8ರವರೆಗೆ ಸಾಧಾರಣದಿಂದ ಭಾರಿ ಮಳೆಯಾಗುವ ಸಂಭವ

By Kannadaprabha News  |  First Published Nov 6, 2023, 12:38 PM IST

ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಜಿಲ್ಲೆಯಾದ್ಯಂತ 8ರವರೆಗೆ ಸಾಧಾರಣದಿಂದ ಭಾರಿ ಮಳೆಯಾಗುವ ಸಂಭವವಿದೆ ಎಂದು ಕೊನೇಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿರುವ ಜಿಲ್ಲಾ ಕೃಷಿ ಹವಾಮಾನ ಘಟಕದ ನೋಡಲ್ ಅಧಿಕಾರಿ ಹಾಗೂ ಮುಖ್ಯಸ್ಥರಾದ ಡಾ. ವಿ.ಗೋವಿಂದಗೌಡ ತಿಳಿಸಿದ್ದಾರೆ.


 ತಿಪಟೂರು:  ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಜಿಲ್ಲೆಯಾದ್ಯಂತ 8ರವರೆಗೆ ಸಾಧಾರಣದಿಂದ ಭಾರಿ ಮಳೆಯಾಗುವ ಸಂಭವವಿದೆ ಎಂದು ಕೊನೇಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿರುವ ಜಿಲ್ಲಾ ಕೃಷಿ ಹವಾಮಾನ ಘಟಕದ ನೋಡಲ್ ಅಧಿಕಾರಿ ಹಾಗೂ ಮುಖ್ಯಸ್ಥರಾದ ಡಾ. ವಿ.ಗೋವಿಂದಗೌಡ ತಿಳಿಸಿದ್ದಾರೆ.

ಗಾಳಿಯು ಗಂಟೆಗೆ ಸರಾಸರಿ ವೇಗದಲ್ಲಿ ಬೀಸುವ ಸಂಭವವಿದ್ದು. ಮುಂದಿನ 5 ದಿನಗಳಲ್ಲಿ ಸಾಧಾರಣದಿಂದ ಭಾರಿ ಮಳೆಯಾಗುವ ಸಂಭವವಿದೆ. ಉತ್ತಮ ಮಳೆಯಾಗುವ ಅವಕಾಶವಿದ್ದು, ಮಣ್ಣಿನ ತೇವಾಂಶದ ಆಧಾರದ ಮೇಲೆ ಮತ್ತು ತೋಟಗಾರಿಕೆ ಬೆಳೆಗಳ ಬಿತ್ತನೆ, ಸಸ್ಯ ಸಂರಕ್ಷಣೆ ಸಿಂಪರಣೆ, ರಾಸಾಯನಿಕ ಗೊಬ್ಬರಗಳ ಬಳಕೆ ಮಾಡಬಹುದಾಗಿದೆ. ಅಡಿಕೆಯಲ್ಲಿ ಸಮಗ್ರ ಪೋಷಕಾಂಶಗಳ ನಿರ್ವಹಣೆಗಾಗಿ 3 ವರ್ಷ ಮೇಲ್ಪಟ್ಟ ಪ್ರತಿ ಗಿಡಕ್ಕೆ 20 ಕೆ.ಜಿ. ಕೊಟ್ಟಿಗೆಗೊಬ್ಬರ/ಕಾಂಪೋಸ್ಟ್ 20 ಕೆ.ಜಿ., ಹಸಿರೆಲೆ ಗೊಬ್ಬರ 3 ಕೆ.ಜಿ. ಬೇವಿನ ಹಿಂಡಿ, ಅಜಟೋಬ್ಯಾಕ್ಟರ್ - 50ಗ್ರಾಂ, ರಂಜಕ ಕರಗಿಸುವ ಗೊಬ್ಬರ (ಪಿ.ಎಸ್.ಬಿ.) - 50 ಗ್ರಾಂ, 218 ಗ್ರಾಂ.ಯೂರಿಯ, 250 ಗ್ರಾಂ.ಸೂಪರ್ ಫಾಸ್ಫೇಟ್, 234 ಗ್ರಾಂ. ಪೋಟ್ಯಾಷ್, 50 ಗ್ರಾಂ ಮೆಗ್ನಿಶೀಯಂ ಸಲ್ಪೇಟ್, 30 ಗ್ರಾಂ ಬೋರಾಕ್ಸ್ ನೀಡಬೇಕೆಂದು ಡಾ. ವಿ.ಗೋವಿಂದಗೌಡ ಮಾಹಿತಿ ನೀಡಿದ್ದಾರೆ.

