ವಿವಿಧ ಸಂಘಟನೆಗಳ ವಿರೋಧದ ನಡುವೆಯೂ ಕೂಡ ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನ ಆರಂಭವಾಗಿದೆ. ಇಂದಿನಿಂದ ಎರಡು ದಿನಗಳ ಕಾಲ ಸಮ್ಮೇಳನ ನಡೆಯುತ್ತಿದೆ.
ಶೃಂಗೇರಿ [ಜ.10]: ಸಂಘ ಪರಿವಾರದ ವಿರೋಧ, ಕೇಂದ್ರ ಕನ್ನಡ ಸಾಹಿತ್ಯ ಪರಿಷತ್‌ನ ಅಸಹಕಾರ, ಪೊಲೀಸ್ ಇಲಾಖೆಯ ನಿರ್ಬಂಧದ ನಡುವೆ ಇಂದಿನಿಂದ ಎರಡು ದಿನಗಳ ಕಾಲ ಶೃಂಗೇರಿಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಆರಂಭವಾಗಿದೆ.
ಶೃಂಗೇರಿಯ ಆದಿಚುಂಚನಗಿರಿ ಸಮುದಾಯ ಭವನದ ಬಳಿಯ ವೇದಿಕೆಯಲ್ಲಿ ಕಾರ್ಯಕ್ರಮ ನಡೆಯುತ್ತಿದ್ದು, ಸಮ್ಮೇಳನಾಧ್ಯಕ್ಷರಾದ ವಿಠ್ಠಲ ಹೆಗಡೆ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಬಾಲ್ಯದಿಂದ ಅಸಮಾನತೆ ಜಾತಿ ವ್ಯವಸ್ಥೆ ಬಗ್ಗೆ ಅಸಮಾಧಾನ ಹೊರಹಾಕಿದ ಅವರು , ದಲಿತ ದೌರ್ಜನ್ಯದ ವಿಚಾರಗಳ ಬಗ್ಗೆ ಪ್ರಸ್ತಾಪಿಸಿದರು. ಅಲ್ಲದೇ ತಮ್ಮ ರಾಜಕೀಯ ವಿಚಾರಗಳ ಬಗ್ಗೆಯೂ ಪ್ರಸ್ತಾಪಿಸಿದರು.
undefined
ಇನ್ನು ಸಮ್ಮೇಳದಲ್ಲಿ ವಿವಿಧ ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದೆ. ಸಂಸ್ಕೃತಿ ಚಿಂತಕ ಎಚ್.ಎಂ. ರುದ್ರಸ್ವಾಮಿ ಅಧ್ಯಕ್ಷತೆಯಲ್ಲಿ ನಮ್ಮ ಊರು ನಮ್ಮ ಲೇಖಕರು ಜಿಲ್ಲಾ ಸಾಹಿತ್ಯ ದರ್ಶನ ಗೋಷ್ಠಿ ನಡೆದಿದ್ದು, ಸಾಹಿತಿ ರವೀಶ್ ಕ್ಯಾತನಬೀಡು ಅವರು ಅಜ್ಜಂಪುರ ಜಿ.ಸೂರಿ ಸಾಹಿತ್ಯದ ಬಗ್ಗೆ, ಡಾ.ಸತ್ಯನಾರಾಯಣ ಅವರು ಕಲ್ಕುಳಿ ವಿಠಲ್ ಹೆಗ್ಡೆ ಸಾಹಿತ್ಯದ ಬಗ್ಗೆ, ಡಾ. ಎಚ್.ಎಂ. ಮಹೇಶ್ ಡಾ.ಬೆಳವಾಡಿ ಮಂಜುನಾಥ್ ಸಾಹಿತ್ಯದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ.
ಕಲಬುರಗಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಎಚ್.ಎಸ್.ವೆಂಕಟೇಶ ಮೂರ್ತಿ ಆಯ್ಕೆ...
ಸಂಜೆ 4 ಗಂಟೆಗೆ ವೈಎಸ್‌ವಿ ದತ್ತ ಅಧ್ಯಕ್ಷತೆಯಲ್ಲಿ ಕೃಷಿ ಮತ್ತು ಪರಿಸರಗೋಷ್ಠಿ ನಡೆಯಲಿದ್ದು, ಹಳೇಕೋಟೆ ರಮೇಶ್ ಮಲೆನಾಡಿನ ಕೃಷಿಕರಿಗೆ ಇರುವ ಸವಾಲುಗಳು ಮತ್ತು ಅದರ ಆತಂಕದ ಬಗ್ಗೆ ಎಚ್.ಎಂ. ಕಿಶೋರ್ ಪ್ರಕೃತಿ ವಿಕೋಪ ಮತ್ತು ಜಿಲ್ಲೆಯ ಜನರ ಆತಂಕಗಳ ಬಗ್ಗೆ ಉಪನ್ಯಾಸ ನೀಡಲಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ವಿವಿಧ ಸಂಘಟನೆಗಳು ಕಲ್ಕುಳಿ ವಿಠಲ್ ಹೆಗ್ಡೆ ಅಧ್ಯಕ್ಷರಾಗುವುದನ್ನು ವಿರೋಧ ವ್ಯಕ್ತಪಡಿಸಿದ್ದರ ಹಿನ್ನೆಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ದೃಷ್ಟಿಯಿಂದ ಶೃಂಗೇರಿ ಪಟ್ಟಣದಲ್ಲಿ ಸುಮಾರು 900 ಮಂದಿ ಪೊಲೀಸರನ್ನು ನಿಯೋಜನೆ ಮಾಡಲಾಗಿದ್ದು, ಜಿಲ್ಲಾ ರಕ್ಷಣಾಧಿಕಾರಿ ಹರೀಶ್ ಪಾಂಡೆ ಅವರು ಸ್ಥಳದಲ್ಲಿ ಮೊಕ್ಕಂ ಹೂಡಿದ್ದಾರೆ.