Davanagere: ಲಂಚಕ್ಕೆ ಬೇಡಿಕೆಯಿಟ್ಟಿದ್ದ ಎಂಜಿನಿಯರ್‌ಗಳ ಮೇಲೆ ಪ್ರಕರಣ ದಾಖಲು: ಶ್ರೀರಾಮಸೇನೆ ಹೋರಾಟಕ್ಕೆ ಜಯ

By BK Ashwin  |  First Published Feb 15, 2023, 6:51 PM IST

ಇತ್ತೀಚೆಗೆ ನಗರದ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಾಯಕ ಕಾರ್ಯಪಾಲಕ ಅಭಿಯಂತರು ಹಾಗೂ ಅವರ ಸಹಾಯಕ ಎಂಜಿನಿಯರ್ ತಮ್ಮ ಕಚೇರಿಯಿಂದ ಮಂಜೂರಾದ ಕಾಮಗಾರಿಯ ಹಣವನ್ನು ಗುತ್ತಿಗೆದಾರರಿಗೆ ಬಿಡುಗಡೆ ಮಾಡಲು ಲಂಚ ಕೇಳಿದ್ದಾರೆ.


ದಾವಣಗೆರೆ (ಫೆಬ್ರವರಿ 15, 2023)
(ವರದಿ: ವರದರಾಜ್)

ದಾವಣಗೆರೆ ನಗರದ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಗೆ ಸಂಬಂಧಿಸಿದ ಕಾಮಗಾರಿ ನಡೆಸಿದ ಗುತ್ತಿಗೆದಾರರಿಂದ ಅಧಿಕಾರಿಗಳು ಲಂಚ ಪಡೆಯುತ್ತಿರುವ ಬಗ್ಗೆ ಆಡಿಯೋ ಹಾಗೂ ವಿಡಿಯೋ ಆಧರಿಸಿ ನಾಲ್ವರು ಎಂಜಿನಿಯರ್ ಮೇಲೆ ಪ್ರಕರಣ ದಾಖಲಿಸಲಾಗಿದ್ದು ನಮ್ಮ ಹೋರಾಟ ಯಶಸ್ವಿಯಾಗಿದೆ ಎಂದು ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ಮಣಿಕಂಠ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇತ್ತೀಚಿನ ದಿನಗಳಲ್ಲಿ ದಾವಣಗೆರೆ ಮಹಾನಗರಪಾಲಿಕೆಯಲ್ಲಿ ಅಧಿಕಾರಿ ಸಿಬ್ಬಂದಿಯವರು ಸಾರ್ವಜನಿಕರಿಂದ ಲಂಚ ಪಡೆಯುವ ಸಮಯದಲ್ಲಿ ಲೋಕಾಯುಕ್ತ ಅಧಿಕಾರಿಗಳು ಟ್ರ್ಯಾಪ್ ಮೂಲಕ ಪ್ರಕರಣ ದಾಖಲಿಸಿರುತ್ತಾರೆ ಹಾಗೂ ಇದೇ ರೀತಿ ದಾವಣಗೆರೆ ವಿಶೇಷ ಭೂ-ಸ್ವಾಧೀನ ಅಧಿಕಾರಿ, ಹರಿಹರ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಮಹಿಳಾ ಮಕ್ಕಳ ಸ್ನೇಹಿ ನ್ಯಾಯಾಲಯದ ಎಸ್.ಪಿ.ಪಿ.ಯವರು ಸಹ ಲಂಚ ಪಡೆಯುವಾಗ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ. 

