Chamarajanagar: ಕಟ್ಟೆ ಗಣಿಗನೂರು ಸಣ್ಣ ನೀರಾವರಿ ಕಾಲುವೆ ಕಳಪೆ ಪ್ರಕರಣ ಮುಚ್ಚಿ ಹಾಕಲು ಯತ್ನ

Published : Sep 06, 2022, 12:58 AM IST
Chamarajanagar: ಕಟ್ಟೆ ಗಣಿಗನೂರು ಸಣ್ಣ ನೀರಾವರಿ ಕಾಲುವೆ ಕಳಪೆ ಪ್ರಕರಣ ಮುಚ್ಚಿ ಹಾಕಲು ಯತ್ನ

ಸಾರಾಂಶ

ತಾಲೂಕಿನ ಕಟ್ಟೆಗಣಿಗನೂರು ಗ್ರಾಮದಲ್ಲಿ ಕೃಷಿ ಜಮೀನುಗಳಿಗೆ ನೀರುಣಿಸಲು 50 ಲಕ್ಷ ರು. ವೆಚ್ಚದಲ್ಲಿ ಕೈಗೆತ್ತಿ ಕೊಳ್ಳಲಾಗಿದ್ದ ನೀರಾವರಿ ಕಾಲುವೆ ಪೂರ್ಣಗೊಳಿಸಿದ 15 ದಿನಗಳಲ್ಲೇ ಕಾಲುವೆ ಮುರಿದು ಬಿದ್ದಿದೆ.

ಅಂಬಳೆ ವೀರಭದ್ರನಾಯಕ

ಯಳಂದೂರು (ಸೆ.06): ತಾಲೂಕಿನ ಕಟ್ಟೆ ಗಣಿಗನೂರು ಗ್ರಾಮದಲ್ಲಿ ಕೃಷಿ ಜಮೀನುಗಳಿಗೆ ನೀರುಣಿಸಲು 50 ಲಕ್ಷ ರು. ವೆಚ್ಚದಲ್ಲಿ ಕೈಗೆತ್ತಿ ಕೊಳ್ಳಲಾಗಿದ್ದ ನೀರಾವರಿ ಕಾಲುವೆ ಪೂರ್ಣಗೊಳಿಸಿದ 15 ದಿನಗಳಲ್ಲೇ ಕಾಲುವೆ ಮುರಿದು ಬಿದ್ದಿದೆ. ಇದರಿಂದ ಸಾರ್ವಜನಿಕರ ತೆರಿಗೆ ಹಣ ಪೋಲಾಗಿದರೂ ಸಂಬಂಧ ಪಟ್ಟಎಂಜಿನೀಯರ್‌ ಮತ್ತು ಗುತ್ತಿಗೆದಾರನ ವಿರುದ್ದ ಯಾವುದೇ ಶಿಸ್ತು ಕ್ರಮ ಕೈಗೊಳ್ಳಲು ಆಡಳಿತಶಾಹಿ ವಿಫಲವಾಗಿದ್ದು, ಆಡಳಿತಶಾಹಿ ವರ್ಗ ಕಮೀಷನ್‌ ದಂಧೆಗೆ ಬಾಯಿ ಮುಚ್ಚಿತೆ ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ರೈತರ ಅಚ್ಚು ಕಟ್ಟು ಪ್ರದೇಶಗಳಿಗೆ ನೀರುಣಿಸುವ ನಿಟ್ಟಿನಲ್ಲಿ ಸಣ್ಣ ನೀರಾವರಿ ಇಲಾಖೆಗೆ ಸುಮಾರು 50 ಲಕ್ಷ ರು. ಅನುದಾನವನ್ನು ಸರ್ಕಾರ ಆಡಳಿತ್ಮಾಕವಾಗಿ ಮಂಜೂರಾತಿ ನೀಡಿ ಗುತ್ತಿಗೆದಾರರನಿಗೆ ಟೆಂಡರ್‌ ನೀಡಿತ್ತು. ಕಾಮಗಾರಿ ಪ್ರಾರಂಭ ಹಂತದಲ್ಲಿ ರೈತರು ಕಾಲುವೆ ಕಾಮಗಾರಿ ನಡೆಸುತ್ತಿದ್ದರಿಂದ ಖುಷಿಯಾಗಿದ್ದರು. ಆದರೆ, ಪ್ರಾರಂಭ ಹಂತದಲ್ಲೆ ಕಾಮಗಾರಿ ಕಳಪೆ ನಡೆಯುತ್ತಿದೆ ಎಂದು ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್‌ಗೆ ರೈತರು ಮೌಖಿಕವಾಗಿ ಹೇಳಿದರು. ರೈತರ ದೂರಿಗೆ ಕಿವಿ ನೀಡಿದ ಎಂಜಿನಿಯರ್‌ ಗುತ್ತಿಗೆದಾರನ್ನು ನೀಡುವ ಕಮಿಷನ್‌ ಆಸೆಗೆ ತಮ್ಮ ಜವಾಬ್ದಾರಿ ಮರೆತು ಗುತ್ತಿಗೆದಾರನಿಗೆ ಸ್ವಾಮಿ ನಿಷ್ಠೆ ತೋರಿದ್ದರಿಂದ ಗುತ್ತಿಗೆದಾರನಿಗೆ ವರದಾನವಾಯಿತು.

