Mysuru: ಮಾನಸ ಗಂಗೋತ್ರಿಗೆ ಕಾವೇರಿಯಿಂದ ಕುಡಿಯುವ ನೀರು ಪೂರೈಕೆಗೆ ಕ್ರಮ

By Govindaraj S  |  First Published Apr 3, 2022, 8:55 PM IST

ಮಾನಸ ಗಂಗೋತ್ರಿಗೆ ಇನ್ನೊಂದು ವರ್ಷದಲ್ಲಿ ಕಾವೇರಿ ನದಿಯಿಂದ ಕುಡಿಯುವ ನೀರು ಪೂರೈಸಲು ಕ್ರಮವಹಿಸಲಾಗಿದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ. ಹೇಮಂತಕುಮಾರ್‌ ತಿಳಿಸಿದರು.


ಮೈಸೂರು (ಏ.03): ಮಾನಸ ಗಂಗೋತ್ರಿಗೆ ಇನ್ನೊಂದು ವರ್ಷದಲ್ಲಿ ಕಾವೇರಿ ನದಿಯಿಂದ ಕುಡಿಯುವ ನೀರು ಪೂರೈಸಲು ಕ್ರಮವಹಿಸಲಾಗಿದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ. ಹೇಮಂತಕುಮಾರ್‌ ತಿಳಿಸಿದರು. ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ನಡೆದ ಶಿಕ್ಷಣ ಮಂಡಳಿ ನಾಲ್ಕನೇ ಸಾಮಾನ್ಯ ಸಭೆಯಲ್ಲಿ ಪ್ರೊ. ಮುಜಾಫರ್‌ ಅಸಾದಿ ಮತ್ತು ವಿಜ್ಞಾನ ವಿಭಾಗದ ಡೀನ್‌ ಪ್ರೊ. ಬಸವರಾಜಪ್ಪ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ತುಂಬಾ ವರ್ಷದಿಂದ ಗಂಗೋತ್ರಿ ವಿದ್ಯಾರ್ಥಿಗಳಿಗೆ ಕಾವೇರಿ ನೀರು ಸಿಗಬೇಕೆಂಬ ಬೇಡಿಕೆ ಇದೆ. ಆದರೆ, ಇದಕ್ಕೆ ಈಗ ಕಾಲ ಕೂಡಿ ಬಂದಿದೆ.

3 ಕೋಟಿ ವೆಚ್ಚದಲ್ಲಿ ಯೋಜನೆ ಸಿದ್ಧವಾಗಿದೆ. ಈಗಾಗಲೇ . 1 ಕೋಟಿ ಮೊತ್ತವನ್ನು ಕಾವೇರಿ ನೀರಾವರಿ ನಿಗಮಕ್ಕೆ ನೀಡಲಾಗಿದೆ. ಎರಡು ಮೂರು ಬಾರಿ ಸಭೆ ನಡೆಸಲಾಗಿದೆ. ಕಾವೇರಿ ಹಿನ್ನೀರಿನ ಪ್ರದೇಶದಿಂದ ಗಂಗೋತ್ರಿ ಸಂಪರ್ಕ ಸಾಧಿಸಲಾಗುತ್ತಿದೆ ಎಂದರು. ಸದ್ಯ ಗಂಗೋತ್ರಿಗೆ ಬೋರ್‌ ವೆಲ್‌ ನೀರು ಲಭ್ಯವಿದೆ. ಕೆಲವೊಮ್ಮೆ ಈ ನೀರು ಕಲುಷಿತಗೊಂಡು ಬರುತ್ತಿದೆ. ಇದರಿಂದ ವಿಜ್ಞಾನ ಲ್ಯಾಬ್‌ನಲ್ಲಿ ಈ ನೀರನ್ನು ಬಳಸಿ ಪರೀಕ್ಷೆ ಮಾಡಲು ಕಷ್ಟವಾಗುತ್ತಿದೆ. ಅಲ್ಲದೆ, ಗಂಗೋತ್ರಿ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಸದ್ಯ 4 ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇದನ್ನೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಕಾವೇರಿ ನೀರನ್ನು ಮಾನಸ ಗಂಗೋತ್ರಿಗೆ ಹರಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.