Tap to resize

Latest Videos

ಆದರೂ ಅಧಿಕಾರಿಗಳು ಲಂಚ ಪಡೆಯುವುದನ್ನು ಬಿಡುತ್ತಿಲ್ಲ. ನೇರಾನೇರವಾಗಿ ತಮ್ಮ ಕಚೇರಿಯಲ್ಲಿಯೇ ಲಂಚ ಪಡೆಯುತ್ತಿದ್ದಾರೆ. ಇತ್ತೀಚೆಗೆ ನಗರದ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಾಯಕ ಕಾರ್ಯಪಾಲಕ ಅಭಿಯಂತರು ಹಾಗೂ ಅವರ ಸಹಾಯಕ ಎಂಜಿನಿಯರ್ ತಮ್ಮ ಕಚೇರಿಯಿಂದ ಮಂಜೂರಾದ ಕಾಮಗಾರಿಯ ಹಣವನ್ನು ಗುತ್ತಿಗೆದಾರರಿಗೆ ಬಿಡುಗಡೆ ಮಾಡಲು ಲಂಚ ಕೇಳಿದ್ದಾರೆ. ನಾನೂ ಕೂಡ ಈ ಅಧಿಕಾರಕ್ಕೆ ಬರಲು 25 ಲಕ್ಷ ರೂ. ಹಣ ನೀಡಿದ್ದೇನೆ ಎಂದು ಬಹಿರಂಗವಾಗಿ ಹೇಳಿದ್ದಾರೆ. ಈ ಬಗ್ಗೆ ಆಡಿಯೋ ಹಾಗೂ ವಿಡಿಯೋ ಲಭ್ಯವಿದೆ.

ಇದನ್ನು ಓದಿ: ದಾವಣಗೆರೆ: ಫೋಕ್ಸೋ ಪ್ರಕರಣದ ಆರೋಪಿಗೆ ಸಹಕರಿಸಲು ಚೆಕ್ಕಲ್ಲಿ ಲಂಚ: ಸರ್ಕಾರಿ ವಕೀಲೆ ಲೋಕಾಯುಕ್ತ ಬಲೆಗೆ!

ಈ ಬಗ್ಗೆ ಸಂಪೂರ್ಣ ದಾಖಲೆಗಳೊಂದಿಗೆ ಐಜಿಪಿಯವರಿಗೆ ಕ್ರಮ ವಹಿಸಬೇಕೆಂದು ಮನವಿ ಮಾಡಲಾಗಿದೆ. ಆದ್ದರಿಂದ ಎಇಇ,ಎಇ,ಇಇ ಹಾಗೂ ಎಸ್ಇ ಅವರ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ಅವರುಗಳ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು‌ ಎಂದು ಒತ್ತಾಯಿಸಿದರು. ಈ ಸುದ್ದಿಗೋಷ್ಠಿಯಲ್ಲಿ ಸಾಗರ್, ಶ್ರೀಧರ್, ರಾಹುಲ್, ರಾಜು, ವಿನಯ್, ರಮೇಶ್, ರಘು, ಡಿ. ವಿನೋದ್ ಇನ್ನಿತರರು ಭಾಗಿಯಾಗಿದ್ದರು.

ಪೋಕ್ಸೋ ಪ್ರಕರಣದ ಆರೋಪಿಗೆ ಸಹಕರಿಸಲು ಚೆಕ್ಕಲ್ಲಿ ಲಂಚ: ಸರ್ಕಾರಿ ವಕೀಲೆ ಲೋಕಾಯುಕ್ತ ಬಲೆಗೆ..!
ಪೋಕ್ಸೋ ಪ್ರಕರಣದ ಆರೋಪಿಗೆ ಸಹಕರಿಸುವುದಾಗಿ, 1.87 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದಾಗ ಹಣ ಹಾಗೂ ಹಣಕ್ಕೆ ಖಾತರಿಯಾಗಿ ಪಡೆದಿದ್ದ ಸಹಿ ಮಾಡಿದ್ದ ಖಾಲಿ ಚೆಕ್‌ ಸಮೇತ ವಿಶೇಷ ಸರ್ಕಾರಿ ಅಭಿಯೋಜಕಿ ಲೋಕಾಯುಕ್ತ ಗಾಳಕ್ಕೆ ಸಿಕ್ಕಿ ಬಿದ್ದ ಘಟನೆ ದಾವಣಗೆರೆ ನಗರದಲ್ಲಿ ಕೆಲ ದಿನಗಳ ಹಿಂದೆ ನಡೆದಿದೆ. ಜಿಲ್ಲಾ ಪೋಕ್ಸೋ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕಿ ರೇಖಾ ಎಸ್‌.ಕೋಟೆಗೌಡರ್‌ ಲೋಕಾಯುಕ್ತರಿಗೆ ಹಣ ಮತ್ತು ಸಹಿ ಮಾಡಿದ್ದ ಖಾಲಿ ಚೆಕ್‌ ಸಮೇತ ಸಿಕ್ಕಿ ಬಿದ್ದ ಆರೋಪಿ. ಪೋಕ್ಸೋ ಪ್ರಕರಣದ ಆರೋಪಿಗೆ ಸಹಾಯ ಮಾಡಲು ವಿಶೇಷ ಸರ್ಕಾರಿ ಅಭಿಯೋಜಕಿ ರೇಖಾ ಕೋಟೆಗೌಡರ್‌ 3 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು ಎಂದು ದೂರಲಾಗಿತ್ತು.

