ಸಮುದಾಯಗಳ ಅಭಿವೃದ್ಧಿ ಶಿಕ್ಷಣದಿಂದ ಮಾತ್ರ ಸಾಧ್ಯ: ಶಾಸಕ ಸುಬ್ಬಾರೆಡ್ಡಿ

By Govindaraj S  |  First Published Sep 5, 2022, 11:02 PM IST

ಶಿಕ್ಷಣದಿಂದ ಮಾತ್ರ ಯಾವುದೇ ಸಮುದಾಯ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಶಾಸಕ ಎಸ್‌.ಎನ್‌.ಸುಬ್ಬಾರೆಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದರು.


ಬಾಗೇಪಲ್ಲಿ (ಸೆ.05): ಶಿಕ್ಷಣದಿಂದ ಮಾತ್ರ ಯಾವುದೇ ಸಮುದಾಯ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಶಾಸಕ ಎಸ್‌.ಎನ್‌.ಸುಬ್ಬಾರೆಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದರು. ವಾಲ್ಮೀಕಿ ನಾಯಕ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಪಟ್ಟಣದ ಸರ್ಕಾರಿ ಬಾಲಕೀಯರ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ 15ನೇ ವರ್ಷದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನಾಯಕ ಸಮುದಾಯ ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿದೆ. ಈ ಭಾಗದಲ್ಲಿ ಯಾವುದೇ ಶಾಶ್ವತ ನೀರಾವರಿ ಯೋಜನೆಗಳಿಲ್ಲ, ಜೀವ ನದಿಗಳಿಲ್ಲ, ಕೈಗಾರಿಕೆಗಳಿಲ್ಲ.

ಈ ನಿಟ್ಟಿನಲ್ಲಿ ಯಾವುದೇ ಸಮುದಾಯ ಅಭಿವೃದ್ಧಿ ಹೊಂದಲು ಶಿಕ್ಷಣದಿಂದ ಮಾತ್ರ ಸಾಧ್ಯ ಎಂದ ಅವರು, ಪ್ರತಿಭೆಯನ್ನು ಗುರ್ತಿಸುವ ಇಂತಹ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ಹಮ್ಮಿಕೊಳ್ಳಬೇಕೆಂದರು. ನಾಗಮೋಹನ್‌ ದಾಸ್‌ ವರದಿ ಜಾರಿಗಾಗಿ ಕಳೆದ 200 ದಿನಗಳಿಂದ ವಾಲ್ಮೀಕಿ ಸಮುದಾಯದ ಸ್ವಾಮೀಜಿ ಧರಣಿ ಸತ್ಯಗ್ರಹ ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು. ಪೊಲೀಸ್‌ ಅಧೀಕ್ಷಕ ರವಿ.ಡಿ.ಚನ್ನಣ್ಣನವರ್‌ ಮಾತನಾಡಿ, ಸಾಧಿಸಬೇಕು ಎನ್ನುವ ಛಲ, ಶ್ರದ್ಧೆ, ಶಿಸ್ತು, ಶ್ರಮ ಇದ್ದರೆ ಮನುಷ್ಯನನ್ನು ಯಾವುದೇ ಕ್ಷೇತ್ರದಲ್ಲಿ ಅತ್ಯತ್ತಮ ಹಂತಕ್ಕೆ ತಲುಪಲು ಸಹಕಾರಿಯಾಗುತ್ತೆ ಎಂದರು.

Tap to resize

Latest Videos

undefined

ಸಂವಿಧಾನ ಆಶಯಗಳನ್ನು ಇನ್ನೂ ಈಡೇರಿಸಿಲ್ಲ:ಡಾ. ಪರಮೇಶ್ವರ್‌

ಜೊತೆಗೆ ಶಿಕ್ಷಕ, ಪೊಲೀಸ್‌, ವೈದ್ಯ, ವಿದ್ಯಾರ್ಥಿ ಸೇರಿದಂತೆ ಯಾವುದೇ ವೃತ್ತಿಗೆ 100ಕ್ಕೆ 100ರಷ್ಟು ತಮ್ಮನ್ನು ಸಮರ್ಪಣೆ ಮಾಡಿಕೊಳ್ಳುವ ಸ್ವಾಭಾವವನ್ನು ತಮ್ಮ ಜೀವನದಲ್ಲಿ ರೂಢಿಸಿಕೊಳ್ಳಬೇಕೆಂದರು. ಈ ಸಂದರ್ಭದಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ಡಿ.ಸಿ ಹೆಚ್‌.ವೇಣುಗೋಪಾಲ್‌, ಪಶು ಸಂಗೋಪನಾ ಇಲಾಖೆ ನಿವೃತ್ತ ನಿರ್ದೇಶಕ ಡಾ. ಬಿ.ಎನ್‌.ಶಿವರಾಮ್‌, ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಅಪರ ಆಯುಕ್ತ ನಾಗರಾಜಪ್ಪ, ಸಬ್‌ಇನ್ಸ್‌ಪೆಕ್ಟರ್‌ ನಂಜುಂಡಯ್ಯ, ಜಿ.ಪಂ ಮಾಜಿ ಸದಸ್ಯ ನರಸಿಂಹಪ್ಪ, ನಾಯಕ ಕ್ಷೇಮಾಭಿವೃದ್ದಿ ಸಂಘದ ತಾ.ಅಧ್ಯಕ್ಷ ಮರಿಯಪ್ಪ, ಕಾರ್ಯದರ್ಶಿ ಅಮರಪ್ಪ, ಮುಖಂಡರಾದ ಶಿವಪ್ಪ, ಶರಣಪ್ಪ ಮತ್ತಿತರರು ಇದ್ದರು.

Kolar: ಶೇ.70ರಷ್ಟು ದಲಿತರು ಬಿಜೆಪಿ ಪರ ಇದ್ದಾರೆ: ಛಲವಾದಿ ನಾರಾಯಣಸ್ವಾಮಿ

ವಿದ್ಯಾರ್ಥಿ ದಿಸೆಯಲ್ಲಿ ಜೀವನದಲ್ಲಿ ಉದ್ದಾರ ಆಗಬೇಕು ಎನ್ನುವ ಕನಸು ಕಾಣುವ ವ್ಯಕ್ತಿ ಶ್ರಮಪಡುವ ಸಮಯದಲ್ಲಿ ಎಚ್ಚರಗೊಳಿಸುವಂತಹ ಗೀತೆಗಳನ್ನ ಕ್ರಾಂತಿ ಗೀತೆಗಳನ್ನು, ಹೋರಾಟ ಕಧನ, ಸ್ವಾಭಿಮಾನದ ಕಧೆಗಳನ್ನು, ನಮ್ಮ ಇತಿಹಾಸ, ಚರಿತ್ರೆ, ಓದಿ ಕೇಳುವಂತಹ ಹವ್ಯಾಸಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು.
-ರವಿ.ಡಿ.ಚನ್ನಣ್ಣನವರ್‌, ಐಪಿಎಸ್‌ ಅಧಿಕಾರಿ

click me!