Tap to resize

Latest Videos

undefined

Uttara Kannada: ಕುಮಟಾದಲ್ಲಿ ಶಾಲಾ ಬಳಿಯೇ ಎಂಎಸ್‌ಐಎಲ್ ನಿರ್ಮಾಣಕ್ಕೆ ಸಿದ್ಧತೆ

ಸರ್ಕಾರಿ ನಾಮ ನಿದೇರ್ಶನ ಸದಸ್ಯ ಶಶಿಕುಮಾರ್‌ ಮಾತನಾಡಿ, ಸಭೆಯ ನಡಾವಳಿಯು ನನಗೆ ಇಂದು ಬೆಳಗ್ಗೆ ಕೈ ಸೇರಿದೆ. ಇದರಿಂದ ನಾವು ಯಾವುದೇ ರೀತಿಯ ಪೂರ್ವ ಸಿದ್ಧತೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಲೆಕ್ಕಪತ್ರದ ಕುರಿತು ವಿವರವಾದ ಮಾಹಿತಿ ನೀಡುವಂತೆ ಆಗ್ರಹಿಸಿದರು. ಪ್ರತಿ ವರ್ಷ ವಿವಿ ಬಜೆಟ್‌ ನಲ್ಲಿ ವಿದ್ಯುತ್‌ ಬಿಲ್‌ಗೆ . 4 ಕೋಟಿ ಮೀಸಲಿಡಲಾಗುತ್ತಿದೆ. ಗಂಗೋತ್ರಿಯ ಎಲ್ಲಾ ವಿಭಾಗಕ್ಕೂ ಸೋಲಾರ್‌ ಸಂಪರ್ಕ ಕಲ್ಪಿಸಿದರೆ ಖರ್ಚು ಕಡಿಮೆ ಮಾಡಬಹುದು ಮತ್ತು ಹೆಚ್ಚುವರಿ ವಿದ್ಯುತ್‌ ಅನ್ನು ಬೇರೆಯವರಿಗೆ ಮಾರಾಟ ಮಾಡಬಹುದು ಎಂದು ಸಲಹೆ ನೀಡಿದರು. ಇದಕ್ಕೆ ಉತ್ತರಿಸಿದ ಪೊ›.ಜಿ. ಹೇಮಂತ್‌ ಕುಮಾರ್‌, ಈಗಾಗಲೇ ಎರಡು ವಿಭಾಗಕ್ಕೆ ಸೋಲಾರ್‌ ಸೌಲಭ್ಯ ಕಲ್ಪಿಸಲಾಗಿದೆ. 15 ವಿಭಾಗಗಳಿಗೆ ನೀಡಿದರೆ . 1.5 ಕೋಟಿ ವಿದ್ಯುತ್‌ ಬಿಲ್‌ ಉಳಿಸಬಹುದು ಎಂದರು.

ಬೌದ್ಧ ಅಧ್ಯಯನ ಕೇಂದ್ರಕ್ಕೆ ಪ್ರಸ್ತಾವನೆ: ಬೌದ್ಧ ಅಧ್ಯಯನ ಕೇಂದ್ರ ಸ್ಥಾಪಿಸಲು ಸರ್ಕಾರಕ್ಕೆ ಕೂಡಲೇ ಪ್ರಸ್ತಾವನೆ ಸಲ್ಲಿಸಲಾಗುವುದು. ಸದ್ಯ ಅಂಬೇಡ್ಕರ್‌ ಅಧ್ಯಯನ ಸಂಸ್ಥೆಯಲ್ಲಿಯೇ ಬೌದ್ಧ ಅಧ್ಯಯನ ಕೇಂದ್ರ ನಡೆಯುತ್ತಿದೆ. ಹಾಗಾಗಿ ಶೀಘ್ರವೇ ಸರ್ಕಾರದ ಅನುಮೋದನೆ ಕೋರಲು ಪ್ರಸ್ತಾಪವೊಂದನ್ನು ತಯಾರಿಸಿ ಕಳುಹಿಸಿಕೊಡಲಾಗುವುದು ಎಂದರು. ಇದೇ ವೇಳೆ ದೂರ ಶಿಕ್ಷಣದ 250 ವಿದ್ಯಾರ್ಥಿಗಳ ವ್ಯಾಸಂಗ ದೃಷ್ಟಿಯಿಂದ ಮುಕ್ತ ಐಚ್ಛಿಕ ಪತ್ರಿಕೆಯನ್ನು ಪ್ರಾಜೆಕ್ಟ್ ವರ್ಕ್ ಪತ್ರಿಕೆಯೆಂದು ಪರಿಗಣಿಸುವ ಕುರಿತು ಸಭೆಯಲ್ಲಿ ದೊರಕಿತು. 

ಪುನೀತ್ ಫೋಟೋ ಹಿಡಿದು ಮುಳ್ಳುಗಳ ಮೇಲೆ ಕುಣಿದು ಕುಪ್ಪಳಿಸಿದ ಅಪ್ಪು ಅಭಿಮಾನಿಗಳು

ವಿಶ್ವವಿದ್ಯಾಲಯದಲ್ಲಿ ಚಿನ್ನದ ಪದಕ ದತ್ತಿ, ಸುಮಂಗಲಮ್ಮ ರಂಗಸ್ವಾಮಿ ನಗದು ಬಹುಮಾನ ದತ್ತಿ ಸ್ಥಾಪನೆ ಹಾಗೂ ತತ್ತ್ವಶಾಸ್ತ್ರ ವಿಷಯದಲ್ಲಿ ಪಿಎಚ್‌ಡಿ ಪಡೆಯಲು ತಾತ್ಕಾಲಿಕ ನೋಂದಣಿ ನೀಡುವ ಬಗ್ಗೆ ಶಿಕ್ಷಣ ಮಂಡಳಿ ಸಭೆಯಲ್ಲಿ ಚರ್ಚೆ ಆಗಿ ಅನುಮೋದಿಸಲಾಯಿತು. ಮಂಡ್ಯ ಕ್ಷೇತ್ರದ ಶಾಸಕ, ಶೈಕ್ಷಣಿಕ ಮಂಡಳಿ ಸದಸ್ಯ ಎಂ. ಶ್ರೀನಿವಾಸ್‌, ವಿಧಾನ ಪರಿಷತ್‌ ಸದಸ್ಯೆ ವೀಣಾ ಅಚ್ಚಯ್ಯ, ಕುಲಸಚಿವರಾದ ಪ್ರೊ.ಆರ್‌. ಶಿವಪ್ಪ, ಪ್ರೊ.ಎ.ಪಿ. ಜ್ಞಾನಪ್ರಕಾಶ್‌, ಹಣಕಾಸು ಅಧಿಕಾರಿ ಸಂಗೀತಾ ಗಜಾನನ ಭಟ್‌, ಲೋಕನಾಥ್‌ ಇದ್ದರು.

click me!