ಇದನ್ನೂ ಓದಿ: Kodagu: ಲಾರಿ ಚಾಲಕನಿಂದ ಲಂಚ ಸ್ವೀಕಾರ ಲೋಕಾಯುಕ್ತ ಬಲೆಗೆ ಬಿದ್ದ ಪೊಲೀಸಪ್ಪ

ಪ್ರಕರಣ ದಾಖಲಿಸಿದ ಲೋಕಾಯುಕ್ತ ಪೊಲೀಸರು ಭಾನುವಾರ ಬೆಳಗ್ಗೆ ವಿಶೇಷ ಸರ್ಕಾರಿ ಅಭಿಯೋಜಕಿ ರೇಖಾ ಖಾಲಿ ಚೆಕ್‌ ಹಾಗೂ 1.87 ಲಕ್ಷ ರೂ. ನಗದು ಸಮೇತ ಬಂಧಿಸಿದ್ದಾರೆ. ಲೋಕಾಯುಕ್ತ ಪೊಲೀಸ್‌ ಅಧೀಕ್ಷಕ ಎಂ.ಎಸ್‌.ಕೌಲಾಪುರೆ ಮಾರ್ಗದರ್ಶನದಲ್ಲಿ ಪೊಲೀಸ್‌ ಇನ್ಸಪೆಕ್ಟರ್‌ಗಳಾದ ಎನ್‌.ಎಚ್‌.ಆಂಜನೇಯ, ಎಚ್‌.ಎಸ್‌.ರಾಷ್ಟ್ರಪತಿ ನೇತೃತ್ವದಲ್ಲಿ ಸಿಬ್ಬಂದಿಯಾದ ಸಿಎಚ್‌ಸಿ ಎಸ್‌.ಎಂ.ವೀರೇಶಯ್ಯ, ಎನ್‌.ಆರ್‌.ಚಂದ್ರಶೇಖರ, ವಿ.ಎಚ್‌.ಆಂಜನೇಯ, ಸಿಪಿಸಿ ಮುಜೀಬ್‌ ಖಾನ್‌, ಡಿ.ಬಸವರಾಜ, ಎಪಿಸಿ ಸಿ.ಎಸ್‌. ಬಸವರಾಜ, ಪಿ.ಮೋಹನಕುಮಾರ, ಕೋಟಿನಾಯ್ಕ, ಮಹಿಳಾ ಸಿಬ್ಬಂದಿಯಾದ ಆಶಾ, ಜಂಷಿದಾಖಾನಂರನ್ನು ಒಳಗೊಂಡ ತಂಡವು ಯಶಸ್ವಿ ಟ್ರ್ಯಾಪ್‌ ಕಾರ್ಯಾಚರಣೆ ನಡೆಸಿ, ಹಣ, ಚೆಕ್‌ ಸಮೇತ ಆರೋಪಿ ಎಸ್‌ಪಿಪಿ ರೇಖಾ ಕೋಟೆಗೌಡರ್‌ಗೆ ಬಂಧಿಸಿ, ಮುಂದಿನ ಕ್ರಮ ಕೈಗೊಂಡಿದೆ.

Chikkamagaluru: ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಸರ್ವೇಯರ್

click me!