ನನಗೆ ಟಿಕೆಟ್ ತ್ಯಾಗ ಮಾಡಿ ಜನ ಸೇವೆಯಲ್ಲಿ ತೊಡಗಿದವರು ಕೇಶವಮೂರ್ತಿ : ದರ್ಶನ್

By Kannadaprabha News  |  First Published Nov 6, 2023, 12:54 PM IST

ಮಾಜಿ ಶಾಸಕ ಕಳಲೆ ಕೇಶವಮೂರ್ತಿರವರು ಯಾವುದೇ ಅಧಿಕಾರಕ್ಕೆ ಆಸೆ ಪಡದೆ ವೈಯಕ್ತಿಕ ಬದುಕನ್ನೂ ಬದಿಗೊತ್ತಿ ಸದಾ ಜನ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ತಿಳಿಸಿದರು.


 ನಂಜನಗೂಡು :  ಮಾಜಿ ಶಾಸಕ ಕಳಲೆ ಕೇಶವಮೂರ್ತಿರವರು ಯಾವುದೇ ಅಧಿಕಾರಕ್ಕೆ ಆಸೆ ಪಡದೆ ವೈಯಕ್ತಿಕ ಬದುಕನ್ನೂ ಬದಿಗೊತ್ತಿ ಸದಾ ಜನ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ತಿಳಿಸಿದರು.

ಪಟ್ಟಣದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಮಾಜಿ ಕಳಲೆ ಕೇಶವಮೂರ್ತಿ ಅವರನ್ನು ಹುಟ್ಟುಹಬ್ಬದ ಅಂಗವಾಗಿ ಸನ್ಮಾನಿಸಿ ಮಾತನಾಡಿದ ಅವರು, ಅಧಿಕಾರ ಸಿಗಲಿ ಬಿಡಲಿ ಸದಾ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಅವರ ಸಂಕಷ್ಟ ಪರಿಹಾರಕ್ಕೆ ಮುಂದಾಗಿದ್ದಾರೆ ಎಂದರು.

Latest Videos

undefined

ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಸುಭದ್ರವಾಗಿರಲು ಕಳಲೆ ಕೇಶವಮೂರ್ತಿ ಅವರ ಸಂಘಟನೆಯ ಫಲ. ಅವರು ಉಪ ಚುನಾವಣೆಯಲ್ಲಿ ಗೆದ್ದ ದಿನದಿಂದಲೂ ಪಕ್ಷದ ಸಂಘಟನೆಗೆ ಒತ್ತು ನೀಡಿದ್ದಾರೆ. ಪಕ್ಷದ ಕಾರ್ಯಕ್ರಮಗಳನ್ನು ಚಾಚೂ ತಪ್ಪದೆ ಅನುಷ್ಠಾನಗೊಳಿಸುವ ಮೂಲಕ ಸಂಘಟನೆ ಪೂರಕವಾಗಿ, ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ನನ್ನ ತಂದೆ ಆರ್. ಧ್ರುವನಾರಾಯಣ್ ಅವರಿಗೆ ಸಹಕಾರ ನೀಡಿ ಇಬ್ಬರು ಜೋಡೆತ್ತು ಪಕ್ಷಕ್ಕೆ ಜೀವ ತುಂಬಿಸುವ ಕೆಲಸ ಮಾಡಿದ್ದಾರೆ ಎಂದು ಅವರು ಸ್ಮರಿಸಿದರು.

ಈ ಚುನಾವಣೆಯಲ್ಲೂ ತಾವು ಆಕಾಂಕ್ಷಿಯಾಗಿದ್ದರೂ ನನ್ನ ತಂದೆಯ ಮರಣ ನಂತರ ನನಗೆ ಟಿಕೆಟ್ ತ್ಯಾಗ ಮಾಡಿದ್ದಾರೆ. ಅಲ್ಲದೆ ನನಗೆ ಚುನಾವಣೆಯ ಬಗ್ಗೆ ಅರಿವಿರಲಿಲ್ಲ. ಆದರೂ ನನಗೆ ಆತ್ಮಸ್ಥೈರ್ಯ ತುಂಬಿ ಚುನಾವಣೆಯಲ್ಲಿ ಗೆಲುವು ತಂದುಕೊಟ್ಟಿದ್ದು ಮಾತ್ರವಲ್ಲದೆ ಒಬ್ಬ ಶಾಸಕನಾಗಿ ಹೇಗೆ ಕೆಲಸ ಮಾಡಬೇಕೆಂಬ ಮಾರ್ಗದರ್ಶನ ಮಾಡುತ್ತಾ ಜನ ಸೇವೆಯಲ್ಲಿ ತೊಡಗಿದ್ದಾರೆ ಎಂದರು.

