ಪಟ್ಲ ಸತೀಶ್‌ ವಜಾಕ್ಕೆ ಕಾರಣ ಕೊಟ್ಟ ಕಟೀಲು ಮೇಳ ಸಂಚಾಲಕ, ಹೇಳಿದ್ದೇನು..?

By Kannadaprabha News  |  First Published Nov 25, 2019, 10:41 AM IST

ಕಟೀಲಿನಲ್ಲಿ ನಡೆದ ಪ್ರಥಮ ಸೇವೆಯಾಟ ಸಂದರ್ಭ ಪಟ್ಲ ಶತೀಶ್‌ ಶೆಟ್ಟಿಅವರಿಗೆ ಪ್ರಬಂಧಕರ ಮೂಲಕ ಪದ್ಯ ಹೇಳಬಾರದೆಂದು ತಿಳಿಸಲಾಗಿತ್ತು. ಅದನ್ನು ಮೀರಿ ಪಟ್ಲ ಅವರು ಭಾಗವತರು ಪದ್ಯ ಹೇಳುತ್ತಿದ್ದ ಸಂದರ್ಭದಲ್ಲಿ ಅವರನ್ನು ಎಬ್ಬಿಸಿ ಕುಳಿತುಕೊಳ್ಳಲು ಹೋದಾಗ ಪದ್ಯ ಹೇಳಬೇಡ ಎಂದು ಹೇಳಲಾಗಿದೆ. ಅದಕ್ಕೆ ಅವರು ಹೊರಟು ಹೋಗಿದ್ದಾರೆ ಎಂದು ಕಟೀಲು ಮೇಳದ ಸಂಚಾಲಕ ಕಲ್ಲಾಡಿ ದೇವಿಪ್ರಸಾದ್‌ ಶೆಟ್ಟಿ ಹೇಳಿದ್ದಾರೆ.


ಮಂಗಳೂರು(ನ.25): ಕಟೀಲಿನಲ್ಲಿ ನಡೆದ ಪ್ರಥಮ ಸೇವೆಯಾಟ ಸಂದರ್ಭ ಪಟ್ಲ ಶತೀಶ್‌ ಶೆಟ್ಟಿಅವರಿಗೆ ಪ್ರಬಂಧಕರ ಮೂಲಕ ಪದ್ಯ ಹೇಳಬಾರದೆಂದು ತಿಳಿಸಲಾಗಿತ್ತು. ಅದನ್ನು ಮೀರಿ ಪಟ್ಲ ಅವರು ಭಾಗವತರು ಪದ್ಯ ಹೇಳುತ್ತಿದ್ದ ಸಂದರ್ಭದಲ್ಲಿ ಅವರನ್ನು ಎಬ್ಬಿಸಿ ಕುಳಿತುಕೊಳ್ಳಲು ಹೋದಾಗ ಪದ್ಯ ಹೇಳಬೇಡ ಎಂದು ಹೇಳಲಾಗಿದೆ. ಅದಕ್ಕೆ ಅವರು ಹೊರಟು ಹೋಗಿದ್ದಾರೆ ಎಂದು ಕಟೀಲು ಮೇಳದ ಸಂಚಾಲಕ ಕಲ್ಲಾಡಿ ದೇವಿಪ್ರಸಾದ್‌ ಶೆಟ್ಟಿ ಹೇಳಿದ್ದಾರೆ.

ಧರ್ಮಸ್ಥಳದ ಸರ್ವಧರ್ಮ ಸಮ್ಮೇಳನಕ್ಕೆ ಸುಮಿತ್ರಾ ಮಹಾಜನ್‌ ಚಾಲನೆ

Tap to resize

Latest Videos

undefined

ಪಟ್ಲ ಅವರು ಪೂರ್ವ ನಿಯೋಜಿತವಾಗಿ ಕಾರ್ಯಚರಿಸಿ ಮೇಳಕ್ಕೆ ಕೆಟ್ಟಹೆಸರು ತರಲು ಉದ್ದೇಶಿಸಿದ್ದಾರೆ ಎಂದು ಕಟೀಲು ದೇವಳದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದ್ದಾರೆ.

