ಗೌಡರ ಕುಟುಂಬದ ಒಗ್ಗಟ್ಟು ಒಡೆಯುವ ಯತ್ನ ನಡೆಯುತ್ತಿದೆ : ರೇವಣ್ಣ

Kannadaprabha News   | Asianet News
Published : Jul 09, 2021, 08:06 AM IST
ಗೌಡರ ಕುಟುಂಬದ ಒಗ್ಗಟ್ಟು ಒಡೆಯುವ ಯತ್ನ ನಡೆಯುತ್ತಿದೆ : ರೇವಣ್ಣ

ಸಾರಾಂಶ

ಮಂಡ್ಯದ ಸಂಸದೆ ಸುಮಲತಾ ಅವರು ಕೆಆರ್‌ಎಸ್‌ ಬಿರುಕಿನ ಹೇಳಿಕೆಗೂ ದೇವೇಗೌಡರ ಕುಟುಂಬಕ್ಕೂ ಸಂಬಂಧ ಕಲ್ಪಿಸುತ್ತಿದ್ದಾರೆ ಈ ಮೂಲಕ ದೇವೇಗೌಡರ ಕುಟುಂಬದ ಒಗ್ಗಟ್ಟನ್ನು ಒಡೆಯುವ ಪ್ರಯತ್ನ ಮಾಡುತ್ತಿದ್ದಾರೆ - ರೇವಣ್ಣ ಅಸಮಾಧಾನ

ಹಾಸ​ನ (ಜು.09):  ಮಂಡ್ಯದ ಸಂಸದೆ ಸುಮಲತಾ ಅವರು ಕೆಆರ್‌ಎಸ್‌ ಬಿರುಕಿನ ಹೇಳಿಕೆಗೂ ದೇವೇಗೌಡರ ಕುಟುಂಬಕ್ಕೂ ಸಂಬಂಧ ಕಲ್ಪಿಸುತ್ತಿದ್ದಾರೆ. ಈ ಮೂಲಕ ದೇವೇಗೌಡರ ಕುಟುಂಬದ ಒಗ್ಗಟ್ಟನ್ನು ಒಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಇದು ಯಾವತ್ತಿಗೂ ಸಾಧ್ಯವಿಲ್ಲ ಎಂದು ಮಾಜಿ ಸಚಿವ, ಜೆಡಿಎಸ್‌ ಮುಖಂಡ ಎಚ್‌.ಡಿ.ರೇವಣ್ಣ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಕುಟುಂಬ ಒಡೆಯಲು ಪ್ರಜ್ವಲ್‌ ರೇವಣ್ಣನ ಹೆಸರು ಬಳಸಿದ್ದಾರೆ. ದೇವೇಗೌಡರ ಕುಟುಂಬ ಒಡೆಯಲು ರಾಜ್ಯದಲ್ಲಿ ಯಾರಿಂದಲೂ ಸಾಧ್ಯವಿಲ್ಲ. ಸುಮಲತಾ ಅವರು ಪ್ರಜ್ವಲ್‌ ಹೆಸರು ಹೇಳಿ ಕುಮಾರಸ್ವಾಮಿಗೂ ನಮಗೂ ತಂದಿಡುವ ಕೆಲಸಕ್ಕೆ ಮುಂದಾಗಿದ್ದಾರೆ.

ಜೆಡಿಎಸ್​ ಸದಸ್ಯರಿಗೆ ಬಿಜೆಪಿ ಹಣದ ಆಮೀಷ: ಹಣದ ಬಂಡಲ್ ಜತೆ ರೇವಣ್ಣ ಸುದ್ದಿಗೋಷ್ಠಿ ...

ಸರ್ಕಾರದ ಕೆಲ ಸಚಿವರೇ ಕೆಆರ್‌ಎಸ್‌ಗೆ ಯಾವುದೇ ತೊಂದರೆಯಿಲ್ಲ ಎಂದಿದ್ದಾರೆ. ಅದನ್ನೂ ಮೀರಿ ಅಕ್ರಮ ನಡೆದಿದ್ದರೆ ಕ್ರಮಕೈಗೊಳ್ಳಲಿ. ಅದನ್ನು ಬಿಟ್ಟು ದೇವೇಗೌಡರ ಕುಟುಂಬದ ಹೆಸರನ್ನು ಮಧ್ಯೆ ತರುವ ಅವಶ್ಯಕತೆ ಇಲ್ಲ ಎಂದು ಪ್ರತಿಕ್ರಿಯಿಸಿದರು.

ಪ್ರಜ್ವಲ್‌ ರೇವಣ್ಣ ನೋಡಿ ಎಚ್‌ಡಿಕೆ ಸಂಸ್ಕಾರ ಕಲಿಯಲಿ: ಸುಮಲತಾ! .

ಲೋಕಸಭಾ ಚುನಾವಣೆಯಲ್ಲಿ ಮಂಡ್ಯ, ತುಮಕೂರು ಜಿಲ್ಲೆಯಲ್ಲಿ ಕಾಂಗ್ರೆಸ್‌-ಬಿಜೆಪಿ ಒಂದಾಗಿ ದೇವೇಗೌಡರ ಕುಟುಂಬ ತೆಗೆಯಲು ಮುಂದಾದರು. ಕಾಂಗ್ರೆಸ್‌ ಮುಖಂಡರು ಮುಖ್ಯಮಂತ್ರಿ ಮನೆಗೆ ರಾತ್ರೋ ರಾತ್ರಿ ಭೇಟಿ ನೀಡಿ ತಮ್ಮ ವಿರುದ್ಧದ ಹಗರಣಗಳ ತನಿಖೆಗೆ ತಡೆ ತಂದಿದ್ದಾರೆ. ಇದೆಲ್ಲಾ ನಮಗೂ ಗೊತ್ತಾಗುತ್ತದೆ. ನಮಗೂ ಕಾಲ ಬಂದಾಗ ತೋರಿಸುತ್ತೇವೆ ಎಂದು ಟಾಂಗ್‌ ನೀಡಿದರು.

PREV
click me!

Recommended Stories

ನೆಲಮಂಗಲದಲ್ಲಿ ಹಸುವಿನ ಕತ್ತು ಕೊಯ್ದು ವಿಕೃತಿ ಮೆರೆದ ಕಳ್ಳರು; ಬೆಚ್ಚಿಬಿದ್ದ ಗ್ರಾಮಸ್ಥರು
ಬಿಡಿಎ ಸೈಟ್ ತಗೊಂಡ್ರೆ ಚಿಪ್ಪೇ ಗತಿ; ಕೆಂಪೇಗೌಡ ಲೇಔಟ್ ಸೈಟ್ ತಗೊಂಡು 15 ವರ್ಷವಾದ್ರೂ ಸೈಟೂ ಇಲ್ಲ, ಸಾಲನೂ ಸಿಗ್ತಿಲ್ಲ!