ಭಾರೀ ವಾಹನಗಳ ರಾತ್ರಿ ಸಂಚಾರಕ್ಕೆ ನಿರ್ಬಂಧ: ಡಿಸಿ ಚಾರುಲತಾ ಸೋಮಲ್‌

ಗುತ್ತಿಗೆದಾರ ತನ್ನಿಷ್ಟದಂತೆ ಕಾಮಗಾರಿಯನ್ನು ತರಾತುರಿ ಮಾಡಿ ಮುಗಿಸಿ ಬಿಲ್‌ ಬರೆಸಲು ಮುಂದಾದ ಆದರೆ, ಕಾಮಗಾರಿ ಮುಗಿಸಿದ 15 ದಿನದಲ್ಲೆ ಕಾಲುವೆ ಕಳಪೆ ಕಾಮಗಾರಿಯಾದರಿಂದ ಮುರಿದು ಬಿದ್ದಿರುವುದನ್ನು ನೋಡಿದ್ದರೆ ಎಂಜಿನಿಯರ್‌ ದಕ್ಷತೆ ಗುತ್ತಿಗೆದಾರನ ಪ್ರಾಮಾಣಿಕತೆಗೆ ಕೈ ಕನ್ನಡಿಯಾಗಿದೆ. ಶಾಸಕ ಎನ್‌.ಮಹೇಶ್‌ ಹೋರಾಟದಿಂದ ಬಂದವರು ಇಂತಹ ಎಂಜಿನಿಯರ್‌ ಮತ್ತು ಗುತ್ತಿಗೆದಾರರಿಗೆ ಸಹಕಾರ ನೀಡುವುದು ಸರಿಯಲ್ಲ ಬದಲಿಗೆ ಅಂತಹ ಭ್ರಷ್ಟ ಎಂಜಿನಿಯರ್‌ ಮತ್ತು ಗುತ್ತಿಗೆದಾರನ ವಿರುದ್ದ ಶಿಸ್ತು ಕ್ರಮವಿಲ್ಲದೆ ಇರುವುದು ನೋಡಿದರೆ ಹಲವು ಅನುಮಾನ ಚರ್ಚೆಗೆ ಸಾರ್ವಜನಿಕ ವಲಯದಲ್ಲಿ ಭಾರಿ ಸುದ್ದಿ ಮಾಡಿದೆ.

