ಈಗ ಕೊಡಗು ಜಿಲ್ಲೆಯೂ ಅನ್‌ಲಾಕ್‌: ಹೋಮ್‌ಸ್ಟೇ, ರೆಸಾರ್ಟ್‌ ಓಪನ್‌

By Kannadaprabha NewsFirst Published Jul 9, 2021, 8:14 AM IST
Highlights

* ವಾಣಿಜ್ಯ ಚಟುವಟಿಕೆಗೆ 100% ಅವಕಾಶ
* ತಕ್ಷಣದಿಂದ ಜಾರಿಗೆ ಬರುವಂತೆ ಅನ್‌ಲಾಕ್‌ 
* ಕುಸಿದ ಕೊರೋನಾ ಸೋಂಕು ಪಾಸಿಟಿವಿಟಿ ದರ 

ಬೆಂಗಳೂರು(ಜು.09): ಕೊಡಗು ಜಿಲ್ಲೆಯಲ್ಲಿ ಕೊರೋನಾ ಸೋಂಕು ಪಾಸಿಟಿವಿಟಿ ದರ ಕಡಿಮೆಯಾದ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯಲ್ಲೂ ಅನ್‌ಲಾಕ್‌ 3.0 ನಿಯಮಗಳನ್ನು ಜಾರಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಜು.3ರಂದು ಸಭೆ ನಡೆಸಿದ್ದ ರಾಜ್ಯ ಸರ್ಕಾರ ಕೊಡಗು ಜಿಲ್ಲೆ ಹೊರತುಪಡಿಸಿ ರಾಜ್ಯಾದ್ಯಂತ 3.0 ಅನ್‌ಲಾಕ್‌ ನಿಯಮಗಳನ್ನು ಜಾರಿಗೊಳಿಸಿತ್ತು. ಇದರಂತೆ ಎಲ್ಲಾ ಸರ್ಕಾರಿ, ಖಾಸಗಿ ಕಚೇರಿ, ಕಾರ್ಖಾನೆಗಳು, ವಾಣಿಜ್ಯ ಚಟುವಟಿಕೆಗೆ ಶೇ.100ರಷ್ಟು ಮುಕ್ತ ಅವಕಾಶ ನೀಡಲಾಗಿತ್ತು. ಅಲ್ಲದೆ, ಬೆಳಗ್ಗೆ 5 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ಎಲ್ಲಾ ರೀತಿಯ ವಹಿವಾಟಿಗೂ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಕೊಡಗು ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಶೇ. 6.5 ರಷ್ಟು ಇದೆ ಎಂಬ ಕಾರಣ ನೀಡಿ ಅನ್‌ಲಾಕ್‌ 2. 0 ನಿಯಮಗಳನ್ನೇ ಮುಂದುವರೆಸಲಾಗಿತ್ತು.     

ಅನ್‌ಲಾಕ್ ಬೆನ್ನಲ್ಲೇ ಕೇಂದ್ರ ಆರೋಗ್ಯ ಇಲಾಖೆ ಸುದ್ಧಿಗೋಷ್ಠಿ; ಮತ್ತೆ ಲಾಕ್‌ಡೌನ್ ಎಚ್ಚರಿಕೆ!

ಇದೀಗ ತಕ್ಷಣದಿಂದ ಜಾರಿಗೆ ಬರುವಂತೆ ಅನ್‌ಲಾಕ್‌ ಮಾಡಲಾಗಿದೆ. ಹೋಮ್‌ಸ್ಟೇ, ರೆಸಾರ್ಟ್‌ ಎಲ್ಲವೂ ಮುಕ್ತವಾಗಿವೆ ಎಂದು ಕಂದಾಯ ಸಚಿವ ಆರ್‌. ಅಶೋಕ್‌ ತಿಳಿಸಿದ್ದಾರೆ. 
 

click me!