ಟೂರಿಸ್ಟ್ ಬಸ್ಸಿನ ಮೇಲೆ ಓಪನ್ನಾಗಿ ದಾವೂದ್ ವೈಭವೀಕರಣ, ಕೇರಳ ಪೊಲೀಸರು ಸೈಲೆಂಟ್, ಕರ್ನಾಟಕ ಪೊಲೀಸರಿಂದ ಕ್ರಮ, ಚಿಕ್ಕಮಗಳೂರಲ್ಲಿ ಬಸ್ ವಶಕ್ಕೆ

Kannadaprabha News   | Kannada Prabha
Published : Nov 07, 2026, 06:18 AM IST
Kerala tourist bus controversy

ಸಾರಾಂಶ

ಚಿಕ್ಕಮಗಳೂರಿನಲ್ಲಿ ದಾವೂದ್ ಇಬ್ರಾಹಿಂನನ್ನು ವೈಭವೀಕರಿಸುವ ಬರಹವಿದ್ದ ಕೇರಳ ಮೂಲದ ಪ್ರವಾಸಿ ಬಸ್ಸನ್ನು ಹಿಂದೂಪರ ಸಂಘಟನೆಗಳು ತಡೆದು ನಿಲ್ಲಿಸಿವೆ. ಪೊಲೀಸರು ಬಸ್ಸನ್ನು ವಶಕ್ಕೆ ಪಡೆದಿದ್ದು, ಭದ್ರತಾ ವೈಫಲ್ಯದ ಬಗ್ಗೆ ಬಿಜೆಪಿ ಯುವ ಮೋರ್ಚಾ ಆಕ್ರೋಶ ವ್ಯಕ್ತಪಡಿಸಿದೆ.

ಚಿಕ್ಕಮಗಳೂರು (ನ.7)- ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು ವೈಭವೀಕರಿಸುವ ರೀತಿಯ ಬರಹ ಹೊಂದಿದ್ದ ಕೇರಳ ಮೂಲದ ಪ್ರವಾಸಿ ಬಸ್ ವಿವಾದಕ್ಕೆ ಕಾರಣವಾಗಿದೆ. ಚಿಕ್ಕಮಗಳೂರಿನಲ್ಲಿ ಬಸ್ಸಿನ ಮೇಲೆ ‘Dawood Rise of Day’ ಹಾಗೂ ‘Emperor Strikes Again’ ಎಂಬ ಬರಹಗಳನ್ನು ಬರೆಯಲಾಗಿದ್ದು, ಇದು ದಾವೂದ್ ಇಬ್ರಾಹಿಂನನ್ನು ವೈಭವೀಕರಿಸುವ ಪ್ರಯತ್ನ ಎಂದು ಆಕ್ರೋಶ ವ್ಯಕ್ತಪಡಿಸಿದ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಬಸ್ಸನ್ನು ಅಡ್ಡಗಟ್ಟಿದ್ದಾರೆ. ಚಿಕ್ಕಮಗಳೂರಿನಲ್ಲಿ ಬಸ್ಸನ್ನು ತಡೆದು ನಿಲ್ಲಿಸಿದ ಕಾರ್ಯಕರ್ತರು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರು ಬಸ್ಸನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ: ಭಾರತದ 'ಚಹಾ ರಾಜಧಾನಿ' ಯಾವುದು ಗೊತ್ತಾ? ಊಟಿ ಅಲ್ಲವೇ ಅಲ್ಲ, ಕರ್ನಾಟಕದಲ್ಲಿ ಬೆಳೆಯುತ್ತೆ ಈ ಸ್ಪೆಷಲ್ ಟೀ!

ತಮಿಳನಾಡಲ್ಲೂ ಈ ಹಿಂದೆ ಬರೆಯಲಾಗಿತ್ತು

ಆರು ತಿಂಗಳ ಹಿಂದೆಯೂ ತಮಿಳುನಾಡು ಮೂಲದ ಬಸ್ಸಿನಲ್ಲಿ ಇದೇ ರೀತಿ ವಿವಾದಾತ್ಮಕ ಬರಹ ಪತ್ತೆಯಾಗಿತ್ತು. ಇದೀಗ ಕೇರಳ ಮೂಲದ ಮತ್ತೊಂದು ಪ್ರವಾಸಿ ಬಸ್ಸಿನಲ್ಲೂ ದಾವೂದ್ ಇಬ್ರಾಹಿಂ ಹೆಸರನ್ನು ವೈಭವೀಕರಿಸುವ ಬರಹ ಕಂಡು ಬಂದಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ: ಹುಬ್ಬಳ್ಳಿ-ಚಿಕ್ಕಮಗಳೂರು ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆ ವಿಸ್ತರಣೆ; ಯಾರಾರಿಗೆ ಅನುಕೂಲ ಒಮ್ಮೆ ಚೆಕ್ ಮಾಡಿ

ಘಟನೆ ಕುರಿತು ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಂತೋಷ್ ಕೋಟ್ಯಾನ್, ಪೊಲೀಸ್ ಇಲಾಖೆ ಭದ್ರತಾ ವೈಫಲ್ಯ ಪ್ರಶ್ನಿಸಿದ್ದಾರೆ. ಹತ್ತಾರು ಚೆಕ್‌ಪೋಸ್ಟ್‌ಗಳನ್ನು ದಾಟಿ ಇಂತಹ ಬರಹ ಹೊಂದಿರುವ ಬಸ್ ಚಿಕ್ಕಮ ಗಳೂರಿಗೆ ಹೇಗೆ ಪ್ರವೇಶಿಸಿತು ಎಂದು ಪ್ರಶ್ನಿಸಿದ್ದಾರೆ.

PREV
Read more Articles on
click me!

Recommended Stories

ಹಾಸನಾಂಬೆ ದರ್ಶನದಲ್ಲಿ ಸಿದ್ದರಾಮಯ್ಯಗೆ ರಾಜಮರ್ಯಾದೆ, ಸಚಿವರ ಕಾರಿಗೆ ತಡೆ! ಜಿಲ್ಲಾಡಳಿತದ ನಡೆಗೆ ಪ್ರಶ್ನೆಗಳ ಸುರಿಮಳೆ
Bhadravathi ಎನ್‌ಡಿಎ ಪರೀಕ್ಷೆಯಲ್ಲಿ ಭದ್ರಾವತಿಯಶ್ರೇಯಾಗೌಡ ದೇಶಕ್ಕೆ ಫಸ್ಟ್‌ ರ್‍ಯಾಂಕ್