ವಾಲ್ಮೀಕಿ ನಿಗಮದ ಮಾಜಿ ಅಧ್ಯಕ್ಷ ಎಸ್.ಸಿ. ಬಸವರಾಜು ಮಾತನಾಡಿ, ಕಳಲೆ ಕೇಶವಮೂರ್ತಿ ಮತ್ತು ನಾನು ಜೊತೆಯಲ್ಲೇ ರಾಜಕೀಯ ಮಾಡಿಕೊಂಡು ಬಂದವರು. ಅವರ ಪರಿಶ್ರಮದ ಫಲವಾಗಿ ಉಪಚುನಾವಣೆಯಲ್ಲಿ ಐತಿಹಾಸಿಕ ಗೆಲುವು ಸಾಧಿಸಿ ಶಾಸಕರಾಗಿ ಆಯ್ಕೆಯಾದವರು ಎಂದು ಹೇಳಿದರು.

ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಮಾತನಾಡಿ, ನಿಮ್ಮೆಲ್ಲರ ಪ್ರೀತಿ ವಿಶ್ವಾಸಕ್ಕೆ ನಾನು ಸದಾ ಚಿರಋಣಿ. ನಿಮ್ಮೆಲ್ಲರ ಸೇವೆ ಮಾಡುವ ಮೂಲಕ ನಿಮ್ಮ ಪ್ರೀತಿ ವಿಶ್ವಾಸವನ್ನು ಉಳಿಸಿಕೊಳ್ಳುವ ಕೆಲಸ ಮಾಡುತ್ತೇನೆ ಎಂದರು.

ಇದೇ ವೇಳೆ 100 ಮೀಟರ್ ಓಟದಲ್ಲಿ ರಾಜ್ಯಕ್ಕೆ 2ನೇ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ತಾಲೂಕಿನ ಹೊಸಪುರ ಗ್ರಾಮದ ಜೀವಿತಾ ಅವರನ್ನು ಸನ್ಮಾನಿಸಲಾಯಿತು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕುರಹಟ್ಟಿ ಮಹೇಶ್, ಸಿ.ಎಂ. ಶಂಕರ್, ಶ್ರೀಕಂಠನಾಯಕ, ಜಿಪಂ ಮಾಜಿ ಅಧ್ಯಕ್ಷೆ ಲತಾ ಸಿದ್ದಶೆಟ್ಟಿ, ಮುಖಂಡರಾದ ಕೆ. ಮಾರುತಿ, ಕರಳಪುರ ನಾಗರಾಜು, ಕನಕನಗರ ಮಹದೇವು, ಚೆಲುವರಾಜು, ಎಂ. ಮಾದಪ್ಪ, ಸಿದ್ದಶೆಟ್ಟಿ, ದೊರೆಸ್ವಾಮಿ ನಾಯಕ, ವಿಜಯ್ ಕುಮಾರ್, ಶ್ರೀನಿವಾಸ್ ಮೂರ್ತಿ, ನಂಜುಂಡಸ್ವಾಮಿ, ಕಳಲೆ ರಾಜೇಶ್, ಉಪ್ಪಿನಹಳ್ಳಿ ಶಿವಣ್ಣ, ಜಗದೀಶ್, ರಂಗದಾಸ್, ಎಸ್.ಪಿ. ಮಹೇಶ್, ಮಂಜುನಾಥ್ ಮೊದಲಾದವರು ಇದ್ದರು.

click me!