ಉತ್ತರ ಕನ್ನಡ: ಕಾರಿನೊಳಗೆ ನುಗ್ಗಿದ ಕಾಳಿಂಗ ಸರ್ಪ, ಒಳಗಿದ್ದವರು ಕಕ್ಕಾಬಿಕ್ಕಿ..!

By Girish Goudar  |  First Published Dec 21, 2022, 9:20 PM IST

ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಮಲ್ಲಾಪುರ ಗ್ರಾಮದ ಬಳಿ ನಡೆದ ಘಟನೆ 


ಉತ್ತರ ಕನ್ನಡ(ಡಿ.21):  ಕಾಳಿಂಗ ಸರ್ಪವೊಂದು ಕಾರಿನೊಳಗೆ ನುಗ್ಗಿ ಆತಂಕ ಸೃಷ್ಠಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಮಲ್ಲಾಪುರ ಗ್ರಾಮದ ಬಳಿ ಇಂದು(ಬುಧವಾರ) ನಡೆದಿದೆ. 

ಜೈ ಸಿಂಗ್ ಎಂಬುವರಿಗೆ ಸೇರಿದ ಕಾರಿನ ಬಾನೆಟ್ ಒಳಗೆ ಕಾಳಿಂಗ ಸರ್ಪದ ನುಗ್ಗಿತ್ತು. ಸುಮಾರು 10 ಅಡಿ ಉದ್ದದ ಕಾಳಿಂಗ ಸರ್ಪ ಕಂಡು ಕಾರಿನಲ್ಲಿದ್ದವರು ಆತಂಕಗೊಂಡಿದ್ದರು. ಕಾರಿನ‌ ಮಾಲೀಕರು ಕೂಡಲೇ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು. 

Tap to resize

Latest Videos

ಉಡ ನುಂಗಲು ಪ್ರಯತ್ನಿಸಿ ಪರದಾಡಿದ ಕಾಳಿಂಗ ಸರ್ಪ

ಸ್ಥಳಕ್ಕೆ ಬಂದ ಅರಣ್ಯ ಅಧಿಕಾರಿಗಳು ಕಾಳಿಂಗ ಸರ್ಪವನ್ನ ಸುರಕ್ಷಿತವಾಗಿ ರಕ್ಷಣೆ ಮಾಡಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ರಜತ್, ಮಧುಕುಮಾರ್, ಪರಶುರಾಮ್, ರಾಘವೇಂದ್ರರಿಂದ ಕಾಳಿಂಗ ರಕ್ಷಣೆ ಮಾಡಲಾಗಿದೆ. ಕಾಳಿಂಗ ಸರ್ಪವನ್ನು ರಕ್ಷಣೆ ಮಾಡಿ ಅರಣ್ಯ ಇಲಾಖೆ ಸಿಬ್ಬಂದಿ ಕಾಡಿಗೆ ಬಿಟ್ಟಿದ್ದಾರೆ. 

click me!