ಕಲಬುರಗಿಯಲ್ಲಿ 25 ವರ್ಷಗಳ ನಂತರ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ 11ನೇ ರಾಜ್ಯ ಸಮ್ಮೇಳನ ಆಯೋಜನೆಗೊಳ್ಳುತ್ತಿದೆ. ಖಣದಾಳ ಶ್ರೀಗುರು ವಿದ್ಯಾಪೀಠದ ಆವರಣದಲ್ಲಿ ಆ.1 ರಿಂದ 3 ದಿನಗಳ ಕಾಲ ಸಮ್ಮೇಳನ ನಡೆಯಲಿದೆ
ಕಲಬುರಗಿ (ಜು.26) : ಕಲಬುರಗಿಯಲ್ಲಿ 25 ವರ್ಷಗಳ ನಂತರ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ 11ನೇ ರಾಜ್ಯ ಸಮ್ಮೇಳನ ಆಯೋಜನೆಗೊಳ್ಳುತ್ತಿದೆ. ಇಲ್ಲಿನ ಖಣದಾಳ ಶ್ರೀಗುರು ವಿದ್ಯಾಪೀಠದ ಆವರಣದಲ್ಲಿ ಆ.1 ರಿಂದ 3 ದಿನಗಳ ಕಾಲ ಸಮ್ಮೇಳನ ನಡೆಯಲಿದೆ. ಸಮ್ಮೇಳನಕ್ಕಾಗಿ ಸ್ಥಳೀಯ ಜನವಾದಿ ಮಹಿಳಾ ಸಂಘದಿಂದ ಭರದ ಸಿದ್ಧತೆಗಳು ಸಾಗಿವೆ. ಸಮ್ಮೇಳನದ ಮುನ್ನಾದಿನ ಜು.31 ರಂದು ನಗರದಲ್ಲಿ ನೂರಾರು ಯುವತಿಯರಿಂದ ಬೈಕ್ ರಾರಯಲಿ ಹಾಗೂ ಸಮಾರೋಪದ ದಿನವಾದ ಆ.3ರಂದು ಸಾವಿರಾರು ಮಹಿಳೆಯರಿಂದ ಗಂಜ್‌ನಿಂದ ಜಗತ್‌ವರೆಗೂ ಬೃಹತ್ ರಾರಯಲಿ ನಡೆಯಲಿವೆ.
ಮಂಡ್ಯದ ಮಹಿಳೆಯರು ಸ್ಟ್ರಾಂಗು ಗುರೂ
1995ರಲ್ಲಿ ಕಲಬುರಗಿ ಜನವಾದಿ ಮಹಿಳಾ ಸಂಘದ ರಾಜ್ಯ ಸಮ್ಮೇಳನಕ್ಕೆ ಆತಿಥ್ಯ ನೀಡಿತ್ತು. ಸುದೀರ್ಘ ಅವಧಿಯ ನಂತರ ಬದಲಾದ ಕಾಲಘಟ್ಟದಲ್ಲಿ ಇದೀಗ ಸಮ್ಮೇಳನ ಕಲಬುರಗಿಯಲ್ಲಿ ನಡೆಯುತ್ತಿದೆ. ಮಹಿಳೆಯರನ್ನು ಕಾಡುತ್ತಿರುವ ಹತ್ತು ಹಲವು ಸಮಸ್ಯೆಗಳಿಗೆ ಈ ಸಮ್ಮೇಳನ ಧ್ವನಿಯಾಗಲಿದೆ ಎಂದು ಜೆಎಂಎಸ್‌ನ ರಾಜ್ಯ ಉಪಾಧ್ಯಕ್ಷೆ ಕೆ.ನೀಲಾ, ಸಮ್ಮೇಳನದ ಸ್ವಾಗತ ಸಮೀತಿ ಅಧ್ಯಕ್ಷೆ ಡಾ. ಖನೀಜ್ ಫಾತೀಮಾ, ಪ್ರ. ಕಾಯದರ್ಶಿ ಡಾ. ಮೀನಾಕ್ಷಿ ಬಾಳಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾನಾಡಿದ ಅವರು ದೇಶಾದ್ಯಂತ ಜನವಾದಿಗೆ 2.40 ಕೋಟಿ ಸದಸ್ಯರಿದ್ದಾರೆ. ರಾಜ್ಯದ ಜಿಲ್ಲೆಗಳಲ್ಲಿ ಜಿಲ್ಲಾ ಸಮಿತಿ ಇದೆ, ಉಳಿದಂತೆ ಘಟಕಗಳಿವೆ. ರಾಜ್ಯದಲ್ಲೂ 1.50 ಲಕ್ಷ ಸದಸ್ಯರಿದ್ದಾರೆ. ಕಲಬುರಗಿಯಲ್ಲಿ 105 ಘಟಕಗಳು, 5 ನಗರ ಸಮಿತಿಳೊಂದಿಗೆ ಜನವಾದಿ ಮಹಿಳಿಯರು ಕಾರ್ಯೋನ್ಮುಖರಾಗಿದ್ದಾರೆ ಎಂದರು.
