ಕೆಪಿಎಲ್ ನಲ್ಲಿ ಬೆಟ್ಟಿಂಗ್ ನಡೆಸಿದ ಆರೋಪದ ಮೇಲೆ ಬೆಳಗಾವಿ ತಂಡದ ಮಾಲೀಕ ಅಲಿ ಅಶ್ಫಾಕ್ ತಾರ್ ಬಂಧನ| ಕೆಪಿಎಲ್‌ನ 8ನೇ ಆವೃತ್ತಿಯಲ್ಲಿ ದುಬೈ ಮೂಲದ ಬುಕ್ಕಿ ಜತೆ ಅಶ್ಫಾಕ್ ಅಲಿ ಬೆಟ್ಟಿಂಗ್ ನಡೆಸಿರುವುದಕ್ಕೆ ಪುರಾವೆಗಳು ಲಭಿಸಿವೆ| ಇದುವರೆಗೆ ಪ್ರಕರಣದಲ್ಲಿ ಯಾವುದೇ ಆಟಗಾರರನ ಪಾತ್ರ ಕಂಡು ಬಂದಿಲ್ಲ| ಇನ್ನು ಕೆಲವೇ ದಿನಗಳಲ್ಲಿ ಕೃತ್ಯದ ಸ್ಪಷ್ಟ ಚಿತ್ರಣ ಸಿಗಲಿದೆ ಎಂದ ಅಪರಾಧ ವಿಭಾಗದ ಜಂಟಿ ಆಯುಕ್ತ ಸಂದೀಪ್ ಪಾಟೀಲ್|
ಬೆಂಗಳೂರು:(ಸೆ. 25) ನಾಲ್ಕು ದಿನಗಳ ನಿರಂತರ ವಿಚಾರಣೆ ಬಳಿಕ ಕರ್ನಾಟಕ ಪ್ರಿಮೀಯರ್ ಲೀಗ್ (ಕೆಪಿಎಲ್)ನಲ್ಲಿ ಬೆಟ್ಟಿಂಗ್ ನಡೆಸಿದ ಆರೋಪದ ಮೇಲೆ ಬೆಳಗಾವಿ ಪ್ಯಾಂಥರ್ಸ್ ತಂಡದ ಮಾಲೀಕ ಅಲಿ ಅಶ್ಫಾಕ್ ತಾರ್‌ನನ್ನು ಮಂಗಳವಾರ ಸಿಸಿಬಿ ಬಂಧಿಸಿದೆ.
ಪ್ರಸಕ್ತ ಋತುವಿನಲ್ಲಿ ಮುಗಿದ ಕೆಪಿಎಲ್‌ನ 8ನೇ ಆವೃತ್ತಿಯಲ್ಲಿ ದುಬೈ ಮೂಲದ ಬುಕ್ಕಿ ಜತೆ ಅಶ್ಫಾಕ್ ಅಲಿ ಬೆಟ್ಟಿಂಗ್ ನಡೆಸಿರುವುದಕ್ಕೆ ಪುರಾವೆಗಳು ಲಭಿಸಿವೆ. ಆದರೆ ಇದುವರೆಗೆ ಪ್ರಕರಣದಲ್ಲಿ ಯಾವುದೇ ಆಟಗಾರರನ ಪಾತ್ರ ಕಂಡು ಬಂದಿಲ್ಲ. ಈ ಬಗ್ಗೆ ತನಿಖೆ ಮುಂದುವರಿಸಿದ್ದೇವೆ ಎಂದು ಜಂಟಿ ಆಯುಕ್ತ (ಅಪರಾಧ) ಸಂದೀಪ್ ಪಾಟೀಲ್ ಆವರು ತಿಳಿಸಿದ್ದಾರೆ.
undefined
KPL ಫಿಕ್ಸಿಂಗ್; ನಾಲ್ವರು ಕ್ರಿಕೆಟಿಗರಿಗೆ CCB ಸಮನ್ಸ್!
ಕಳೆದ ಶುಕ್ರವಾರ ಕೆಪಿಎಲ್‌ನಲ್ಲಿ ಮ್ಯಾಚ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ನಡೆಸಿರುವ ಅನುಮಾನದ ಮೇರೆಗೆ ಅಲಿಯನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದರು. ಸತತ ನಾಲ್ಕು ದಿನಗಳ ಸುದೀರ್ಘ ವಿಚಾರಣೆ ನಡೆಸಿದ ಅಧಿಕಾರಿಗಳು, ಅಂತಿಮವಾಗಿ ಅಶ್ಫಾಕ್ ಅಲಿಯನ್ನು ಬಂಧನಕ್ಕೊಳಪಡಿಸಿದ್ದಾರೆ.
