BMTC ಬಸ್‌ನಲ್ಲಿ ಕಟೀಲು ಬ್ರಹ್ಮಕಲಶ ಪ್ರಚಾರ

By Kannadaprabha NewsFirst Published Jan 10, 2020, 2:57 PM IST
Highlights

ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಳದಲ್ಲಿ ಬ್ರಹ್ಮ ಕಲಶೋತ್ಸವ ನಡೆಯುತ್ತಿದ್ದು, ಈ ಸಂಭ್ರಮದ ಕುರಿತ ಬ್ಯಾನರ್ ಬಿಎಂಟಿಸಿ ಬಸ್‌ಗಳಲ್ಲಿಯೂ ಅಳವಡಿಸಲಾಗಿದೆ.

ಮಂಗಳೂರು(ಜ.10): ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಳದಲ್ಲಿ ಬ್ರಹ್ಮ ಕಲಶೋತ್ಸವ ನಡೆಯುತ್ತಿದ್ದು, ಈ ಸಂಭ್ರಮದ ಕುರಿತ ಬ್ಯಾನರ್ ಬಿಎಂಟಿಸಿ ಬಸ್‌ಗಳಲ್ಲಿಯೂ ಅಳವಡಿಸಲಾಗಿದೆ.

ಕಟೀಲಿನ ಶ್ರೀ ದುರ್ಗಾಪರಮೇಶ್ವರಿ ಬ್ರಹ್ಮಕಲಶೋತ್ಸವದ ಸಂಭ್ರಮಕ್ಕೆ ಸಕಲ ಸಿದ್ಧತೆ ನಡೆಯುತ್ತಿದ್ದು ಜೀರ್ಣೋದ್ಧಾರ ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಗಳು ಭಕ್ತರ ಸಹಕಾರದಲ್ಲಿ ನಡೆಯುತ್ತಿದೆ.

ವಿದೇಶಕ್ಕೆ ಸಾಗಿಸಲಾಗುತ್ತಿದ್ದ 2 ಕೋಟಿ ಮೌಲ್ಯದ ರಕ್ತಚಂದನ ವಶಕ್ಕೆ

ದೇಶ- ವಿದೇಶಗಳಲ್ಲಿ ಅಸಂಖ್ಯಾತ ಭಕ್ತರನ್ನು ಹೊಂದಿರುವಂತಹ ಕಟೀಲಿನ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವದ ಬಗ್ಗೆ ದೇಶಾದ್ಯಂತ ಪ್ರಚಾರ ನಡೆಯುತ್ತಿದೆ. ಬೆಂಗಳೂರಿನ ಶಾಂತಿನಗರದಲ್ಲಿ ಬಿಎಂಟಿಸಿ ಬಸ್‌ನ ಹೊರಭಾಗದ ಹಿಂಬದಿಯಲ್ಲಿ ಕಟೀಲಿನಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವದ ಬಗ್ಗೆ ಮಾಹಿತಿ ನೀಡುವ ಬ್ಯಾನರ್‌ನ್ನು ಅಳವಡಿಸಲಾಗಿದೆ. ಇದರಿಂದ ಕಟೀಲಿನ ಬ್ರಹ್ಮಕಲಶೋತ್ಸವದ ಬಗ್ಗೆ ರಾಜ್ಯದ ಎಲ್ಲ ಕಡೆ ತಿಳಿಸುವ ಕಾರ್ಯವನ್ನು ಭಕ್ತರು ಮಾಡುತ್ತಿದ್ದಾರೆ.

'ಹಿಸುಕಿ ಪೊದೆಗೆ ಎಸೀತೀವಿ': CAA ಪರ ಧ್ವನಿ ಎತ್ತಿದ ಮುಸ್ಲಿಂ ಮಖಂಡನಿಗೆ ಕೊಲ್ಲಿ ರಾಷ್ಟ್ರದಿಂದ ಕೊಲೆ ಬೆದರಿಕೆ

ದುರ್ಗೆಗೆ ಒಂದು ಸ್ವರ್ಣ ಕಲಶದಲ್ಲಿ ಪ್ರಧಾನ ಅಭಿಷೇಕ ನಡೆಯಲಿದ್ದು ಕಲಶಾಭಿಷೇಕಕ್ಕೆ 1,127 ಬೆಳ್ಳಿಯ ಕಲಶಗಳು ಸಿದ್ಧಗೊಳ್ಳುತ್ತಿದೆ. ದೇವಸ್ಥಾನವು ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳ ಪಟ್ಟಿರುವುದರಿಂದ ಸರ್ಕಾರದ ನಿಯಾಮನುಸಾರ ನಡೆಯಬೇಕಿದ್ದು 92.5 ಶುದ್ಧತೆಯ ಪ್ರಮಾಣದೊಂದಿಗೆ ಹಾಲ್‌ ಮಾರ್ಕ್ ಸಹಿತದ ಕಲಶಗಳನ್ನು ಅಭಿಷೇಕಕ್ಕೆ ಬಳಸಲಾಗುತ್ತಿದೆ.

ಸ್ನೇಹಿತನ ಮೊದಲ ರಾತ್ರಿಗೆ ಸ್ನೇಹಿತರ ವಿಶ್ ! ಸೋಶಿಯಲ್ ಮೀಡಿಯಾದಲ್ಲಿ ವೈರಲ್

click me!