ಪಟ್ಲ ಅವರನ್ನು ಮೇಳದಿಂದ ಕೈಬಿಟ್ಟಬಗ್ಗೆ ಮೇಳದ ಸಂಚಾಲಕರಾದ ಅವರು ನೀಡಿದ ವಿವರ ಇಂತಿದೆ:

ಪಟ್ಲ ಸತೀಶ್‌ ಶೆಟ್ಟಿಯವರು ಕಟೀಲು ಮೇಳದಲ್ಲಿ ಕಳೆದ 19 ವರ್ಷಗಳಿಂದ ಇದ್ದು, 2018ರ ವರೆಗೆ 5 ನೇ ಮೇಳದಲ್ಲಿ ಪ್ರಮುಖ ಭಾಗವತರಾಗಿದ್ದರು. 2018ರಲ್ಲಿ ತನಗೆ ಅನಾರೋಗ್ಯ ಹಾಗೂ ಕಾರ್ಯ ಬಾಹುಳ್ಯದ ಹಿನ್ನೆಲೆಯಲ್ಲಿ ಪ್ರಮುಖ ಭಾಗವತರಾಗಿ ಕಾರ್ಯ ನಿರ್ವಹಿಸಲು ಅಸಾಧ್ಯವಾಗಿದ್ದು ರಾತ್ರಿ 11.30ರಿಂ 1.30 ರ ಅವಧಿಯಲ್ಲಿ ಭಾಗವತಿಕೆ ಮಾಡಲು ಅವಕಾಶ ನೀಡಬೇಕೆಂದು ಲಿಖಿತ ಹೇಳಿಕೆ ನೀಡಿದ್ದರು. ಈ ಬಾರಿಯ ಪತ್ತನಾಜೆ ಸೇವೆಯ ಬಳಿಕ ತನ್ನನ್ನು ಭೇಟಿಯಾಗಿಲ್ಲ. ಪತ್ತನಾಜೆ ಸೇವೆ ಆಟಕ್ಕೆ ಬಂದಿಲ್ಲ. ದೇವಳದಲ್ಲಿ ಅಷ್ಟಮಿಯಂದು ನಡೆಯುವ ಆಟಕ್ಕೆ ಎಲ್ಲಾ ಕಲಾವಿದರು ಕಡ್ಡಾಯವಾಗಿ ಭಾಗವಹಿಸತಕ್ಕದ್ದು. ಅಸಾಧ್ಯವಾದಲ್ಲಿ ತಿಳಿಸತಕ್ಕದ್ದು, ಅದಕ್ಕೂ ಬರಲಿಲ್ಲ. ಸೇವೆಯಾಟ ಹೊರಡುವ ದಿನದಂದು ತಾಳ ಮದ್ದಳೆಗೂ ಬಂದಿಲ್ಲ, ಚೌಕಿ ಪೂಜೆಗೂ ಬಂದಿಲ್ಲ. ಪ್ರಥಮ ಸೇವೆಯಾಟದ ದಿನ ರಾತ್ರಿ 9 ಗಂಟೆಗೆ ಎಲ್ಲಾ ಆರು ಮೇಳಗಳ ಕಲಾವಿದರನ್ನು ಹಂಚಿಕೆ ಮಾಡಿ ಮಾಹಿತಿ ನೀಡುವ ಕ್ರಮವಿದ್ದು, ಪಟ್ಲ ಸತೀಶ್‌ ಶೆಟ್ಟಿಯವರನ್ನು ಕ್ಯೆ ಬಿಡಲಾಗಿತ್ತು. ಈ ಬಗ್ಗೆ ಪ್ರಬಂಧಕರ ಮೂಲಕ ತಿಳಿಸಿದ್ದು ಆದರೂ ರಂಗಸ್ಥಳಕ್ಕೆ ಆಗಮಿಸಿ ದೇವಳದ, ಮೇಳದ ತೇಜೋವಧೆ ಮಾಡುವ ಕಾರ್ಯ ಮಾಡಿದ್ದಾರೆ. ಕಟೀಲು ಮೇಳ ಸೇವಾ ಕರ್ತರನ್ನು, ಕಲಾವಿದರನ್ನು ಗೌರವಿಸುತ್ತಿದ್ದು ಇದರಿಂದ ಜನಮನ್ನಣೆಗೊಂಡಿದೆ.

ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರಿಗೆ ಇಂದು ಜನ್ಮ ದಿನದ ಸಂಭ್ರಮ

ಎರಡು ವರ್ಷಗಳ ಹಿಂದೆ ಬಂಡಾಯವೆದ್ದ ಕಲಾವಿದರ ಹಿಂದೆ ಅವರ ಪಾತ್ರವಿದ್ದು, 7 ಮಂದಿ ಬಂಡಾಯ ಕಲಾವಿದರನ್ನು ತಮ್ಮ ಟ್ರಸ್ಟ್‌ ಮೂಲಕ ಸನ್ಮಾನಿಸಿದ್ದಾರೆ. ಮೇಳದ ಹಿತದೃಷ್ತಿಯಿಂದ ದೇವಳದ ಆಡಳಿತ ಮಂಡಲಿ ಜೊತೆ ಚರ್ಚಿಸಿ ಕೈ ಬಿಡುವ ಬಗ್ಗೆ ಒಮ್ಮತದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆಯೆಂದು ಅವರು ಹೇಳಿದರು.

ಗೋಷ್ಠಿಯಲ್ಲಿ ಮಾತನಾಡಿದ ದೇವಳದ ಅರ್ಚಕ ಶ್ರೀಹರಿನಾರಾಯಣ ಆಸ್ರಣ್ಣ, ಕಟೀಲು ಮೇಳದ ಪ್ರಥಮ ಸೇವಾಯಾಟದ ಸಂದರ್ಭ ಆಸ್ರಣ್ಣ ಬಂಧುಗಳು ಉಪಸ್ಥಿತರಿರಲಿಲ್ಲ. ಪ್ರತಿ ಬಾರಿ ಆಸ್ರಣ್ಣ ಮನೆತನದ ಹೆಸರು ಕೆಡಿಸುವ ಕಾರ್ಯ ನಿರಂತರ ನಡೆಯುತ್ತಿದೆ. ಮೇಳ ಹೊರಡುವ ಸಂದರ್ಭದಲ್ಲಿ ಹಿಮ್ಮೇಳದ ಎಲ್ಲಾ ಕಲಾವಿದರು ಹಾಗೂ ಮುಮ್ಮೇಳದ ಹಾಸ್ಯಗಾರ ಕಡ್ಡಾಯ ಹಾಜರಿರತಕ್ಕದ್ದು ಹಾಗೂ ಪ್ರಸಾದ ಸ್ವೀಕರಿಸುವ ಪದ್ದತಿಯಿದೆ. ಆ ಸಂದರ್ಭದಲ್ಲಿ ಪಟ್ಲ ಉಪಸ್ಥಿತರಿರಲಿಲ್ಲ. ಗೆಜ್ಜೆ ಕಟ್ಟುವ ಸಂದರ್ಭದಲ್ಲಿ, ಚೌಕಿ ಪೂಜೆ ಸಂದರ್ಭದಲ್ಲಿ ಕೂಡ ಬಾರದೇ ಮೇಳದ ಪ್ರಬಂಧಕರು ಅವರನ್ನು ಕ್ಯೆ ಬಿಡಲಾಗಿದೆಯೆಂದು ಹೇಳಿದ ಬಳಿಕವು ರಾತ್ರಿ ಪೂರ್ವ ನಿಯೋಜಿತವಾಗಿ ಪದ್ಯ ಹೇಳಲು ಬಂದಿದ್ದು, ಅವರ ಉದ್ದೇಶವನ್ನುಸ್ಪಷ್ಟಪಡಿಸುತ್ತದೆ. ಇಂದು (ಭಾನುವಾರ) ಮುಂಬೈಯಲ್ಲಿ ಸಂಜೆ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಅವರ ಪೂರ್ವ ನಿಯೋಜಿತ ತಯಾರಿಗೆ ಸಾಕ್ಷಿಯಾಗಿದೆ. ಮೇಳದ ವಿವಾದ ನ್ಯಾಯಾಲಯದಲ್ಲಿ ಇದ್ದು ಇತ್ತೀಚೆಗೆ ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿ ಏಲಂ ಬಗ್ಗೆ ಆದೇಶ ಹೊರಡಿಸಿದಾಗ, ದೇವಳದ ಹಾಗೂ ಮೇಳದ ವಿರುದ್ಧ ಹೇಳಿಕೆ ನೀಡಿ ಅಶಿಸ್ತು ಪ್ರದರ್ಶಿಸಿದ್ದಾರೆ.ದೇವಳದ ಹಾಗೂ ಮೇಳದ ವಿರುದ್ದ ಹೇಳಿಕೆ ನೀಡಿರುವುದರಿಂದ ಅವರನ್ನು ಕೈ ಬಿಡಲಾಗಿದ್ದು, ಬದಲಿ ವ್ಯವಸ್ಥೆ ಆಗಿದ್ದು ಈ ಬಾರಿ ಅವರಿಗೆ ಅವಕಾಶ ಸಾಧ್ಯವಿಲ್ಲ. ಒಂದು ವೇಳೆ ಕ್ಷಮೆ ಯಾಚಿಸಿದಲ್ಲಿ ತೆಗೆದುಕೊಳ್ಳುವ ಸಾಧ್ಯತೆಯಿದೆಯೇ ಎಂಬ ಬಗ್ಗೆ ಸಂಚಾಲಕರು ಮತ್ತು ಆಡಳಿತ ಮಂಡಳಿ ನಿರ್ಧರಿಸುತ್ತದೆಯೆಂದು ಅವರು ಹೇಳಿದ್ದಾರೆ.