ಕ್ಷೇತ್ರ ವ್ಯಾಪ್ತಿಯಲ್ಲಿ ಇಂತಹ ಎಷ್ಟೋ ಕಾಮಗಾರಿಗಳು ಗುಣ ಮಟ್ಟಇಲ್ಲದೆ ಕಳಪೆಯಿಂದ ಕೂಡಿದೆ. ಆದರೂ ಶಾಸಕ ಎನ್‌.ಮಹೇಶ್‌ ಪಾರದರ್ಶಕ ಆಡಳಿತ ನೀಡುವ ಉದ್ದೇಶದಿಂದ ಕರ್ತವ್ಯ ಲೋಪವೆಸಗಿರುವ ಎಂಜಿನಿಯರ್‌ ಮತ್ತು ಕಳಪೆ ಕಾಮಗಾರಿ ನಡೆಸಿರುವ ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸುವ ಮೂಲಕ ಆಡತಶಾಹಿವರ್ಗಕ್ಕೆ ಚುರಕು ಮುಟ್ಟಿಸುತ್ತಾರೆಯೇ ಎಂಬ ನೀರಿಕ್ಷೆಯಲ್ಲಿ ಸಾರ್ವಜನಿಕರು ಚಾತಕ ಪಕ್ಷಿಯಂತೆ ಕಾದು ನೋಡುತ್ತಿದ್ದಾರೆ.

ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್‌ ಸರಿಯಾಗಿ ಕರ್ತವ್ಯ ನಿರ್ವಹಿಸಿದ್ದರೆ ಕಟ್ಟೆಗಣಿಗನೂರು ನೀರಾವರಿ ಕಾಲುವೆ ಕಳಪೆಯಾಗಿ ಮುರಿದು ಬಿಳುತ್ತಿರಲಿಲ್ಲ. ಲೋಪಕ್ಕೆ ಕಾರಣರಾದ ಎಂಜಿನಿಯರ್‌ ಅಮಾನತುಪಡಿಸಿ ಗುತ್ತಿಗೆದಾರನ್ನು ಕಪ್ಪು ಪಟ್ಟಿಗೆ ಸೇರಿಸುವ ಮೂಲಕ ಜಿಲ್ಲಾಡಳಿತ ಶಿಸ್ತು ಕ್ರಮ ಜರುಗಿಸಬೇಕು.
-ಜೆ.ಸಿ.ರಾಜೇಶ್‌, ಗಣಿಗನೂರು

ವಾಸ್ತವಾಂಶ ಅರಿತು ಮಾಹಿತಿ ನೀಡುವೆ: ಸಚಿವ ಸೋಮಣ್ಣ

ಮೊದಲು ಶಾಸಕ ಎನ್‌.ಮಹೇಶ್‌ ಅವರು ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಮತ್ತು ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್‌ ಅಮಾನತು ಮಾಡುವ ಮೂಲಕ ತಮ್ಮ ಪರಮಾಧಿಕಾರದ ಜವಾಬ್ದಾರಿಯನ್ನು ತೋರಿಸಿದರೆ ಮಾತ್ರ ಮುಂದಿನ ದಿನಗಳಲ್ಲಿ ಅಧಿಕಾರಿವರ್ಗ ಮತ್ತು ಗುತ್ತಿಗೆದಾರರ ಪಾಠ ಕಲಿಯುತ್ತಾರೆ. ಸುಮ್ನೆ ಸಾರ್ವಜನಿಕರ ಮುಂದೆ ಅಧಿಕಾರಿಗಳನ್ನು ತರಾಟೆ ತೆಗೆದು ಕೊಂಡರೆ ಸಾಲದು.
-ಹೊನ್ನೂರು ಪ್ರಕಾಶ್‌, ಜಿಲ್ಲಾಧ್ಯಕ್ಷ, ರೈತಸಂಘ ಚಾಮರಾಜನಗರ

PREV
Read more Articles on
click me!

Recommended Stories

ನಮ್ಮನ್ನು ಗುಲಾಮರನ್ನಾಗಿಸಿ ಹಿಂದೂ ಧರ್ಮ ಸೃಷ್ಟಿಸಿದ್ದು ಬ್ರಾಹ್ಮಣರು: ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ
ಅಂಕಣ | ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಉದ್ಯೋಗದ ನವಯುಗ!