Latest Videos

undefined

 ಆಹಾರ ಉತ್ಪಾದನೆ ಕುಸಿತ

ಸಿದ್ದು ಚಿಕ್ಕಬಳ್ಳೇಕೆರೆ

ಬೆಂಗಳೂರು (ನ.06): ರಾಜ್ಯದಲ್ಲಿ ಸಕಾಲಕ್ಕೆ ಮಳೆ ಆಗದಿರುವುದರಿಂದ ವ್ಯಾಪಕ ಬೆಳೆ ಹಾನಿ ಆಗಿದ್ದು, ಜೊತೆಗೆ ಇಳುವರಿಯೂ ಕಡಿಮೆ ಆಗುವುದರಿಂದ ಈ ವರ್ಷ ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಅರ್ಧಕ್ಕೂ ಅಧಿಕ ಕುಂಠಿತವಾಗಲಿದೆ. ಇದರಿಂದ ಮುಂದಿನ ದಿನಗಳಲ್ಲಿ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿಯೂ ತಟ್ಟುವುದು ಬಹುತೇಕ ಖಚಿತವಾಗಿದೆ. ಪ್ರಸಕ್ತ 2023ರ ಮುಂಗಾರು ಹಂಗಾಮಿನಲ್ಲಿ ಕೃಷಿ ಇಲಾಖೆಯು 82.35 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ ಹೊಂದಿತ್ತಾದರೂ 74.32 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿತ್ತು. ಸಕಾಲಕ್ಕೆ ಮಳೆ ಆಗದೆ ಬರ ಉಂಟಾಗಿದ್ದು, ಆಹಾರ ಧಾನ್ಯಗಳ ಇಳುವರಿ ಭಾರೀ ಕುಂಠಿತವಾಗಲಿದೆ.

ಮುಂಗಾರಿನಲ್ಲಿ 96.56 ಲಕ್ಷ ಟನ್‌ ಏಕದಳ ಧಾನ್ಯ, 15.36 ಲಕ್ಷ ಟನ್‌ ದ್ವಿದಳ ಧಾನ್ಯ, 9.89 ಲಕ್ಷ ಟನ್‌ ಎಣ್ಣೆಕಾಳುಗಳ ಉತ್ಪಾದನೆ ಆಗಬಹುದು ಎಂದು ಕೃಷಿ ಇಲಾಖೆ ಅಂದಾಜಿಸಿತ್ತಾದರೂ ಕೇವಲ 58 ಲಕ್ಷ ಟನ್‌ ಉತ್ಪಾದನೆ ಆಗುವ ಸಾಧ್ಯತೆ ಇದೆ. ಸಮಯಕ್ಕೆ ಸರಿಯಾಗಿ ಮಳೆ ಬಾರದೆ ಬಿತ್ತನೆ ಕುಂಠಿತವಾಗಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಬೆಳೆದ ಬೆಳೆಗಳು ಹಸಿರುಮಯವಾಗಿ ಕಾಣಿಸುತ್ತವೆಯಾದರೂ ಕಾಳು ಕಟ್ಟದೆ ಇಳುವರಿ ಭಾರೀ ಕಡಿಮೆಯಾಗಲಿದೆ.

