ಸ್ವಂತ ಕಾರು ಮಾರಿ ಕನಸಿನ ಬೆನ್ನೇರಿ ಹೊರಟ ಕೇರಳ ಯುವಕರ ಕಾಶ್ಮೀರ ಪ್ರಯಾಣ

By Ravi Nayak  |  First Published Jul 26, 2022, 4:05 PM IST

ಕೆಲವರು ತಮ್ಮ ಕನಸಿಗೋಸ್ಕರ ಯಾವ ಹಂತದ ತ್ಯಾಗಕ್ಕೂ ಸಿದ್ಧರಿರುತ್ತಾರೆ. iಇಲ್ಲಿ ತಮ್ಮ ಕನಸನ್ನು ಈಡೇರಿಸಿಕೊಳ್ಳಲು ಸ್ವಂತ ಕಾರನ್ನು ಮಾರಿ ಪ್ರವಾಸಕ್ಕೆ ಹೊರಟು ನಿಂತಿದ್ದಾರೆ. ಯಾರವರು? ಮುಂದೆ ಓದಿ


ವರದಿ- ಶಶಿಧರ ಮಾಸ್ತಿಬೈಲು, ಏಷಿಯಾನೆಟ್ ಸುವರ್ಣ ನ್ಯೂಸ್

ಉಡುಪಿ (ಜು.26) : ಕೆಲವರು ತಮ್ಮ ಕನಸಿಗೋಸ್ಕರ ಯಾವ ಹಂತದ ತ್ಯಾಗಕ್ಕೂ ಸಿದ್ಧರಿರುತ್ತಾರೆ. ಕನಸಿನ ಸಾಕಾರಕ್ಕೆ ಹೊರಟ ಇಂತಹವರ ಬಗ್ಗೆ ಸಮಾಜ ಇದೆಂಥಾ ಹುಚ್ಚಪ್ಪಾ ಅಂದರೂ ಪರವಾಗಿಲ್ಲ, ಇವರು ಕನಸಿನ ಬೆನ್ನೇರಿ ಹೊರಟೇ ಬಿಡುತ್ತಾರೆ. ಇದು ಕನಸು ನನಸು ಮಾಡಲು ಹೊರಟ ಯುವಕರ ಕತೆ..... ಕೆಲವರಿಗೆ ಪ್ರವಾಸ,  ಯಾತ್ರೆ ಅನ್ನೋದು ಜೀವನದ ದೊಡ್ಡ ಕನಸು...ಕೇರಳದ ಪಾಲಕ್ಕಾಡ್ ನ ಇಬ್ಬರು ಯುವಕರು ಲಡಾಕ್ ಯಾತ್ರೆ ಮಾಡಬೇಕು ಎಂದು ಕನಸು ಹೊತ್ತಿದ್ದರು. ತಮ್ಮ ಕನಸು ನನಸು ಮಾಡಿಕೊಳ್ಳಲು ಅನೇಕ ಪ್ರಯತ್ನ ನಡೆಸಿದ್ದರು .ತಮ್ಮ ಲಡಾಕ್ ಯಾತ್ರೆಯ ಕನಸನ್ನು ನನಸಾಗಿಸಲು ಇದೀಗ ತಮ್ಮ ವಾಹನವನ್ನೇ ಅಡವಿಟ್ಟು ಸಂಚಾರ ಆರಂಭಿಸಿದ್ದಾರೆ!

Latest Videos

undefined

ಸುರೇಶ್ ಮತ್ತು ವಾಸು.(Suresh and Vasu) ಎಂಬವರೇ ಈ ಕನಸಿನ ಬೇಟೆಗಾರರು.  ಕೇರಳದ ಪಾಲಕ್ಕಾಡ್ ಮೂಲದ ಈ ಯುವಕರಿಗೆ ರಿಕ್ಷಾ(Rikshaw) ಬಾಡಿಗೆ ಮಾಡುವುದೇ ಜೀವನೋಪಾಯದ  ವೃತ್ತಿ. ಕಳೆದ ಮೂರು ವರ್ಷಗಳಿಂದ ಲಡಾಕ್ ಯಾತ್ರೆಯ ಕನಸು ಕಂಡಿದ್ರು, ಹಾಗೂ ಹೀಗೂ ಸ್ವಲ್ಪ ಹಣ ಸಂಗ್ರಹಿಸಿದ್ರು. ಆದ್ರೆ ಕೊರೊನಾ ಬಂದು ಕನಸು ನುಚ್ಚುನೂರಾಯಿತು. ಲಡಾಕ್ ಪ್ರವಾಸ ಸಾಧ್ಯವಾಗಲಿಲ್ಲ.

