ಸ್ವಚ್ಛ ಭಾರತ್ ದಿವಸ್: ರಾಜ್ಯದಿಂದ 200 ಸಾಧಕರು ಆಯ್ಕೆ

By Web DeskFirst Published Sep 25, 2019, 10:06 AM IST
Highlights

ಸ್ವಚ್ಛತೆಯ ನಿಟ್ಟಿನಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ ಸಾಧಕರನ್ನು ರಾಷ್ಟ್ರ ಮಟ್ಟದಲ್ಲಿ ಗುರುತಿಸಲು ಕೇಂದ್ರ ನಿರ್ಧಾರ| ಈ ಸಾಧಕರ ಪಟ್ಟಿಯಲ್ಲಿ ರಾಜ್ಯದ 200 ಮಂದಿ ಸ್ವಚ್ಛತಾ ಸಾಧಕರು| ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ 150 ನೇ ಜನ್ಮದಿನದ ಪ್ರಯುಕ್ತ ಗುಜರಾತ್‌ನ ಸಬರಮತಿ ಆಶ್ರಮದಲ್ಲಿ ನಡೆಯುವ ‘ಸ್ವಚ್ಛ ಭಾರತ್ ದಿವಸ್’ ಕಾರ್ಯಕ್ರಮ| ಅ.2 ರಂದು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆ| 

ಮಂಗಳೂರು:(ಸೆ.25)  ಸ್ವಚ್ಛತೆಯ ನಿಟ್ಟಿನಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ ಸಾಧಕರನ್ನು ರಾಷ್ಟ್ರ ಮಟ್ಟದಲ್ಲಿ ಗುರುತಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. 


ಈ ಸಾಧಕರ ಪಟ್ಟಿಯಲ್ಲಿ ರಾಜ್ಯದ 200  ಮಂದಿ ಸ್ವಚ್ಛತಾ ಸಾಧಕರು ಸೇರ್ಪಡೆಯಾಗಲಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 


ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ 150 ನೇ ಜನ್ಮದಿನದ ಪ್ರಯುಕ್ತ ಗುಜರಾತ್‌ನ ಸಬರಮತಿ ಆಶ್ರಮದಲ್ಲಿ ಅ.2 ರಂದು ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ‘ಸ್ವಚ್ಛ ಭಾರತ್ ದಿವಸ್’ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದ ವರದಿಯಲ್ಲಿ ರಾಜ್ಯದ 200 ಮಂದಿಯ ಸಾಧನೆಯ ವಿವರ ಸೇರ್ಪಡೆಯಾಗಲಿದೆ.

click me!