ತಾನೆಷ್ಟು ದಿನ ಸಿಎಂ ಅಂತ ಸಿದ್ದರಾಮಯ್ಯಗೆ ಗೊತ್ತಿಲ್ಲ: ಪ್ರಧಾನಿ ಮೋದಿ

ಯಾವ್ಯಾವ ಬೆಳೆ ಎಷ್ಟೆಷ್ಟು ಹಾನಿ?: ಮುಂಗಾರಿನಲ್ಲಿ ಒಟ್ಟಾರೆ 43.50 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತಿದ್ದ ಬೆಳೆ ಹಾನಿ ಉಂಟಾಗಿದೆ ಎಂದು ಕೃಷಿ ಇಲಾಖೆ ಸ್ಪಷ್ಟಪಡಿಸಿದ್ದು, ಪ್ರಮುಖವಾಗಿ 13.43 ಲಕ್ಷ ಹೆಕ್ಟೇರ್‌ ಪ್ರದೇಶದ ಮೆಕ್ಕೆಜೋಳ, 7 ಲಕ್ಷ ಹೆಕ್ಟೇರ್‌ ತೊಗರಿ, ತಲಾ 4 ಲಕ್ಷ ಹೆಕ್ಟೇರ್‌ನ ಹತ್ತಿ, ರಾಗಿ, 3 ಲಕ್ಷ ಹೆಕ್ಟೇರ್‌ ಶೇಂಗಾ, 2.15 ಲಕ್ಷ ಹೆಕ್ಟೇರ್‌ ಪ್ರದೇಶದ ಕಬ್ಬು, 2.39 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದಿದ್ದ ಸೋಯಾಬೀನ್‌ ಬೆಳೆಗೆ ಹಾನಿಯಾಗಿದೆ.

ಜಿಲ್ಲಾವಾರು ಕೃಷಿ ಸ್ಥಿತಿಗತಿ: ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಭಾರೀ ಪ್ರಮಾಣದಲ್ಲಿ ಇಳುವರಿ ಕಡಿಮೆ ಆಗಿದೆ. ಅದರಲ್ಲೂ ಕೆಲವು ಜಿಲ್ಲೆಗಳಲ್ಲಂತೂ ರಾಗಿ, ಮೆಕ್ಕೆಜೋಳ, ಶೇಂಗಾ ಮತ್ತಿತರ ಬೆಳೆಗಳಲ್ಲಿ ಶೇ.90 ರವರೆಗೂ ಇಳುವರಿಗೆ ಹೊಡೆತ ಬಿದ್ದಿದೆ. ಆದರೆ ಈಗ ಅಲ್ಲಲ್ಲಿ ಸ್ವಲ್ಪ ಮಳೆ ಬೀಳುತ್ತಿರುವುದರಿಂದ ಇಳುವರಿ ಒಂದಷ್ಟು ಸುಧಾರಿಸುವ ಆಶಾಭಾವನೆಯಿದೆ.

ರಾಗಿ ಬೆಳೆ ರಾಮನಗರದಲ್ಲಿ ಶೇ.50ರಿಂದ 60ರಷ್ಟು ಇಳುವರಿ ಕುಂಠಿತವಾಗಿದೆ. ಕೋಲಾರದಲ್ಲಿ ಶೇ.70ರಿಂದ 80, ಚಿಕ್ಕಬಳ್ಳಾಪುರದಲ್ಲಿ ಶೇ.75 ರಿಂದ ಶೇ.90, ತುಮಕೂರು- ಶೇ.75 ರಿಂದ ಶೇ.95, ಚಿತ್ರದುರ್ಗ- ಶೇ.80 ರಿಂದ ಶೇ.85, ಚಾಮರಾಜನಗರ, ಹಾಸನ - ಶೇ.80 ರಿಂದ ಶೇ.90, ಮೈಸೂರು- ಶೇ.80 ರಿಂದ ಶೇ.85, ಮಂಡ್ಯ- 70 ರಿಂದ 90, ವಿಜಯಪುರದಲ್ಲಿ ಶೇ.60 ರಿಂದ ಶೇ.74 ರಷ್ಟು ಹೊಡೆತ ಬಿದ್ದಿದೆ.

click me!