ಬ್ರಶ್ ಮಾಡಿದ ವ್ಯಕ್ತಿ ಸಾವು: ಟೂತ್ ಪೇಸ್ಟ್ ಎಂದು ಈತ ಬ್ರಶ್‌ಗೆ ಹಾಕಿದ್ದೇನು..?

ಗೋಷ್ಠಿಯಲ್ಲಿ ಮಾತನಾಡಿದ ಕಟೀಲು ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಸನತ್‌ ಕುಮಾರ್‌ ಶೆಟ್ಟಿಕೊಡೆತ್ತೂರುಗುತ್ತು, ಕಟೀಲಿನ ಮೇಳ ಹೊರಡುವ ಸಂದರ್ಭದಲ್ಲಿ ಎಲ್ಲಾ ಕಲಾವಿದರು ಉಪಸ್ಥಿತರಿರತಕ್ಕದ್ದು, ಅಶಿಸ್ತಿನ ಹಿನ್ನೆಲೆಯಲ್ಲಿ ಹಾಗೂ ದೇವಳದ ಮತ್ತು ಮೇಳದ ವಿರುದ್ದ ಪತ್ರಿಕಾ ಹೇಳಿಕೆ ನೀಡಿದ್ದು ಈ ಹಿನ್ನೆಲೆಯಲ್ಲಿ ಕ್ರಮ ತೆಗೆದೊಕೊಳ್ಳಲಾಗಿದೆ. ಮೇಳದ ಬಗ್ಗೆ ಸಂಚಾಲಕರಿಗೆ ಸಂಪೂರ್ಣ ಹಕ್ಕಿದ್ದು ಪಟ್ಲ ಅವರು ಪಿತೂರಿಯನ್ನು ನಡೆಸಿ ದೇವಳದ ಹೆಸರನ್ನು ಹಾಳು ಮಾಡುವ ಹಾಗೂ ಭಕ್ತರನ್ನು ಎತ್ತಿ ಕಟ್ಟುವ ಕಾರ್ಯ ಮಾಡಿದ್ದಾರೆಂದು ಅವರು ತಿಳಿಸಿದ್ದಾರೆ.

ಮಂಗಳೂರು: 1 ದಿನದಲ್ಲಿ 750ಕ್ಕೂ ಅಧಿಕ ಆಧಾರ್‌ ತಿದ್ದುಪಡಿ..!

ಗೋಷ್ಠಿಯಲ್ಲಿ ಕಟೀಲು ದೇವಳದ ಅನುವಂಶಿಕ ಮೊಕ್ತೇಸರರಾದ ವಾಸುದೇವ ಆಸ್ರಣ್ಣ, ಅರ್ಚಕರುಗಳಾದ ಲಕ್ಷ್ಮೀ ನಾರಾಯಣ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಕಮಲಾದೇವಿ ಆಸ್ರಣ್ಣ, ಸದಾನಂದ ಆಸ್ರಣ್ಣ, ಮೇಳದ ಪ್ರಬಂಧಕ ರಘುನಾಥ ಶೆಟ್ಟಿ, ಸುಧೀರ್‌ ಶೆಟ್ಟಿಕೊಡೆತ್ತೂರು ಗುತ್ತು ಮತ್ತಿತರಿದ್ದರು.

click me!