350ಕ್ಕೂ ಹೆಚ್ಚು ಮಹಿಳಾ ಪ್ರತಿನಿಧಿಗಳು ಭಾಗಿ:
ಸಮ್ಮೇಳನದ ಅಂಗವಾಗಿ ಅಧಿವೇಶನಗಳು ನಡೆಯುತ್ತವೆ. 350ಕ್ಕೂ ಹೆಚ್ಚು ಮಹಿಳಾ ಪ್ರತಿನಿಧಿಗಳು ಪಾಲ್ಗೊಳ್ಳುತ್ತಿದ್ದಾರೆ. ಜೆಎಂಎಸ್‌ನ ರಾಷ್ಟ್ರೀಯ ಪ್ರ.ಕಾರ್ಯದರ್ಶಿ ಮರಿಯಾ ಧಾವಡೆ, ರಾಷ್ಟ್ರೀಯ ಕಾರ್ಯದರ್ಶಿ ವಾಸುಕಿ ತಮಿಳುನಾಡು ಸಮ್ಮೇಳನದಲ್ಲಿ ಪಾಲ್ಗೊಳ್ಳುತ್ತಿರುವ ಪ್ರಮುಖರಾಗಿದ್ದಾರೆ. ಸ್ಥಳೀಯವಾಗಿ ಡಾ. ಖನೀಜ ಫಾತೀಮಾ ನೇತೃ$್ವದಲ್ಲಿ ಸ್ವಾಗತ ಸಮೀತಿ ರಚನೆಯಾಗಿದ್ದು ಸಮ್ಮೇಳನ ಯಶಸ್ಸಿಗೆ ಭರದ ತಯ್ಯಾರಿ ಸಾಗಿದೆ ಎಂದು ಕೆ. ನೀಲಾ ಹೇಳಿದರು.
ಭ್ರಷ್ಟ ಅಧಿಕಾರಿ ವಿರುದ್ಧ ಕ್ರಮಕ್ಕೆ ಆಗ್ರಹ: ತಾಲೂಕು ಪಂಚಾಯತ್ ಕಚೇರಿಗೆ ಬೀಗ ಜಡಿದ ಮಹಿಳೆಯರು
ಜೆಎಂಎಸ್‌ನ ಸ್ಥಳೀಯ ಮುಖಂಡರಾದ ಪದ್ಮಿನಿ ಕಿರಣಗಿ, ಚಂದಮ್ಮಾ ಗೋಳಾ, ಜಗೇವಿ ನೂಲಕರ್ ಸುದ್ದಿಗೋಷ್ಠಿಯಲ್ಲಿ ಸಮ್ಮೇಳನದ ತಯ್ಯಾರಿಯ ಬಗ್ಗೆ ಮಾಹಿತಿ ನೀಡಿ ಕಲಬುರಗಿ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಮ್ಮೇಳನದ ಯಶಸ್ಸಿಗೆ ಸಹಕರಿಸಬೇಕೆಂದು ಕರೆ ನೀಡಿದ್ದಾರೆ.