ಕುಟುಂಬದಜೊತೆ Tour ಹೋಗಲು ಈ ಪ್ಲೇಸ್ ಬೆಸ್ಟ್!

ಇದೀಗ ತಮ್ಮ ಕನಸಿಗಾಗಿ ತಾವು ದುಡಿಯುತ್ತಿರುವ ರಿಕ್ಷಾ ವನ್ನೇ ಪ್ರಯಾಣ ರಥ ಮಾಡಿಕೊಂಡು ಹೊರಟೇಬಿಟ್ಟಿದ್ದಾರೆ. ಈ ವರ್ಷವೇ ತಮ್ಮ ಕನಸು ನನಸು ಮಾಡಬೇಕೆಂದು  ನಿಶ್ಚಯ ಮಾಡಿ ಪಣತೊಟ್ಟಿದ್ದಾರೆ. ಪ್ರವಾಸದ ಆರಂಭದಲ್ಲೂ  ಹಣದ ಸಮಸ್ಯೆ ಆಗಿತ್ತು.. ಈ ಕಾರಣದಿಂದ ತಮ್ಮಲ್ಲಿದ್ದ ಒಂದು ಕಾರನ್ನು ಬ್ಯಾಂಕ್ನಲ್ಲಿ ಅಡವಿಟ್ಟು , ಹಣ ಪಡೆದು ಸಂಚಾರ ಆರಂಭಿಸಿದ್ದಾರೆ.

ತಮ್ಮದೇ ರಿಕ್ಷಾದಲ್ಲಿ ಯಾತ್ರೆ ಆರಂಭಿಸಿದ್ದಾರೆ . ಸದ್ಯ ಇವರ ಪ್ರವಾಸ ಕೇರಳದ ವಿವಿಧ ನಗರಗಳನ್ನು ದಾಟಿ ಮಂಗಳೂರು(Mangaluru) ಮೂಲಕ ಉಡುಪಿ(Udupi)ಗೆ ಬಂದು ತಲುಪಿದೆ. ಉಡುಪಿಗೆ ಆಗಮಿಸಿರುವ ಸುರೇಶ್ ಮತ್ತು ವಾಸು , ಕೃಷ್ಣನ ದರ್ಶನ ಪಡೆದಿದ್ದಾರೆ. ಇಲ್ಲಿಂದ ಮುಂದೆ ಮುರುಡೇಶ್ವರ(Murudeshwar) ದೇವಸ್ಥಾನಕ್ಕೆ  ಭೇಟಿ ನೀಡಲಿದ್ದಾರೆ. ಮಾರ್ಗ ಮಧ್ಯದಲ್ಲಿ ಸಿಗುವ ದೇವಸ್ಥಾನಗಳಲ್ಲಿ ದರ್ಶನ ಕೈಗೊಳ್ಳುತ್ತಾರೆ, ಅಲ್ಲೇ ವಾಸ್ತವ್ಯ ಹೂಡುತ್ತಾರೆ. ಪ್ರಸಾದ ಸ್ವೀಕರಿಸಿ ಮುಂದುವರೆಯುತ್ತಾರೆ. 

ದಾಲ್‌ ಸರೋವರದಲ್ಲಿ ತೇಲಾಡುವ ಪೋಸ್ಟ್‌ ಆಫೀಸ್‌

ಗೋವಾ, ಗುಜರಾತ್,  ರಾಜಸ್ಥಾನ್, ಪಂಜಾಬ್, ಕಾಶ್ಮೀರ್ ಮೂಲಕ ಸಂಚರಿಸಲಿದ್ದಾರೆ. ಮರಳಿ ಬರುವ ವೇಳೆ ದೆಹಲಿ, ಮಧ್ಯಪ್ರದೇಶ ಸಂದರ್ಶಿಸುವ ಯೋಜನೆ ಅವರದ್ದಾಗಿದೆ. .
ಏನೇ ಆಗಲಿ ಈ ಯುವಕರ ಸಾಹಸಕ್ಕೆ  ಹಾಗೂ ಪ್ರಯಾಣಕ್ಕೆ ಶುಭ ಹಾರೈಸೋಣ.. ಕನಸು ಕಾಣುವುದು ಮಾತ್ರವಲ್ಲ ಅದನ್ನು ನನಸಾಗಿಸುವ ಛಲಬೇಕು ಅನ್ನೋದಕ್ಕೆ ಇದ್ದ ಕಾರನ್ನು ಮಾರಿ ಪ್ರಯಾಣ ಹೊರಟ ಈ ಯುವಕರೇ ಸ್ಪೂರ್ತಿ!

click me!