ಪ್ರತಿ ಪಂದ್ಯದಲ್ಲೂ ಬೆಟ್ಟಿಂಗ್‌ನಲ್ಲಿ:
ಕೆಪಿಎಲ್‌ನಲ್ಲಿ ಬೆಳಗಾವಿ ತಂಡ ಆಡಿದ ಪ್ರತಿಯೊಂದು ಪಂದ್ಯದಲ್ಲೂ ಅಲಿ ಬೆಟ್ಟಿಂಗ್ ನಡೆಸಿದ್ದಾನೆ. ಪಂದ್ಯದಲ್ಲಿ ಟಾಸ್ ಆಯ್ಕೆ, ಆಟಗಾರರನ್ನು ಫೀಲ್ಡಿಗಿಳಿಸುವುದು ಸೇರಿದಂತೆ ಪ್ರತಿಯೊಂದು ಹಂತದಲ್ಲಿ ಸಹ ಅಲಿ ಪಾತ್ರವಿದೆ. ದುಬೈ ಮೂಲದ ಬುಕ್ಕಿ ಜತೆ ಆತ ಸಂಪರ್ಕ ಹೊಂದಿ ಬೆಟ್ಟಿಂಗ್ ದಂಧೆ ನಡೆಸಿರುವುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಲಿ ಸಂಪರ್ಕದಲ್ಲಿ 12 ಆಟಗಾರರು:
ಅಶ್ಫಾಕ್ ಅಲಿಗೆ ತನ್ನ ತಂಡ ಮಾತ್ರವಲ್ಲದೆ ಇತರೆ ತಂಡಗಳ ಜತೆಯೂ ನಂಟು ಇತ್ತು. ಆತನೊಂದಿಗೆ ನಿಕಟ ಸಂಪರ್ಕ ಹೊಂದಿದ್ದ 12 ಮಂದಿ ಕೆಪಿಎಲ್ ಆಟಗಾರರನ್ನು ಸಹ ವಿಚಾರಣೆ ನಡೆಸಿದ್ದೇವೆ. ಆದರೆ ತನಿಖೆಯಲ್ಲಿ ಆಟಗಾರರು ಫಿಕ್ಸಿಂಗ್ ಬಗ್ಗೆ ಬಾಯ್ಬಿಟ್ಟಿಲ್ಲ. ಬೆಟ್ಟಿಂಗ್ ಕುರಿತು ಕೆಲವು ಮಾಹಿತಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
15 ಲಕ್ಷ ಪತ್ತೆ, ಪರಿಶೀಲನೆ ಪ್ರಗತಿ:
ಇದೇ ವರ್ಷದ ಆಗಸ್ಟ್ 14 ರಿಂದ 30 ರವರೆಗೆ ಕೆಪಿಎಲ್ ಟೂರ್ನಿ ನಡೆದಿತ್ತು. ಈ ಟೂರ್ನಿಯಲ್ಲಿ ಅಲಿ 15 ಲಕ್ಷ ಬೆಟ್ಟಿಂಗ್ ನಡೆಸಿರುವುದು ಪತ್ತೆಯಾಗಿದ್ದು, ಈ ಬಗ್ಗೆ ಶೋಧ ಕಾರ್ಯ ಪ್ರಗತಿಯಲ್ಲಿದೆ. ಹೀಗಾಗಿ ಮುಂದಿನ ಹಂತದಲ್ಲಿ ಹಣದ ಮೊತ್ತವು ಹೆಚ್ಚಾಗಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
KPLಗೂ ಅಂಟಿದ ಮ್ಯಾಚ್ ಫಿಕ್ಸಿಂಗ್ ಭೂತ..? ಪ್ರಾಂಚೈಸಿ ಮಾಲೀಕ ವಶಕ್ಕೆ..!
ತನ್ನ ತಂಡ ಮಾತ್ರವಲ್ಲದೆ ಇತರೆ ತಂಡಗಳ ಜತೆಯೂ ನಂಟು ಇತ್ತು. ಆತನೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ೧೨ ಮಂದಿ ಕೆಪಿಎಲ್ ಆಟಗಾರರನ್ನು ಸಹ ವಿಚಾರಣೆ ನಡೆಸಿದ್ದೇವೆ. ಆದರೆ ತನಿಖೆಯಲ್ಲಿ ಆಟಗಾರರು ಫಿಕ್ಸಿಂಗ್ ಬಗ್ಗೆ ಬಾಯ್ಬಿಟ್ಟಿಲ್ಲ. ಬೆಟ್ಟಿಂಗ್ ಕುರಿತು ಕೆಲವು ಮಾಹಿತಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಬಗ್ಗೆ ಮಾಹಿತಿ ನೀಡಿದ ಅಪರಾಧ ವಿಭಾಗದ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಅವರು, ಕೆಪಿಎಲ್ ಟೂರ್ನಿಯಲ್ಲಿ ಬೆಟ್ಟಿಂಗ್ ನಡೆದಿರುವ ಬಗ್ಗೆ ಸಾಕ್ಷ್ಯಗಳು ಸಿಕ್ಕಿವೆ. ಆದರೆ ಮ್ಯಾಚ್ ಫಿಕ್ಸಿಂಗ್ ಬಗ್ಗೆ ಪುರಾವೆಗಳು ಲಭಿಸಿಲ್ಲ. ಪ್ರಕರಣದ ತನಿಖೆ ಮುಂದುವರೆದಿದ್ದು, ಇನ್ನು ಕೆಲವೇ ದಿನಗಳಲ್ಲಿ ಕೃತ್ಯದ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಹೇಳಿದರು.