಾಡಿದ್ದೇವೆ. ಸದ್ಯಕ್ಕೆ ಪಂಚಾಯಿತಿ ಬಿಲ್ಲು ಬಾಕಿ ಇರುವುದನ್ನು ಪಾವತಿಸಿ ವಿದ್ಯುತ್ ಸಂಪರ್ಕ ಪಡೆಯಲಾಗುವುದು ಎಂದಿದ್ದಾರೆ. 

Kodagu: ನಿನ್ನೆ ಮೊಮ್ಮಗ, ಇಂದು ತಾತ: ನರಭಕ್ಷಕ ಹುಲಿಗೆ 24 ಗಂಟೆಯಲ್ಲಿ ಒಂದೇ ಕುಟುಂಬದ ಇಬ್ಬರ ಬಲಿ

ಇನ್ನು ಹೊಸದಾಗಿ ನಿರ್ಮಾಣವಾಗಿರುವ ಪಂಚಾಯಿತಿ ಕಟ್ಟಡ ಕಳಪೆಯಾಗಿದ್ದು, ಹಳೆಯ ಬಾಗಿಲುಗಳನ್ನೇ ಅಳವಡಿಸಲಾಗಿದೆ. ಜೊತೆಗೆ ನೂತನ ಕಟ್ಟಡಕ್ಕೆ ಬಳಿದಿರುವ ಬಣ್ಣವೂ ಉದುರುತ್ತಿದ್ದು, ಕಳಪೆಯಾಗಿದೆ ಎನ್ನುವುದು ಗೊತ್ತಾಗುತ್ತದೆ. ಇವುಗಳನ್ನು ಸುವರ್ಣ ನ್ಯೂಸ್ ಗಮನಸೆಳೆದಿತ್ತು. ಹೀಗಾಗಿ ಪಂಚಾಯಿತಿಯ ನೂತನ ಕಟ್ಟಡಕ್ಕೆ ದೌಡಾಯಿಸಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್ ಎಲ್ಲವನ್ನು ಪರಿಶೀಲನೆ ನಡೆಸಿದರು. ನೂತನ ಕಟ್ಟಡದ ಕಳಪೆ ಬಾಗಿಲನ್ನು ತೆಗೆದು ಉತ್ತಮವಾದ ಬಾಗಿಲು ಹಾಕಿಸುವುದಾಗಿ ಪಿಡಿಓ ಹೇಳಿದರು. ಕಾಮಗಾರಿ ಮಾಡಿರುವ ಗುತ್ತಿಗೆದಾರನಿಗೆ ಇನ್ನೂ ಬಿಲ್ಲು ಕೊಡುವುದು ಬಾಕಿ ಇದೆ. ಆ ಹಣದಿಂದಲೇ ಬಾಗಿಲು ಮಾಡಿಸುವುದಾಗಿ ಹೇಳಿದರು.

click me!