ದೇಶದಲ್ಲಿ, ರಾಜ್ಯದಲ್ಲಿ ಧರ್ಮಾಂಧತೆ ಹೆಚ್ಚುತ್ತಿದ್ದು,ಇದು ಅಪಾಯರಿ ವಾತಾವರಣ ಹುಟ್ಟು ಹಾಕುತ್ತಿದೆ. ಕಲಬುರಗಿಯ ಸಮ್ಮೇಳನದಲ್ಲಿ ಈ ಸೂಕ್ಷ್ಮ ವಿಚಾರ ಪ್ರಸ್ತಾಪ ಮಾಡಿ ಚರ್ಚಿಸಿ ಸಾಮರಸ್ಯ, ಸಾಂತಿ, ಸೌಹಾರ್ದತೆ ಬೆಳೆಸುವಂತಹ ಪೂರಕ ನಿಣÜರ್‍ಯಗಳನ್ನು ಕೈಗೊಳ್ಳುತ್ತೇವೆ.
ಕೆ.ನೀಲಾ, ರಾಜ್ಯ ಉಪಾಧ್ಯಕ್ಷೆ, ಜನವಾದಿ ಮಹಿಳಾ ಸಂಘ
ಮಹಿಳೆಯರು ಸಾಕಷ್ಟುದೌರ್ಜನ್ಯಗಳಿಗೆ ತುತ್ತಾಗುತ್ತಿದ್ದಾರೆ. ಮಹಿಳೆಯಯರನ್ನು ಕಾಡುತ್ತಿರುವ ಸಂಕಷ್ಟಗಳನ್ನೆಲ್ಲ ಪಟ್ಟಿಮಾಡಿ ಅವುಗಳಿಗೆ ಕಾರಣ, ಪರಿಹಾರೋಪಾಯಗಳನ್ನೆಲ್ಲ ಚರ್ಚಿಸಲು ಸಮ್ಮೇಳನದಲ್ಲಿ ಆದ್ಯತೆ ನೀಡುತ್ತೇವೆ. ಮುಂದೆ ಅಂತಹ ಯೋಜನೆ ರೂಪಿಸಿ ಕಾರ್ಯೋನ್ಮುಖರಾಗುತ್ತೇವೆ.
ಡಾ. ನೀಜ್ ಫಾತೀಮಾ, ಸ್ವಾಗತ ಸಮಿತಿ ಅಧ್ಯಕ್ಷತೆ, ಕಲಬುರಗಿ
ಕೂಲಿ ಕಾರ್ಮಿಕರಿಂದ ಹಿಡಿದು ಉನ್ಯಾಸಕರು, ಚಿಂತಕರು ಸೇರಿದಂತೆ ಎಲ್ಲಾ ವರ್ಗದ ಮಹಿಳೆಯರು ಸಮ್ಮೇಳನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಸಾಂಸ್ಕೃತಿಕ ರಾಜಕಾರಣ, ಮಹಿಳಾ ಪ್ರಶ್ನೆ ವಿಚಾರ ಸಂಕಿರಣ ನಡೆಯುತ್ತದೆ. ಅರುಣ ಜೋಳದ ಕೂಡಗಿ ಪ್ರಬಂಧ ಮಂಡಿಸುತ್ತಾರೆ. ಎಲ್ಲರೂ ಚರ್ಚೆ ಮಾಡಿ ನಿಣಯಕ್ಕೆ ಬರುತ್ತೇವೆ.
ಡಾ. ಮೀನಾಕ್ಷಿ ಬಾಳಿ, ಪ್ರ.ಕಾರ್ಯದರ್ಶಿ, ಸ್ವಾಗತ ಸಮಿತಿ.